Personal Loan: ವೈಯಕ್ತಿಕ ಸಾಲ ಮಾಡುವವರಿಗೆ RBI ನಿಂದ ಹೊಸ ನಿಯಮ, ಇನ್ನುಮುಂದೆ ಲೋನ್ ಸಿಗುವುದು ಕಷ್ಟ.

ವೈಯಕ್ತಿಕ ಸಾಲ ಮಾಡುವವರಿಗೆ RBI ನಿಂದ ಹೊಸ ನಿಯಮ, ಇನ್ನುಮುಂದೆ ಪರ್ಸನಲ್ ಲೋನ್ ಸಿಗುವುದು ಕಷ್ಟ.

RBI New Rule For Personal Loan: ಸಾಮಾನ್ಯವಾಗಿ ಜನರಿಗೆ ಆರ್ಥಿಕ ಸಮಸ್ಯೆ ಎದುರಾದಾಗ ಜನರು ಹೆಚ್ಚಾಗಿ ಸಾಲದ ಮೊರೆ ಹೋಗುತ್ತಾರೆ. ದೇಶದ ಜನಪ್ರಿಯ ಬ್ಯಾಂಕ್ ಅಥವಾ ವಿವಿಧ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಸಾಲವನ್ನು ನೀಡುತ್ತದೆ.

ಬ್ಯಾಂಕ್ ಗಳು ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಶಾಲಾ, ಶಿಕ್ಷಣ ಸಾಲವನ್ನು ನೀಡುತ್ತದೆ. ವಿವಿಧ ಸಾಲಗಳಿಗೆ ಅನೇಕ ವಿಭಿನ್ನ ಬಡ್ಡಿದರವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ವಿದಿಸಿರುತ್ತದೆ. ಇತ್ತೀಚೆಗಂತೂ RBI ಬ್ಯಾಂಕ್ ಸಾಲದಲ್ಲಿ ಸಾಕಷ್ಟು ಬದಲಾವಣೆ ತರುತ್ತಿದೆ.

rbi new rules on personal loan
Image Credit: Original Source

ವೈಯಕ್ತಿಕ ಸಾಲ ಮಾಡುವವರಿಗೆ RBI ನಿಂದ ಹೊಸ ನಿಯಮ
ಗ್ರಾಹಕರಿಗೆ ಬ್ಯಾಂಕ್ ನೀಡುವ ಸಾಲದಿಂದ ಯಾವುದೇ ಸಮಸ್ಯೆ ಉಂಟಾಗಬಾರದೆಂದು ಕೇಂದ್ರ ಬ್ಯಾಂಕ್ ಕಟ್ಟು ನಿಟ್ಟಿನ ಕ್ರಮ ವಹಿಸುತ್ತಿದೆ. RBI ಬ್ಯಾಂಕ್ ಗಳಿಗೆ ಸಾಲಕ್ಕೆ ಸಂಬಂಧಿಸಿದಂತೆ ಹೊಸ ಹೊಸ ನಿಯಮವನ್ನು ವಿದಿಸುತ್ತಿದ್ದಂತೆ, ಬ್ಯಾಂಕ್ ಗಳು RBI ನ ಪ್ರತಿ ನಿಯಮವನ್ನು ತನ್ನ ಸಾಲದ ನಿಯಮದಲ್ಲಿ ಅಳವಡಿಸಿಕೊಳ್ಳುತ್ತಿದೆ.

ಸದ್ಯ RBI ಬ್ಯಾಂಕ್ ನೀಡುವ ವೈಯಕ್ತಿಕ ಸಾಲ (Personal Loan ) ಸಂಬಂಧಿತ ಮಹತ್ವದ ನಿರ್ಧಾರ ಕೈಗೊಂಡಿದೆ. RBI ಹೊಸ ನಿಯಮದ ಅನುಸಾರ ಇನ್ನುಮುಂದೆ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆಯುವುದು ಕಷ್ಟವಾಗಬಹುದು. RBI ವೈಯಕ್ತಿಕ ಸಾಲಕ್ಕೆ ಸಮಬಂಧಿಸಿದಂತೆ ನಿಯಮವನ್ನು ಕಠಿಣಗೊಳಿಸಿದೆ. ನೀವು ಪೆರ್ಸನ್ ಲೋನ್ ಪಡೆಯುವ ಯೋಜನೆಯಲ್ಲಿದ್ದರೆ RBI ನ ಈ ಹೊಸ ನಿಯಮದ ಬಗ್ಗೆ ತಿಳಿಯುವುದು ಉತ್ತಮ.

RBI new rules on personal loan in banks
Image Credit: Original Source

ಇನ್ನುಮುಂದೆ Personal Loan ಪಡೆಯುವುದು ಸುಲಭವಲ್ಲ
ಪರ್ಸನಲ್ ಲೋನ್ ಅನ್ನು RBI ಭದ್ರತೆ ಇಲ್ಲದೆ ಸಾಲ ಅಂದರೆ Unsecured Loan ಎಂದು ಪರಿಗಣಿಸಿದೆ. ಈ ಕಾರಣಕ್ಕೆ ಬ್ಯಾಂಕುಗಳಿಗೆ ಇರುವ Risk Factor ಪ್ರಮಾಣವನ್ನು ಶೇ. 25 ರಿಂದ ಶೇ. 125 ಕ್ಕೆ ಏರಿಕೆ ಮಾಡಲಾಗಿದೆ. ಆದರೆ ಚಿನ್ನ ಮತ್ತು ಚಿನ್ನಾಭರಣದ ಮೇಲಿನ ರಿಸ್ಕ್ ಫ್ಯಾಕ್ಟಾರ್ ಅನ್ನು ಶೇ.100 ರ ಹಾಗೆ ಮುಂದುವರೆಯಲಿದೆ. RBI ಹೊಸ ನಿಯಮ ಗೃಹ ಸಾಲ, ಶಿಕ್ಷಣ ಸಾಲ ಮತ್ತು ವಾಹನ ಸಾಲಕ್ಕೆ ಅನ್ವಯವಾಗುವುದಿಲ್ಲ. ಪರ್ಸನಲ್ ಲೋನ್ ಹೆಚ್ಚಿನ ಸುರಕ್ಷತೆಯನ್ನು ನೀಡದಿರುವ ಕಾರಣ RBI ಗ್ರಾಹಕರಿಗೆ ಹೊಸ ನಿಯಮವನ್ನು ಪರಿಚಯಿಸಿದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group