Bank Loan Rules: ಬ್ಯಾಂಕ್ ಸಾಲ ಕಟ್ಟಲು ಕಷ್ಟಪಡುತ್ತಿರುವವರಿಗೆ RBI ನಿಂದ ಸಿಹಿಸುದ್ದಿ, ಜನವರಿ 1 ರಿಂದ ಹೊಸ ರೂಲ್ಸ್.

ಬ್ಯಾಂಕ್ ಸಾಲ ಕಟ್ಟಲು ಕಷ್ಟಪಡುತ್ತಿರುವವರಿಗೆ RBI ನಿಂದ ಸಿಹಿಸುದ್ದಿ.

RBI Rules On Bank Loans: ಜನರು ಯಾವುದಾದರೂ ಒಂದು ಕಾರಣಕ್ಕೆ ಬ್ಯಾಂಕುಗಳಲ್ಲಿ ಸಾಲವನ್ನ ಮಾಡುತ್ತಿದ್ದಾರೆ. ಹೌದು ಬ್ಯಾಂಕುಗಳಲ್ಲಿ ವಯಕ್ತಿಕ ಸಾಲ, ಗೃಹಸಾಲ, ವಾಹನಗಳ ಮೇಲೆ ಸಾಲ ಸಾಲವನ್ನ ಮಾಡುತ್ತಾರೆ. ಸಾಲ ಮಾಡುವ ಸಮಯದಲ್ಲಿ ಸಾಲ ತೀರಿಸುವ ಸಮಯದಲ್ಲಿ ಇರುವುದಿಲ್ಲ ಎಂದು ಹೇಳಬಹುದು.

ಸಾಲದ ಮಾಡಿದ ನಂತರ ಹಕಾಸಿನ ಸಮಸ್ಯೆ ಹೆಚ್ಚಾಗುವ ಕಾರಣ ಸಾಕಷ್ಟು ಜನರು ತಮ್ಮ ಸಾಲವನ್ನ ಕಟ್ಟದೆ ನಂತರ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಬ್ಯಾಂಕುಗಳು ಸಾಲವನ್ನ ಕಟ್ಟಡವರ ಮೇಲೆ ಕೆಲವು ನಿಯಮಗಳ ಅಡಿಯಲ್ಲಿ ಹೆಚ್ಚಿನ ದಂಡವನ್ನ ವಸೂಲಿ ಮಾಡುತ್ತದೆ. ಸದ್ಯ ಸಾಲವನ್ನ ಕಟ್ಟಲಾಗದೆ ಚಕ್ರಬಡ್ಡಿ ಮತ್ತು ದಂಡವನ್ನ ಕಟ್ಟುವ ಜನರಿಗೆ ಈಗ RBI ಗುಡ್ ನ್ಯೂಸ್ ನೀಡಿದೆ ಎಂದು ಹೇಳಿದರೆ ತಪ್ಪಾಗಲ್ಲ.

RBI Rules On Bank Loans
Image Credit: Informalnewz

ಇನ್ನು ಸಾಲಗಳಿಗೆ ಹೆಚ್ಚಿನ ಬಡ್ಡಿ ಇಲ್ಲ
ಹೌದು ಬ್ಯಾಂಕುಗಳಲ್ಲಿ ಯಾವುದೇ ಸಾಲ ಮಾಡಿರುವ ಜನರಿಗೆ ಈಗ RBI ಗುಡ್ ನ್ಯೂಸ್ ನೀಡಿದ್ದು ದೇಶದಲ್ಲಿ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ. ಹೌದು ಬ್ಯಾಂಕುಗಳಿಗೆ ಹೊಸ ಆದೇಶವನ್ನ ಹೊರಡಿಸಿರುವ RBI ಈಗ ಸಾಲ ಮಾಡಿದವರ ಪಾರವಾಗಿ ನಿಂತಿದೆ ಎಂದು ಹೇಳಬಹುದು. ಹೌದು ಬ್ಯಾಂಕುಗಳು ಸಾಲ ತೀರಿಸದವರಿಗೆ ಬಡ್ಡಿಗಳ ಮೇಲೆ ಚಕ್ರಬಡ್ಡಿ ಹಾಕುತ್ತದೆ ಎಂದು ಹೇಳಬಹುದು. ಸದ್ಯ ಸಾಲಗಳ ಬಡ್ಡಿಗೆ ಸಂಬಂಧಿಸಿದಂತೆ RBI ಹೊಸ ಆದೇಶ ಹೊರಡಿಸಿದ್ದು ಇನ್ನುಮುಂದೆ ಹೆಚ್ಚಿನ ಬಡ್ಡಿ ಹಾಕದಂತೆ ಆದೇಶ ಹೊರಡಿಸಿದೆ.

ಬ್ಯಾಂಕ್ ಸಾಲ ಮಾಡಿದವರಿಗೆ RBI ನಿಂದ ರೂಲ್ಸ್
RBI ಈಗ ಹೊಸ ಅಧಿಸೂಚನೆಯನ್ನ ಹೊರಡಿಸಿದ್ದು ಸಾಲಗಳ EMI ಪಾವತಿ ವಿಳಂಬವಾದರೆ ಬ್ಯಾಂಕುಗಳು ಬಡ್ಡಿಯ ಮೇಲೆ ಬಡ್ಡಿ ವಿಧಿಸುವಂತಿಲ್ಲ ಎಂದು RBI ಈಗ ಹೊಸ ನಿಯಮವನ್ನ ಜಾರಿಗೆ ತಂದಿದೆ.

* ಸಾಲಗಳಿಗೆ ಬಡ್ಡಿಯನ್ನು ನಿಗದಿ ಮಾಡುವ ಸಮಯದಲ್ಲಿ ನಿಗದಿತ ಬಡ್ಡಿಯನ್ನ ಮಾತ್ರ ಸಾಕಬೇಕು ಎಂದು RBI ನಿಯಮವನ್ನ ಜಾರಿಗೆ ತಂದಿದೆ.

Join Nadunudi News WhatsApp Group

Bank Loan Rules
Image Credit: Karnataka Times

*ಅದೇ ರೀತಿಯಲ್ಲಿ ಸಾಲಗಾರನ ಒಪ್ಪಿಗೆ ಪಡೆಯದೇ ಮಾಸಿಕ EMI ಅಥವಾ ಸಾಲದ ಅವಧಿಯನ್ನ ಯಾವುದೇ ಕಾರಣಕ್ಕೂ ಹೆಚ್ಚಳ ಮಾಡುವಂತಿಲ್ಲ ಎಂದು RBI ಬ್ಯಾಂಕುಗಳಿಗೆ ತಿಳಿಸಿದೆ.

*ಸಾಲದ ಅವಧಿಯನ್ನ ವಿಸ್ತರಣೆ ಮಾಡುವ ಸಮಯದಲ್ಲಿ ಅಥವಾ EMI ನಲ್ಲಿ ಬದಲಾವಣೆ ಜಾರಿಗೆ ತರುವ ಸಮಯದಲ್ಲಿ ಸಾಲಗಾರರಿಗೆ ತ್ವರಿತವಾಗಿ ತಿಳಿಸಬೇಕು ಎಂದು RBI ನಿಯಮದಲ್ಲಿ ತಿಳಿಸಲಾಗಿದೆ.

*ಅದೇ ರೀತಿಯಲ್ಲಿ ಸಾಲದ ಮೊತ್ತವನ್ನ ಗ್ರಾಹಕರು ಯಾವುದೇ ಸಮಯದಲ್ಲಿ ಸಂಪೂರ್ಣವಾಗಿ ಅಥವಾ ಭಾಗಶಃ ಮರುಪಾವತಿ ಮಾಯಾದಳು ಬ್ಯಾಂಕುಗಳು ಅವಕಾಶವನ್ನ ಕೊಡಬೇಕು.

* EMI ಪಾವತಿ ಮಾಡುವುದು ತಡವಾದರೆ EMI ನೆಪದಲ್ಲಿ ಗ್ರಾಹಕರಿಂದ ಬಡ್ಡಿ ವಸೂಲಿ ಮಾಡುವಂತೆ ಇಲ್ಲ.

ಇನ್ನು ಈ ಎಲ್ಲಾ ನಿಯಮದಲ್ಲಿ ಜನವರಿ 2024 ರಿಂದ ದೇಶದಲ್ಲಿ ಜಾರಿಗೆ ಬರಲಿದೆ ಮತ್ತು ಗ್ರಾಹಕರ ಹಿತರಕ್ಷಣೆಯ ಉದ್ದೇಶದಿಂದ ದೇಶದಲ್ಲಿ ಈ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ ಎಂದು ಹೇಳಬಹುದು. ದೇಶದ ಎಲ್ಲಾ ಬ್ಯಾಂಕುಗಳಿಗೆ ಈ ನಿಯಮ ಅನ್ವಯ ಆಗಲಿದೆ ಎಂದು RBI ಸ್ಪಷ್ಟನೆಯಲ್ಲಿ ತಿಳಿಸಿದೆ.

Join Nadunudi News WhatsApp Group