RBI New Rules For Bank Locker: ಹೊಸ ವರ್ಷದಲ್ಲಿ ಬ್ಯಾಂಕ್ ಲಾಕರ್ ನಿಯಮಗಳಲ್ಲಿ ಬದಲಾವಣೆ, ಹಣ ಮತ್ತು ಚಿನ್ನ ಇಡುವ ಮುನ್ನ ಎಚ್ಚರ.

RBI New Rules For Bank Locker: ಇನ್ನೇನು 2022 ಮುಗಿದು 2023 ಬರಲು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇವೆ. ಈಗಾಗಲೇ ಹೊಸವರ್ಷದ ತಯಾರಿಯಲ್ಲಿ ಜನರು ಮುಳುಗಿದ್ದಾರೆ. ಹಾಗೆಯೆ ಹೊಸ ವರ್ಷದಲ್ಲಿ ಅನೇಕ ನಿಯಮಗಳು ಬದಲಾಗಲಿವೆ.

ಟೋಲ್ ತೆರೆಗೆ (Toll), ಗ್ಯಾಸ್ ಸಿಲಿಂಡರ್ (Gas Cylinder) ನ ಬೆಲೆ, ದಿನ ದಿನತ್ಯ ವಸ್ತುಗಳ ಬೆಲೆಯಲ್ಲಿನ ವ್ಯತ್ಯಾಸ, ಹಾಗೆ ಅನೇಕ ಬ್ಯಾಂಕ್ ಗಳಲ್ಲಿ ಹೊಸ ಹೊಸ ನಿಯಮಗಳು ಇಗಾಗಲೇ ಜಾರಿಗೆ ಬಂದಿವೆ. ಇದರ ಜೊತೆಗೆ ಆರ್ ಬಿಐ (Reserve Bank Of India) ಬ್ಯಾಂಕ್ ಲಾಕರ್ ನ (Bank Locker) ವ್ಯವಸ್ಥೆಯಲ್ಲಿ ಹೊಸ ನಿಯಮಗಳನ್ನು ತಂದಿದೆ.

Change in bank locker rules in new year, be careful before depositing money and gold.
Image Credit: rightsofemployees

ಹೊಸ ವರ್ಷದಿಂದ ಬ್ಯಾಂಕ್ ಲಾಕರ್ ನಿಯಮದಲ್ಲಿ ಬದಲಾವಣೆ (Bank Locker Rule Change) 
ಇನ್ನು ಗ್ರಾಹಕರು ತಮ್ಮ ಹಾನ್ ಅಮತ್ತು ಆಭರವನ್ನು ಸುರಕ್ಷಿತವಾಗಿಡಲು ಬ್ಯಾಂಕ್ ಲಾಕರ್ ಗಳನ್ನೂ ಉಪಯೋಗಿಸುತ್ತಿದ್ದರು. ತಮ್ಮ ಆಭರಣ ಸುರಕ್ಷಿತವಾಗಿರುತ್ತದೆ ಎನ್ನುವ ದ್ರಷ್ಟಿಯಿಂದ ಬಹುತೇಕ ಜನರು ಲಾಕರ್ ಗಳಲ್ಲಿ ಚಿನ್ನ ಹಾಗೂ ಬೆಲೆಬಾಳುವ ವಸ್ತುಗಳನ್ನು ಇಡುತ್ತಿದ್ದರು.

ಇದೀಗ ಆರ್ ಬಿ ಐ ಬ್ಯಾಂಕ್ ಲಾಕರ್ ನ ವ್ಯವಸ್ಥೆಯಲ್ಲಿ ಹೊಸ ನಿಯಮಗಳನ್ನು ತಂದಿದೆ. ನೀವು ಲಾಕರ್ ನಲ್ಲಿ ಬೆಲೆ ಬಾಳುವ ವಸ್ತುಗಳನ್ನು ಇಟ್ಟಿದ್ದರೆ ಈ ವಿಷಯವನ್ನು ತಿಳಿದುಕೊಳ್ಳಿ.

With the new extension, there will be a change in the bank locker rules
Image Credit: hindustantimes

ಆರ್ ಬಿಐ (RBI) ನೀಡಿದ ಮಾಹಿತಿ
ಆರ್ ಬಿಐ ನಿಯಮದ ಪ್ರಕಾರ, ಲಾಕರ್ ನಲ್ಲಿ ಇರಿಸಲಾದ ವಸ್ತುಗಳಿಗೆ ಯಾವುದೇ ಹಾನಿಯಾಗಿದ್ದರೆ, ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ ಪರಿಹಾರಾವನ್ನು ಒದಗಿಸಬೇಕಾಗಲಿದೆ.

Join Nadunudi News WhatsApp Group

ಅಷ್ಟೇ ಅಲ್ಲ ಗ್ರಾಹಕರು ಡಿಸೆಂಬರ್ 31 ರವರೆಗೆ ಈ ಕುರಿತಾದ ಒಪ್ಪಂದಕ್ಕೆ ಸಹಿ ಹಾಕಬೇಕಿದ್ದು, ಅದರಲ್ಲಿ ಲಾಕರ್ ಬಗ್ಗೆ ಎಲ್ಲ ಮಾಹಿತಿ ನೀಡಲಾಗುವುದು. ಇದರೊಂದೊಗೆ ಬ್ಯಾಂಕ್ ಗ್ರಾಹಕರಿಗೆ ಲಾಕರ್ ನಲ್ಲಿರುವ ತಮ್ಮ ವಸ್ತುಗಳ ಬಗ್ಗೆ ನಿರಂತರ ಅಪ್ಡೇಟ್ ಸಿಗಲಿದೆ.

Team RBI implements changes in bank locker rules
Image Credit: economictimes.indiatimes

ಬ್ಯಾಂಕ್ ಯಾವ ಸಂಧರ್ಭದಲ್ಲಿ ಪರಿಹಾರ ನೀಡುತ್ತದೆ
ಬ್ಯಾಂಕಿನ ನಿರ್ಲಕ್ಷ್ಯದಿಂದ ಲಾಕರ್ ನಲ್ಲಿ ಇಟ್ಟಿರುವ ಸರಕುಗಳಿಗೆ ಹಾನಿಯಾಗಿದ್ದರೆ ಸಂಬಂಧಪಟ್ಟ ಬ್ಯಾಂಕ್ ಹಣ ಪಾವತಿಸಬೇಕಾಗುತ್ತದೆ. ಅಂದರೆ ಈಗ ಹೊಸ ನಿಯಮದ ಪ್ರಕಾರ ಬ್ಯಾಂಕ್ ನ ಜವಾಬ್ದಾರಿ ಹೆಚ್ಚಾಗಿದೆ. ಗ್ರಾಹಕರಿಗೆ ಆಗುವ ನಷ್ಟವನ್ನು ಬ್ಯಾಂಕ್ ಭರಿಸಬೇಕಾಗಿದೆ. ಇದರ ಅಡಿಯಲ್ಲಿ ಬ್ಯಾಂಕಿನ ಹೊಣೆಗಾರಿಕೆಯು ಲಾಕರ್ ನ ವಾರ್ಷಿಕ ಬಾಡಿಗೆಯ 100 ಪಟ್ಟು ಹೆಚ್ಚಾಗಲಿದೆ.

A new rule has come into effect from the new year for those using bank lockers
Image Credit: timesofindia.indiatimes

ಬ್ಯಾಂಕ್ ಯಾವ ಸಂದರ್ಭದಲ್ಲಿ ಪರಿಹಾರ ನಿಡುದಿಲ್ಲ
ಹೊಸ ನಿಯಮದ ಪ್ರಕಾರ್ ಮಿಂಚು, ಭೂಕಂಪ, ಪ್ರವಾಹ, ಕ್ಯಾಂಡಮಾರುತ ಅಥವಾ ಮುಂತಾದ ಪ್ರಕ್ರತಿ ವಿಕೋಪದಿಂದ ಅಥವಾ ಗ್ರಾಹಕರ ನಿರ್ಲಕ್ಷ್ಯ ಅಥವಾ ಗ್ರಾಹಕರ ತಪ್ಪಿನಿಂದ ಲಾಕರ್ ನಲ್ಲಿ ಇಟ್ಟಿರುವ ವಸ್ತುಗಳಿಗೆ ಹಾನಿಯಾದರೆ ಅದಕ್ಕೆ ಬ್ಯಾಂಕ್ ಹೊಣೆಯಾಗುದಿಲ್ಲ. ಹಾಗೆಯೆ ಯಾವುದೇ ರೀತಿಯ ಪರಿಹಾರ ದೊರಕುವುದಿಲ್ಲ.

Join Nadunudi News WhatsApp Group