Property Doc: ಜನರ ಆಸ್ತಿಗಳಿಗೆ ಈಗ ಬ್ಯಾಂಕುಗಳೇ ಹೊಣೆ, ಸಾಲ ಮಾಡಿದವರಿಗಾಗಿ ಹೊಸ ಕಾನೂನು ಜಾರಿಗೆ ತಂಡ RBI.

ಗ್ರಾಹಕರು ಬ್ಯಾಂಕಿಗೆ ನೀಡಿದ ಆಸ್ತಿಗಳ ದಾಖಲೆಗಳು ಕಳೆದು ಹೋದರೆ ಅದಕ್ಕೆ ಬ್ಯಾಂಕುಗಳೇ ನೇರವಾದ ಹೊಣೆಯಾಗಿರುತ್ತದೆ.

RBI Rules On Loan Holder Documents: ಇದೀಗ ರಿಸರ್ವ್ ಬ್ಯಾಂಕ್ ಆಫ್ (Reserve Bank Of India) ಇಂಡಿಯಾ ಹೊಸ ಮಾಹಿತಿ ಒಂದು ಹೊರ ಹಾಕಿದೆ. ಬ್ಯಾಂಕ್ ಅಥವಾ ಗೃಹ ನಿರ್ಮಾಣಕ್ಕೆ ಸಾಲ ಪಡೆಯುವ ವೇಳೆ ಗ್ರಾಹಕರು ನೀಡಿದ ಆಸ್ತಿಯ ದಾಖಲೆಗಳನ್ನು ಹಣಕಾಸು ಸಂಸ್ಥೆಗಳೇನಾದರೂ ಕಳೆದು ಹಾಕಿದರೆ, ಆಯಾ ಸಂಸ್ಥೆಗಳೇ ಹೊಣೆ ಹೊರಬೇಕು.

ಜೊತೆಗೆ ಗ್ರಾಹಕರಿಗೆ ಸೂಕ್ತ ರೀತಿಯಲ್ಲಿ ನಗದು ಪರಿಹಾರ ನೀಡಬೇಕು ಎಂದು ಆರ್ ಬಿ ಐ 2022 ರ ಮೇ ನಲ್ಲಿ ರಚಿಸಿದ್ದ ಬಿಪಿ ಕಾನೂನು ನೇತೃತ್ವದ ಆರು ಸದ್ಯಸ್ಯರ ಸಮಿತಿ ಶಿಫಾರಸು ಮಾಡಿದೆ. ಇದನ್ನು ಆರ್ ಬಿ ಐ ಜಾರಿಗೊಳಿಸುವ ಸಾಧ್ಯತೆ ಇದೆ.

RBI Rules On Loan Holder Documents
Image Source: Buddy Loan

ಆರ್ ಬಿ ಐ ಹೊಸ ನಿರ್ಧಾರ
ಬ್ಯಾಂಕುಗಳಲ್ಲಿ ಸಾಲ ಪಡೆಯಲು ನಾವು ಅಡಮಾನವಾಗಿ ಇಡುವ ಮನೆಪತ್ರ, ಇನ್ಸೂರೆನ್ಸ್ ಸರ್ಟಿಫಿಕೇಟ್ ಇತ್ಯಾದಿ ಮೂಲ ಆಸ್ತಿಪತ್ರಗಳು ಕಳೆದುಹೋದರೆ ಏನು ಗತಿ. ಇಂತಹ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ ಆರ್ ಬಿ ಐ ಈ ನಿಟ್ಟಿನಲ್ಲಿ ಗಮನ ಹರಿಸಿದ್ದು, ಸಾಲ ಪಡೆಯುವವರು ಆಸ್ತಿ ದಾಖಲೆಗಳು ಬ್ಯಾಂಕ್ ನಲ್ಲಿ ಕಳೆದುಹೋಗಿದ್ದರೆ,
ಆ ಗ್ರಾಹಕರಿಗೆ ಬ್ಯಾಂಕುಗಳು ಪರಿಹಾರ ನೀಡಬೇಕು. ಜೊತೆಗೆ ದಂಡವನ್ನೂ ಕಟ್ಟಿಕೊಡಬೇಕಾಗುವಂತಹ ನಿಯಮ ಜಾರಿ ಮಾಡಲು ಹೊರಟಿದೆ.

ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಸೇವೆಯ ಮಟ್ಟವನ್ನು ಪರಿಶೀಲಿಸಲು ಆರ್ ​ಬಿ ಐ ಕಳೆದ ವರ್ಷ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು. ಮಾಜಿ ಡೆಪ್ಯೂಟಿ ಆರ್ ​ಬಿ ಐ ಗವರ್ನರ್ ಬಿ.ಪಿ. ಕಣುಂಗೋ ನೇತೃತ್ವದ ಈ ಸಮಿತಿ ಹಲವು ಶಿಫಾರಸುಗಳನ್ನು ಒಳಗೊಂಡಿರುವ ತನ್ನ ವರದಿಯನ್ನು ಇದೇ ಏಪ್ರಿಲ್ ತಿಂಗಳಲ್ಲಿ ರಿಸರ್ವ್ ಬ್ಯಾಂಕ್​ಗೆ ಸಲ್ಲಿಸಿತ್ತು. ಆಸ್ತಿಪತ್ರ ಕಳೆದುಹೋದಾಗ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರ ಮತ್ತು ದಂಡ ಕಟ್ಟಿಕೊಡಬೇಕೆನ್ನುವುದು ಈ ಸಮಿತಿ ಮಾಡಿದ ಶಿಫಾರಸುಗಳಲ್ಲಿ ಸೇರಿದೆ.

RBI Rules On Loan Holder Documents
Image Source: India Today

ಗ್ರಾಹಕರ ಆಸ್ತಿಗಳಿಗೆ ಬ್ಯಾಂಕುಗಳೇ ಹೊಣೆ
ಸಾಮಾನ್ಯವಾಗಿ ಬ್ಯಾಂಕ್ ಗಳು ಗೃಹ ಸಾಲ ನೀಡುವ ಸಂಸ್ಥೆಗಳು ಸಾಲದ ಅವಧಿ ಮುಕ್ತಾಯದವರೆಗೆ ಆಸ್ತಿಯ ಮೂಲಕ ದಾಖಲೆಗಳನ್ನು ತಮ್ಮ ವಶದಲ್ಲಿಯೇ ಇರಿಸಿಕೊಳ್ಳುತ್ತದೆ. ಸಾಲ ನೀಡುವ ಸಂಸ್ಥೆಗಳು ಗ್ರಾಹಕರು ನೀಡುವ ಆಸ್ತಿಯ ದಾಖಲೆಗಳನ್ನು ಜಾಗರೂಕತೆಯಿಂದ ನಿರ್ವಹಿಸಿ ಅವುಗಳನ್ನು ಕಾಪಾಡಿಕೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ. ಕೆಲವು ಬ್ಯಾಂಕ್ ಗಳು ಇಂತಹ ದಾಖಲೆಗಳನ್ನು ತಮ್ಮ ಶಾಖೆಗಳಲ್ಲಿ ಅಥವಾ ಪ್ರಧಾನ ಕಚೇರಿಗಳಲ್ಲಿ ಇರಿಸಿಕೊಳ್ಳುತ್ತದೆ.

Join Nadunudi News WhatsApp Group

Join Nadunudi News WhatsApp Group