RBI Update: ದೇಶದ ಇನ್ನೊಂದು ಪ್ರತಿಷ್ಠಿತ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI, ಹಣ ವಾಪಾಸ್ ಪಡೆಯುವಂತಿಲ್ಲ.

ಇನ್ನು ಬ್ಯಾಂಕಿನ ಲೈಸೆನ್ಸ್ ಅನ್ನು ಈಗ RBI ರದ್ದು ಮಾಡಿದೆ.

RBI Cancelled The Lucknow Urban Co-operative Bank Licence: ಇತ್ತೀಚಿನ ದಿನಗಳಲ್ಲಿ Bank Account ಎಷ್ಟು ಮುಖ್ಯ ಎನ್ನುವುದು ಎಲ್ಲರಿಗು ತಿಳಿದೇ ಇದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಒಂದಾದರು ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಬ್ಯಾಂಕ್ ಖಾತೆದಾರರು ಬ್ಯಾಂಕಿನ ಪ್ರತಿ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

ಇತ್ತೀಚೆಗಂತೂ Reserve Bank ಸಾಕಷ್ಟು ಬ್ಯಾಂಕ್ ಗಳಿಗೆ ನಿಯಮ ಉಲ್ಲಂಘಿಸಿದ ಕಾರಣ ದಂಡ ವಿಧಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ.ವಿವಿಧ ಬ್ಯಾಂಕುಗಳಿಗೆ ದಂಡ ವಿಧಿಸುವುದರ ಜೊತೆಗೆ RBI ಕೆಲ ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ಕೂಡ ರದ್ದು ಮಾಡಿದೆ.

 

Septembar ನಲ್ಲಿ 4 ಬ್ಯಾಂಕುಗಳ ಪರಣವನಾಗಿ ರದ್ದು
ಕರ್ನಾಟಕ ಒಂದೆರಡು ಬ್ಯಾಂಕ್ ನ ಪರವಾನಗಿಯನ್ನು ಕೂಡ RBI ರದ್ದು ಮಾಡಿದೆ. ಪರವಾನಗಿ ರದ್ದಾಗಿರುವ ಬ್ಯಾಂಕ್ ಗಳಲ್ಲಿ ಹಣ ಇಟ್ಟವರು ಚಿಂತಿಸುವಂತಾಗಿದೆ. RBI ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿ ಬ್ಯಾಂಕ್ ವಹಿವಾಟನ್ನು ಸಂಪೂರ್ಣವಾಗಿ ಮುಚ್ಚಲು ಮುಂದಾಗಿದೆ.

RBI ಪರವಾನಗಿ ರದ್ದು ಮಾಡಿರುವುದು ಬಾಂಕ್ ನ ಲಕ್ಷಾಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. Septembar ನಲ್ಲಿ ಈಗಾಗಲೇ ನಾಲ್ಕು ಬ್ಯಾಂಕುಗಳ ಪರವಾನಗಿಯನ್ನು RBI ರದ್ದುಗೊಳಿಸಿದೆ. ಈಗಾಗಲೇ ಕೇರಳ, ಕರ್ನಾಟಕ, ಉತ್ತರ ಪ್ರದೇಶ, ಮಹಾಸ್ತ್ರ ಬ್ಯಾಂಕುಗಳ ಪರವಾನಗಿ ರದ್ದುಗೊಳಿಸಿದ RBI ಇದೀಗ ಮತ್ತೊಂದು ಬ್ಯಾಂಕ್ ನ ವಿರುದ್ಧ ಕ್ರಮ ಕೈಗೊಂಡಿದೆ.

Join Nadunudi News WhatsApp Group

October New Rules
Image Source: Dailtelugu

ದೇಶದ ಇನ್ನೊಂದು ಪ್ರತಿಷ್ಠಿತ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI
ಕೇಂದ್ರ ಬ್ಯಾಂಕ್ ಇದೀಗ Lucknow Urban Co-operative Bank ಪರವಾನಗಿಯನ್ನು ರದ್ದು ಮಾಡಿದೆ. ಈ ಸಹಕಾರಿ ಬ್ಯಾಂಕ್ ನಲ್ಲಿ ಬಂಡವಾಳ ಮತ್ತು ಗಳಿಕೆಯ ಕೊರತೆ ಇರುವ ನಿಟ್ಟಿನಲ್ಲಿ ಆರ್ ಬಿಐ Septembar 30 ರಂದು ಈ ಕ್ರಮ ಕೈಗೊಂಡಿದೆ. ಇನ್ನು ಪರವಾನಗಿ ರದ್ದಾದ ನಂತರ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಮಾಡದಂತೆ ಬ್ಯಾಂಕ್ ಗೆ ಸೂಚನೆ ನೀಡಿದೆ.

 

ಇಷ್ಟು ಹಣ ಮಾತ್ರ ಹಿಂಪಡೆಯಲು ಅವಕಾಶ ನೀಡಿದ RBI
ಬ್ಯಾಂಕ್ ಅನ್ನು ಮುಚ್ಚಲು ಮತ್ತು ಸಹಕಾರಿ ಬ್ಯಾಂಕ್‌ಗೆ ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶವನ್ನು ಹೊರಡಿಸಲು ಉತ್ತರ ಪ್ರದೇಶದ ಸಹಕಾರಿ ಆಯುಕ್ತ ಮತ್ತು ರಿಜಿಸ್ಟ್ರಾರ್‌ಗೆ ಮನವಿ ಮಾಡಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಹಾಗೆಯೆ ಪ್ರತಿ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಅಡಿಯಲ್ಲಿ ರೂ. 5 ಲಕ್ಷದ ವರೆಗೆ ಠೇವಣಿಗಳನ್ನು ಪಡೆಯಬಹುದು. ಇದಕ್ಕಿಂತ ಹೆಚ್ಚಿನ ಠೇವಣಿ ಮೊತ್ತವನ್ನು ಕ್ಲೈಮ್ ಮಾಡಲು ಅನುಮತಿಸಲಾಗುವುದಿಲ್ಲ ಎಂದು RBI ಮಾಹಿತಿ ನೀಡಿದೆ.

RBI Floating bond pension scheme 2023
Image Credit: Original Source

ಬ್ಯಾಂಕಿನ ಪರವಾನಗಿ ರದ್ದಾಗಲು ಇದೆ ಬಹುದೊಡ್ಡ ಕಾರಣ
ಲಕ್ನೋ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಹೇಳಿದೆ. ಪರವಾನಗಿ ರದ್ದತಿಯ ಪರಿಣಾಮವಾಗಿ, ಬ್ಯಾಂಕ್ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಇದು ಇತರ ವಿಷಯಗಳ ಜೊತೆಗೆ ಠೇವಣಿಗಳ ಸ್ವೀಕಾರ ಮತ್ತು ತಕ್ಷಣವೇ ಜಾರಿಗೆ ಬರುವಂತೆ ಠೇವಣಿಗಳ ಮರುಪಾವತಿಯನ್ನು ಒಳಗೊಂಡಿರುತ್ತದೆ ಎಂದು RBI ಹೇಳಿದೆ.

Join Nadunudi News WhatsApp Group