RBI Rule: ಬ್ಯಾಂಕ್ ಖಾತೆ ಇದ್ದವರಿಗೆ RBI ನಿಂದ ದಿಡೀರ್ ಹೊಸ ನಿಯಮ, ತಕ್ಷಣ ನಿಮ್ಮ ಖಾತೆ ಬ್ಯಾಲೆನ್ಸ್ ಚೆಕ್ ಮಾಡಿ.
ಮಿನಿಮಂ ಬ್ಯಾಲೆನ್ಸ್ ವಿಷಯವಾಗಿ ಇನ್ನೊಂದು ಘೋಷಣೆ ಮಾಡಿದ RBI
RBI New Rule On Bank Minimum Balance: ಇನ್ನೇನು 2024 ರ ಏಪ್ರಿಲ್ ನಿಂದ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಸದ್ಯ ಈ ಹೊಸ ಹಣಕಾಸು ವರ್ಷದ ಸಲುವಾಗಿ RBI ಹೊಸ ಮಾರ್ಗಸೂಚಿ ಹೊರಡಿಸಿದೆ. ಹೊಸ ವರ್ಷದ ಆರಂಭದಲ್ಲಿ ಹಣಕಾಸು ನಿವೈಮಗಳು ಸಾಕಷ್ಟು ಬದಲಾಗಿದ್ದು, ಇದ್ರ ಜೊತೆಗೆ ಹಣಕಾಸು ವರ್ಷ ಆರಂಭಕ್ಕೂ ಮುನ್ನ ಕೆಲವು ನಿಯಮಗಳನ್ನು ಜಾರಿಗೊಳಿಸಲು RBI ಮುಂದಾಗಿದೆ.
![Bank Minimum Balance Rule](https://nadunudi.in/wp-content/uploads/2024/01/Bank-Minimum-Balance-Rule-1.png)
ಬ್ಯಾಂಕ್ ಖಾತೆ ಇದ್ದವರಿಗೆ RBI ನಿಂದ ದಿಡೀರ್ ಹೊಸ ನಿಯಮ
RBI ತನ್ನ ಮಾರ್ಗಸೂಚಿಯಲ್ಲಿ Bank ನ Minimum Balance ದಂಡದ ಬಗ್ಗೆ ಸುತ್ತೋಲೆ ಹೊರಡಿಸಿದೆ. ದೇಶದ ವಿವಿಧ ಬ್ಯಾಂಕುಗಳು ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡವನ್ನು ವಿಧಿಸುತ್ತದೆ. ಸದ್ಯ RBI ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಗೆ ದಂಡವನ್ನು ವಿಧಿಸುವಂತಿಲ್ಲ ಎಂದು RBI ಆದೇಶಿಸಿದೆ. RBI ಹೊಸ ನಿಯಮವು 2024 -25 ಹಣಕಾಸು ವರ್ಷದಿಂದ ಅನ್ವಯವಾಗಲಿದೆ. ಅಂದರೆ 2024 ರ ಏಪ್ರಿಲ್ 1 ರಿಂದ Bank ನ Minimum Balance ನಿಯಮಗಳು ಬದಲಾಗಲಿವೆ.
ತಕ್ಷಣ ನಿಮ್ಮ ಖಾತೆ ಬ್ಯಾಲೆನ್ಸ್ ಚೆಕ್ ಮಾಡಿ
ಸ್ಕಾಲರ್ಶಿಪ್ ಅಥವಾ ನೇರ ಲಾಭ ವರ್ಗಾವಣೆಗಾಗಿ ತೆರೆಯಲಾದ ಖಾತೆಗಳನ್ನು ಇನ್-ಆಕ್ಟಿವ್ ಎಂದು ಬ್ಯಾಂಕ್ ಗಳು ವರ್ಗೀಕರಿಸಲು ಸಾಧ್ಯವಿಲ್ಲ. ಈ ಖಾತೆಯು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಸಕ್ರಿಯವಾಗಿಲ್ಲದಿದ್ದರೂ ಅದನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ. ಸಕ್ರಿಯ ಖಾತೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಬ್ಯಾಂಕ್ ಬ್ಯಾಂಕ್ ಗೆ ಸೂಚನೆಗಳನ್ನು ನೀಡಿದೆ.
![RBI New Rule On Bank Minimum Balance](https://nadunudi.in/wp-content/uploads/2024/01/RBI-New-Rule-On-Bank-Minimum-Balance.png)
ಯಾವುದೇ ಬ್ಯಾಂಕ್ ಹೊಂದಿರುವವರು ತಮ್ಮ ನಿಷ್ಕ್ರಿಯ ಖಾತೆಯನ್ನು ಮರುಪ್ರಾರಂಭಿಸಲು ಬಯಸಿದರೆ, ಅವರು ಅದನ್ನು ಸುಲಭವಾಗಿ ಸಕ್ರಿಯಗೊಳಿಸಬಹುದು. ಇದಕ್ಕಾಗಿ ಯಾವುದೇ ಸಕ್ರಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ. RBI ಹೊಸ ನಿಯಮಗಳ ಪ್ರಕಾರ, ಬ್ಯಾಂಕ್ ಗಳು ತಮ್ಮ ಖಾತೆಗಳನ್ನು SMS, ಪತ್ರ ಅಥವಾ ಮೇಲ್ ಮೂಲಕ ನಿಷ್ಕ್ರಿಯಗೊಳಿಸಿದ ಬಗ್ಗೆ ಗ್ರಾಹಕರಿಗೆ ತಿಳಿಸಬೇಕಾಗುತ್ತದೆ. ಈ ಸುತ್ತೋಲೆಯಲ್ಲಿ, ನಿಷ್ಕ್ರಿಯ ಖಾತೆಯ ಮಾಲೀಕರು ಪ್ರತಿಕ್ರಿಯಿಸದಿದ್ದರೆ ಬ್ಯಾಂಕ್ ಗಳು ಖಾತೆದಾರರನ್ನು ಪರಿಚಯಿಸಿದ ವ್ಯಕ್ತಿ ಅಥವಾ ಖಾತೆದಾರರ ನಾಮಿನಿಯನ್ನು ಸಂಪರ್ಕಿಸಬೇಕು ಎಂದು ಬ್ಯಾಂಕ್ಗಳಿಗೆ ತಿಳಿಸಲಾಗಿದೆ.