Bank Account Closure: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದವರು ತಕ್ಷಣ ಈ ಕೆಲಸ ಮಾಡಿ, ಇಲ್ಲದವರೇ ಬಂದ್ ಆಗಲಿದೆ ಖಾತೆ
RBI ನಿಂದ ಹೊಸ ನಿಯಮ ಜಾರಿಗೆ, ಇನ್ನುಮುಂದೆ ಇಂತಹ ಖಾತೆಗಳು ನಿಷ್ಕ್ರಿಯೆಗೊಳ್ಳಲಿದೆ
RBI New Rules For Bank Account: ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರುತ್ತಾರೆ ಯಾಕೆಂದರೆ ಇಂದಿನ ಕಾಲದಲ್ಲಿ ಎಲ್ಲಾ ವ್ಯವಹಾರಗಳು ಬ್ಯಾಂಕ್ ಮುಖಾಂತರವೇ ಆಗುತ್ತಿದ್ದು, ಬ್ಯಾಂಕ್ ಖಾತೆ ಬಹಳ ಮುಖ್ಯ ಆಗಿದೆ. ಅದರಲ್ಲೂ ಕೆಲವರಂತೂ ಹತ್ತಾರು ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ.
ಇನ್ನು ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಹಲವು ನಿಯಮಗಳು ದೇಶದಲ್ಲಿ ಜಾರಿಯಲ್ಲಿ ಇದ್ದು ಎಲ್ಲಾ ನಿಯಮಗಳನ್ನ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಹೌದು RBI ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನ ಜಾರಿಗೆ ತಂದಿದೆ ಮತ್ತು ಕೆಲವು ಬ್ಯಾಂಕ್ ಖಾತೆಗಳನ್ನ ನಿಷ್ಕ್ರಿಯ ಮಾಡಲು ತೀರ್ಮಾನವನ್ನ ಮಾಡಿದೆ.
ಇಂತಹ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ
ಹೆಚ್ಚಿನ ಜನರು ಮೂರೂ ನಾಲ್ಕು ಬ್ಯಾಂಕ್ ಖಾತೆಗಳನ್ನ ಹೊಂದಿದ್ದು ಕೆಲವು ಬ್ಯಾಂಕ್ ಖಾತೆಗಳಲ್ಲಿ ಯಾವುದೇ ವಹಿವಾಟು ಮಾಡದೆ ಇರುವುದು RBI ಗಮನಕ್ಕೆ ಬಂದಿರುತ್ತದೆ.ಸಾಮನ್ಯವಾಗಿ ಎರಡು ವರ್ಷಗಳಿಂದ ವಹಿವಾಟು ಇಲ್ಲದ ಖಾತೆಗಳನ್ನು RBI ನಿಷ್ಕ್ರಿಯಗೊಳಿಸಲು ಆದೇಶಿಸಿದೆ. ಉಳಿತಾಯ ಖಾತೆ ಅಥವಾ ಚಾಲತಿ ಖಾತೆ ಯಾವುದೇ ಆಗಿರಲಿ ಒಂದೇ ನಿಯಮ ಅನ್ವಯ ಆಗಿರುತ್ತದೆ.
ಬ್ಯಾಂಕ್ ಒಂದು ಖಾತೆಯನ್ನು ರದ್ದುಗೊಳಿಸಿದರೆ ಅದರ ಕುರಿತು ಖಾತೆದಾರರಿಗೆ ನೋಟೀಸ್ ನೀಡಲಾಗುತ್ತದೆ. ಈ ನಿಯಮದ ಮುಖ್ಯ ಉದ್ದೇಶವೇ ವಂಚನೆ ತಪ್ಪಿಸುವುದಾಗಿದ್ದು, ರಬಿ ಮಾನದಂಡಗಳಿಗೆ ಅನುಗುಣವಾಗಿ ತಮ್ಮ ವೆಚ್ಚವನ್ನು ಕಡಿಮೆ ಮಾಡಲು ಬ್ಯಾಂಕರ್ ಗಳು ಈ ಕ್ರಮವನ್ನು ತೆಗೆದುಕೊಳ್ಳುತ್ತಾರೆ.
ಖಾತೆಯನ್ನು ಮರುಸಕ್ರಿಯಗೊಳಿಸುವ ವಿಧಾನ
ನೀವು ವಹಿವಾಟು ಮಾಡುವ ಮೂಲಕ ಅಥವಾ ಖಾತೆಯನ್ನು ಸಂಪರ್ಕಿಸುವ ಮೂಲಕ ನಿಮ್ಮ ಖಾತೆಯನ್ನು ಮರು ಸಕ್ರಿಯಗೊಳಿಸಬಹುದಾಗಿದೆ ಆದರೆ ಗ್ರಾಹಕರು 90 ದಿನಗಳ ಅವಧಿಯವರೆಗೆ ವಹಿವಾಟು ನೆಡೆಸುವ ಮೂಲಕ ನಿಮ್ಮ ಖಾತೆಯನ್ನು ಮರುಸಕ್ರಿಯ ಗೊಳಿಸಬಹುದು. ಈ ನಿಗದಿತ ಅವಧಿಯವರೆಗೆ ಖಾತೆಯನ್ನು ನವೀಕರಣ ಗೊಳಿಸದಿದ್ದರೆ ಶುಲ್ಕ ವಿಧಿಸುವ ಅಥವಾ ನಿಮ್ಮ ಖಾತೆಯನ್ನು ಮುಚ್ಚುವ ಅಧಿಕಾರ ಬ್ಯಾಂಕ್ ಹೊಂದಿರುತ್ತದೆ.
ಖಾತೆ ನಿಷ್ಕ್ರಿಯ ಗೊಳ್ಳದಂತೆ ಮಾಡಲು ಈ ರೀತಿ ಮಾಡಿ
ನಿಮ್ಮ ಯಾವುದೇ ಖಾತೆ ಆಗಿರಲಿ ಎರಡು ವರ್ಷಗಳಿಗೊಮ್ಮೆ ವಹಿವಾಟಿಗೆ ಬಳಸಿಕೊಂಡರೆ ಖಾತೆ ಮುಚ್ಚಲ್ಪಡುವುದಿಲ್ಲ. ನೀವು ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್ ಸಹ ಬಳಸಿ ನಿಮ್ಮ ಖಾತೆಯನ್ನು ಸಂಪರ್ಕಿಸಬಹುದಾಗಿದೆ. ಎರಡು ವರ್ಷಗಳಿಗೊಮ್ಮೆ ಕನಿಷ್ಠ ವಹಿವಾಟನ್ನು ಮಾಡಲು ಪ್ರಯತ್ನಿಸವುದರಿಂದ ನಿಮ್ಮ ಬ್ಯಾಂಕ್ ಖಾತೆ ರದ್ದಾಗುವುದಿಲ್ಲ. ಇಲ್ಲವಾದಲ್ಲಿ ಬ್ಯಾಂಕ್ ಗೆ ವಿನಂತಿ ಮಾಡಿಕೊಳ್ಳುವ ಮೂಲಕ ದೀರ್ಘವದಿಯ ನಿಷ್ಕ್ರಿಯೆಯನ್ನು ನೀವು ನಿರೀಕ್ಷಿಸಬಹುದಾಗಿದೆ.
KYC ಕಡ್ಡಾಯ
ಬ್ಯಾಂಕ್ KYC ಕುರಿತು ಆಗಾಗ ಸಂದೇಶ ನೀಡುತ್ತಿರುತ್ತದೆ. ಅದನ್ನು ನಿರ್ಲಕ್ಷಿಸಬಾರದು, KYC ಯನ್ನು ಪೂರ್ಣಗೊಳಿಸಬೇಕು ಒಂದೊಮ್ಮೆ ಈ ಕೆಲಸದಲ್ಲಿ ವಿಫಲರಾದರೆ ಮರು ಸಕ್ರಿಯ ಸಮಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಇದರ ಪರಿಣಾಮ ನಿಮ್ಮ ಬ್ಯಾಂಕ್ ಖಾತೆಯನ್ನು ತಾತ್ಕಾಲಿಕ ವಾಗಿ ಪ್ರೀಜ್ ಮಾಡಬಹುದು ಅಥವಾ ನಿಮ್ಮ ಖಾತೆಯನ್ನು ಸಂಪೂರ್ಣವಾಗಿ ಮುಚ್ಚಬಹುದು. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕಡ್ಡಾಯವಾಗಿ KYC ಬಗ್ಗೆ ಗಮನವಿರಲಿ.