RCB v/s CSK: RCB ಎಷ್ಟು ರನ್ ಅಂತರದಿಂದ CSK ವಿರುದ್ಧ ವಿನ್ ಆದರೆ ಪ್ಲೇ ಆಫ್ ತಲುಪಲಿದೆ…? ಇಲ್ಲಿದೆ ಡೀಟೇಲ್ಸ್.

ಆರ್ ಸಿಬಿ CSK ಅನ್ನು ಹಿಂದಿಕ್ಕಿ ಪ್ಲೇಆಫ್ ಹಂತಕ್ಕೇರಲು ಏನು ಮಾಡಬೇಕು...?

RCB Playoff Update: ಪ್ರಸ್ತುತ ನಡೆಯುತ್ತಿರುವ IPL 2024 ಬಾರಿ ರೋಚಕ ತಿರುವು ಪಡೆಯುತ್ತಿದೆ. ಪಂದ್ಯದ ಆರಂಬಹದಲ್ಲೇ ಸೋಲನ್ನು ಕಂಡ RCB ಸದ್ಯ ಪ್ಲೇ ಆಫ್ ಕನಸಿಗಾಗಿ ಇದೀಗ ಸಾಲು ಸಾಲು ಜಯ ಗಳಿಸುತ್ತಿದೆ. RCB ತನ್ನ ಪ್ಲೇ ಆಫ್ ಕನಸನ್ನು ನನಸು ಮಾಡಿಕೊಳ್ಳಲು ಎಲ್ಲ ಪಂದ್ಯವನ್ನು ಗೆಲ್ಲುವುದು ಅನಿವಾರ್ಯವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನ 62 ಪಂದ್ಯಗಳು ಮುಗಿದಿವೆ. ಈ ಪಂದ್ಯಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5ನೇ ಸ್ಥಾನದಲ್ಲಿದೆ. CSK ತಂಡಕ್ಕೆ ಪ್ಲೇಆಫ್ ತಲುಪಲು ಕೇವಲ ಒಂದು ಪಂದ್ಯ ಮಾತ್ರ ಉಳಿದಿದೆ. ಆರ್‌ಸಿಬಿ ವಿರುದ್ಧ ಜಯ ಗಳಿಸಿದರೆ CSK ಪ್ಲೇ ಆಫ್ ಹಂತಕ್ಕೆ ತಲುಪಲಿದೆ. ಇನ್ನು RCB ಎಷ್ಟು ರನ್ ಅಂತರದಿಂದ CSK ವಿರುದ್ಧ ವಿನ್ ಆದರೆ ಪ್ಲೇ ಆಫ್ ತಲುಪಲಿದೆ…? ಎನ್ನುವ ಬಗ್ಗೆ ಇಲ್ಲಿದೆ ಡಿಟೈಲ್ಸ್.

RCB vs CSK
Image Credit: Scroll

RCB ಎಷ್ಟು ರನ್ ಅಂತರದಿಂದ CSK ವಿರುದ್ಧ ವಿನ್ ಆದರೆ ಪ್ಲೇ ಆಫ್ ತಲುಪಲಿದೆ…?
ಮೇ 18 ರಂದು ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಪಾಯಿಂಟ್ ಪಟ್ಟಿಯಲ್ಲಿ 3 ಅಥವಾ 4ನೇ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ. ಆದರೆ ಈಗಾಗಲೇ 14 ಅಂಕ ಹೊಂದಿರುವ ಸಿಎಸ್‌ಕೆ ವಿರುದ್ಧ ಭರ್ಜರಿ ಜಯ ಸಾಧಿಸಿದರೆ ಮಾತ್ರ ಆರ್‌ಸಿಬಿ ಅಗ್ರ-4 ಹಂತ ತಲುಪಲು ಸಾಧ್ಯ.

ಏಕೆಂದರೆ ಸಿಎಸ್ ಕೆ ತಂಡ +0.528 ನೆಟ್ ರನ್ ರೇಟ್ ಹೊಂದಿದ್ದು, ಆರ್ ಸಿಬಿ ತಂಡ ಈ ನೆಟ್ ರನ್ ರೇಟ್ ನ್ನು ಮೀರಿಸಿ 14 ಅಂಕ ಗಳಿಸಬೇಕಿದೆ. 0.387 ನೆಟ್ ರನ್ ರೇಟ್ ಹೊಂದಿರುವ RCB CSK ವಿರುದ್ಧ ಯಾವ ಅಂತರದಿಂದ ಗೆಲ್ಲಬಹುದು…? ಎಂದು ನೋಡೋಣ.

RCB Playoff Update
Image Credit: Timesnownews

ಆರ್ ಸಿಬಿ CSK ಅನ್ನು ಹಿಂದಿಕ್ಕಿ ಪ್ಲೇಆಫ್ ಹಂತಕ್ಕೇರಲು ಏನು ಮಾಡಬೇಕು
ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡವು ಮೊದಲು ಬ್ಯಾಟ್ ಮಾಡಿದರೆ 18 ರನ್​ಗಳ ಅಂತರದಿಂದ ಜಯ ಸಾಧಿಸಲೇಬೇಕು. ಉದಾಹರಣೆಗೆ ಆರ್​ಸಿಬಿ 200 ರನ್ ಕಲೆಹಾಕಿದರೆ, ಸಿಎಸ್​ಕೆ ತಂಡವನ್ನು 182 ರನ್​ ಗಳಿಗೆ ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಬೇಕು. ಈ ಮೂಲಕ ಕನಿಷ್ಠ 18 ರನ್​ ಗಳ ಅಂತರದ ಗೆಲುವು ಸಾಧಿಸಬೇಕು. ಒಂದು ವೇಳೆ ಆರ್​ಸಿಬಿ ತಂಡವು ಮೊದಲು ಬೌಲಿಂಗ್ ಮಾಡಿದರೆ, ಸಿಎಸ್​ಕೆ ತಂಡ ನೀಡುವ ಗುರಿಯನ್ನು ಕೇವಲ 18.1 ಓವರ್​ ಗಳಲ್ಲಿ ಚೇಸ್ ಮಾಡಬೇಕು.

Join Nadunudi News WhatsApp Group

ಉದಾಹರಣೆಗೆ ಸಿಎಸ್​ಕೆ ತಂಡವು 222 ರನ್ ​ಗಳ ಟಾರ್ಗೆಟ್ ನೀಡಿದರೆ, ಆರ್​ಸಿಬಿ ಅದನ್ನು 18.1 ಓವರ್ ​ಗಳಲ್ಲಿ ಬೆನ್ನತ್ತಿ ಜಯ ಸಾಧಿಸಬೇಕು. ಈ ಎರಡು ಲೆಕ್ಕಾಚಾರಗಳೊಂದಿಗೆ ಆರ್​ಸಿಬಿ ತಂಡವು ಸಿಎಸ್​ಕೆ ವಿರುದ್ಧ ಕಣಕ್ಕಿಳಿಯಲಿದೆ. ಈ ಅಂತರದ ಗೆಲುವು ಸಾಧಿಸಿದರೆ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಪ್ಲೇಆಫ್ ಹಂತಕ್ಕೇರಬಹುದು.

RCB Latest Update
Image Credit: Original Source

Join Nadunudi News WhatsApp Group