Penalty For Banks: ಈ ಐದು ಬ್ಯಾಂಕುಗಳ ಶಾಖೆಯನ್ನು ಮುಚ್ಚಲು ತೀರ್ಮಾನ ಮಾಡಿದ RBI, ಆತಂಕ ಹೊರಹಾಕಿದ ಖಾತೆದಾರರು.

ಲಾಭದಾಯಕವಲ್ಲದ ಈ ಬ್ಯಾಂಕುಗಳನ್ನ ಮುಚ್ಚಲು ಆದೇಶ ನೀಡಿದ RBI

RBI Penalty For 5 Bank: ಸದ್ಯ RBI ದೇಶದ ವಿವಿಧ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ದೇಶದಲ್ಲಿ ವಿವಿಧ ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು RBI ರದ್ದುಗೊಳಿಸಿ, ನಿಯಮ ಉಲ್ಲಂಘನೆ ಮಾಡುತ್ತಿರುವ ಬ್ಯಾಂಕ್ ಗಳಿಗೆ ಹೆಚ್ಚಿನ ದಂಡವನ್ನು ವಿಧಿಸಿದೆ.

ಸದ್ಯ RBI ಮತ್ತೆ 5 ಸಹಕಾರಿ ಬ್ಯಾಂಕ್ ಗಳಿಗೆ ದಂಡ ವಿಧಿಸಿದೆ. ಈ ಮೂಲಕ RBI ಸಹಕಾರಿ ಬ್ಯಾಂಕ್ ಗಳಿಗೆ ಶಾಕ್ ನೀಡಿದೆ. ಇದೀಗ RBI ಯಾವ ಯಾವ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

rbi penalty on banks in india
Image Credit: Original Source

ಈ ಐದು ಬ್ಯಾಂಕುಗಳಿಗೆ ದಂಡ ವಿಧಿಸಿದ RBI
1. Uma Co-operative Bank Limited,
2. Peez People’s Co-operative Bank Limited,
3. Mizoram Co-operative Apex Bank Limited,
4. Birbham District Central Co-operative Bank Limited
5. Shihori Nagrik Co-operative Bank Limited

RBI ಬ್ಯಾಂಕುಗಳಿಗೆ ಎಷ್ಟು ದಂಡವನ್ನು ವಿಧಿಸಿದೆ
*ಪ್ರಾಥಮಿಕ ಸಹಕಾರಿ ಬ್ಯಾಂಕ್‌ಗಳು ಇತರ ಬ್ಯಾಂಕ್‌ ಗಳೊಂದಿಗೆ ಠೇವಣಿ ಇರಿಸುವ ಕುರಿತು RBI ಹೊರಡಿಸಿದ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ Uma Co-operative Bank Limited ಗೆ RBI ರೂ. 7 ಲಕ್ಷ ದಂಡವನ್ನು ವಿಧಿಸಿದೆ.

*KYC ಮಾರ್ಗಸೂಚಿಗಳು, 2016 ರಲ್ಲಿ RBI ನೀಡಿದ ಸೂಚನೆಗಳನ್ನು ಅನುಸರಿಸದಿದ್ದಕ್ಕಾಗಿ ರಿಸರ್ವ್ ಬ್ಯಾಂಕ್ ಪೆಸೆಂಟ್ ಪೀಪಲ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ ಗೆ ರೂ. 2 ಲಕ್ಷ ವಿತ್ತೀಯ ದಂಡವನ್ನು ವಿಧಿಸಿತು.

Join Nadunudi News WhatsApp Group

bank closing rules of rbi
Image Credit: Original Source

*ರಾಜ್ಯ ಸಹಕಾರಿ ಬ್ಯಾಂಕ್‌ಗಳಿಗೆ ಅನ್ವಯವಾಗುವ ಹೌಸಿಂಗ್ ಫೈನಾನ್ಸ್ ಕುರಿತು ಆರ್‌ಬಿಐ ನೀಡಿರುವ ನಿರ್ದೇಶನಗಳನ್ನು ಪಾಲಿಸದಿದ್ದಕ್ಕಾಗಿ ಐಜ್ವಾಲ್‌ ನ ಮಿಜೋರಾಂ ಕೋ-ಆಪರೇಟಿವ್ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ ಗೆ ರಿಸರ್ವ್ ಬ್ಯಾಂಕ್ ರೂ. 2 ಲಕ್ಷ ದಂಡ ವಿಧಿಸಿದೆ.

*ಹಾಗೆಯೆ ಹೌಸಿಂಗ್ ಫೈನಾನ್ಸ್ ನಿಯಮವನ್ನು ಉಲ್ಲಂಘಿಸಿದ ಕಾರಣ ಬಿರ್ಭೂಮ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್‌ ಗೆ RBI ರೂ. 1.10 ಲಕ್ಷ ದಂಡ ವಿಧಿಸಲಾಗಿದೆ.

ಬ್ಯಾಂಕುಗಳ ಶಾಖೆಯನ್ನು ಮುಚ್ಚಲು ತೀರ್ಮಾನ ಮಾಡಿದ RBI
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಗಳು (ಡಿಸಿಸಿಬಿ) ತಮ್ಮ ಲಾಭದಾಯಕವಲ್ಲದ ಶಾಖೆಗಳನ್ನು ಕೇಂದ್ರ ಬ್ಯಾಂಕ್‌ ನ ಪೂರ್ವಾನುಮತಿ ಇಲ್ಲದೆ ಮುಚ್ಚಬಹುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಸೂಕ್ತ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಲಾಭದಾಯಕವಲ್ಲದ ಶಾಖೆಗಳನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ಡಿಸಿಸಿಬಿಗಳ ನಿರ್ದೇಶಕರ ಮಂಡಳಿಯ ಸಭೆಯನ್ನು ಸರಿಯಾಗಿ ದಾಖಲಿಸಬೇಕು ಎಂದು RBI ಆದೇಶ ಹೊರಡಿಸಿದೆ.

Join Nadunudi News WhatsApp Group