RBI Guidelines: ಬ್ಯಾಂಕಿನಲ್ಲಿ ಯಾವುದೇ ಸಾಲ ಮಾಡುವವರಿಗೆ RBI ನಿಂದ ಹೊಸ ಮಾರ್ಗಸೂಚಿ, ಎಲ್ಲರಿಗೂ ಅನ್ವಯ.

ಬ್ಯಾಂಕಿನಲ್ಲಿ ಯಾವುದೇ ಸಾಲ ಮಾಡುವವರಿಗೆ RBI ನಿಂದ ಹೊಸ ಮಾರ್ಗಸೂಚಿ

RBI Guidelines For Loan Takers: ಕೇಂದ್ರ ಬ್ಯಾಂಕ್ ಈಗಾಗಲೇ ದೇಶದಲ್ಲಿ ಸಾಕಷ್ಟು ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದೆ. ಗ್ರಾಹಕರ ಹಿತದೃಷ್ಟಿಯಿಂದ ದೇಶದಲ್ಲಿ ಹಣಕಾಸಿನ ವಹಿವಾಟಿನ ನಿಯಮ ಸಾಕಷ್ಟು ಬದಲಾಗಿದೆ ಎನ್ನಬಹುದು. ಇನ್ನು ಇತ್ತೀಚಿಗೆ ಸರ್ಕಾರ ಬ್ಯಾಂಕ್ ನೀಡುವ ಸಾಲದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ.

ಈಗಾಗಲೇ ಬ್ಯಾಂಕ್ ಸಾಲದ ನಿಯಮದಲ್ಲಿ RBI ಹೆಚ್ಚಿನ ನಿಯಮ ಜಾರಿಗೊಳಿಸಿದೆ. ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳುವ ಗ್ರಾಹಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸರ್ಕಾರ ಸಾಕಷ್ಟು ನಿಯಮವನ್ನ ಬದಲಿಸಿದೆ. ಸದ್ಯ ಗ್ರಾಹಕರ ಅನುಕೂಲಕ್ಕಾಗಿ RBI ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

RBI Guidelines For Loan Takers
Image Credit: Informal News

ಬ್ಯಾಂಕಿನಲ್ಲಿ ಯಾವುದೇ ಸಾಲ ಮಾಡುವವರಿಗೆ RBI ನಿಂದ ಹೊಸ ಮಾರ್ಗಸೂಚಿ

ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಚಿಲ್ಲರೆ ಮತ್ತು MSME (Micro, Small and Medium Enterprises) ಸಾಲಗಳಿಗೆ ಸಾಲಗಾರರಿಗೆ ಬಡ್ಡಿ ಮತ್ತು ಇತರ ಷರತ್ತುಗಳನ್ನು ಒಳಗೊಂಡಂತೆ ‘ಕೀ ಫ್ಯಾಕ್ಟ್ ಸ್ಟೇಟ್‌ ಮೆಂಟ್’ (KFS- Key Fact Statement) ಒದಗಿಸುವುದನ್ನು ಬ್ಯಾಂಕ್‌ ಗಳಿಗೆ ಕಡ್ಡಾಯಗೊಳಿಸಿದೆ.

ಫೆ. 16 ರಂದು ಈ ಬಗ್ಗೆ RBI ಸುತ್ತೋಲೆ ಹೊರಡಿಸಿದೆ. ಪ್ರಸ್ತುತ, ವೈಯಕ್ತಿಕ ಸಾಲದ ಸಾಲಗಾರರಿಗೆ ವಾಣಿಜ್ಯ ಬ್ಯಾಂಕುಗಳು ನೀಡುವ ಸಾಲಗಳು, RBI ನಿಯಂತ್ರಿತ ಘಟಕಗಳು (RE) ಮತ್ತು ಮೈಕ್ರೋ ಫೈನಾನ್ಸ್ ಸಾಲಗಳಿಗೆ ಸಂಬಂಧಿಸಿದಂತೆ KFS ಕಡ್ಡಾಯವಾಗಿದೆ.

Join Nadunudi News WhatsApp Group

Loan Takers
Image Credit: Taxconcept

RBI ಗವರ್ನರ್ ಅಧಿಕೃತ ಮಾಹಿತಿ
ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಗ್ರಾಹಕರಿಗೆ ವಿಧಿಸುವ ಸಾಲಗಳ ಬೆಲೆ ಮತ್ತು ಇತರ ಶುಲ್ಕಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಬಹಿರಂಗಪಡಿಸುವಿಕೆಯನ್ನು ಉತ್ತೇಜಿಸಲು ಕೇಂದ್ರ ಬ್ಯಾಂಕ್ ಇತ್ತೀಚೆಗೆ ಹಲವಾರು ಕ್ರಮಗಳನ್ನು ಪ್ರಕಟಿಸಿದೆ. ಅಂತಹ ಒಂದು ಕ್ರಮವೆಂದರೆ ಸಾಲದಾತರು ತಮ್ಮ ಸಾಲಗಾರರಿಗೆ ಸಾಲದ ಒಪ್ಪಂದಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಹೊಂದಿರುವ KFS ಅನ್ನು ಸರಳ ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳುವ ಸ್ವರೂಪದಲ್ಲಿ ಒದಗಿಸುವುದು ಎಂದು ಹೇಳಿದ್ದಾರೆ.

Join Nadunudi News WhatsApp Group