Agricultural: ಮನೆಯಲ್ಲೇ ಮಾಡುವ ಈ ಗೊಬ್ಬರ ಅಡಿಕೆ ತೋಟಕ್ಕೂ ಬೆಸ್ಟ್, ಕೃಷಿ ಮಾಡುವವರ ಗಮನಕ್ಕೆ.

ಮನೆಯಲ್ಲಿ ನೆಟ್ಟ ಗಿಡಗಳನ್ನು ಆರೈಕೆ ಮಾಡಲು ಮನೆಯಲ್ಲೇ ತಯಾರಿಸಿ ಈ ಗೊಬ್ಬರ.

Making Compost At Home: ಮನೆಯ ಸುತ್ತ ಮುತ್ತಲು ಔಷಧೀಯ ಗಿಡ (plant)ನೆಡಲು ಇತ್ತವೆ ತರತರದ ಹಣ್ಣಿನ ಹೂವಿನ ಗಿಡ ನೆಟ್ಟವರಿಗೆ ಸಾಧಾರಣವಾಗಿ ಕಾಡುವ ಒಂದು ವಿಚಾರ ಎಂದರೆ ಗಿಡಗಳ ಆರೈಕೆಯ ಸಮಸ್ಯೆ ಎನ್ನಬಹುದು. ಬರೀ ನೀರು ಹಾಕಿದ್ದರೆ ಗಿಡ ಪೋಷಕಾಂಶ ಯುಕ್ತವಾಗಿ ಬೆಳೆಯಲಾರದು ಆದರೆ ಅದಕ್ಕೆ ಬದಲಾಗಿ ಕೆಲ ಅಗತ್ಯ ಕ್ರಮ ಕಂಡುಕೊಳ್ಳುವ ಅಗತ್ಯತೆ ಇದೆ.

ಗಿಡಗಳ ಆರೈಕೆ ಮಾಡಿ ಉತ್ತಮ ಫಸಲು ಅಥವಾ ಹೂ ಹಣ್ಣು ಬರುವಂತೆ ಮಾಡಲು ಗೊಬ್ಬರ ಇಂದು ಅಗತ್ಯ ಪೋಷಕಾಂಶ ಆಗಿದೆ. ಆದರೆ ನಗರ ವಾಸಿಗಳಿಗೆ ಹಸು ಆರೈಕೆ ಅಷ್ಟಿಲ್ಲದ ಕಾರಣ ರಾಸಾಯನಿಕ ಅಂಶ ಹೆಚ್ಚಾಗಿ ಬಳಸುತ್ತಾರೆ ಆದರೆ ಇವರು ನಾವಿಂದು ಹೇಳುವ ಸರಳ ವಿಧಾನ ಬಳಸಿದರೆ ಯಾವುದೇ ಸಗಣಿ ಮುಟ್ಟುವ ಗೋಜಿಲ್ಲದೆ ಮನೆಯಲ್ಲಿಯೇ ಸರಳವಾಗಿ ಕಂಪೋಸ್ಟ್ ಗೊಬ್ಬರ (Compost) ಮಾಡಬಹುದು. ಅದು ಹೇಗೆ ಮಾಡಬೇಕು ಇನ್ನಿತರ ಮಾಹಿತಿ ಇಲ್ಲಿದೆ.

Making Compost At Home
Image Credit: Almanac

ಕಸದಿಂದ ರಸ

ತರಕಾರಿ ಉಪಯೋಗ ಮಾಡುವ ಅನೇಕರಿಗೆ ಅದರ ಸಿಪ್ಪೆಯ ಉಪಯೋಗ ಸರಿಯಾಗಿ ಗೊತ್ತಿಲ್ಲ. ಬೇಡ ಎಂದು ಬಿಸಾಕುವ ತರಕಾರಿಯ ಯಾವುದೇ ಭಾಗ ಕೂಡ ಕಂಪೋಸ್ಟ್ ಗೊಬ್ಬರಕ್ಕೆ ಬಳಸಬಹುದಾಗಿದೆ. ಮೊದಲಿಗೆ ತರಕಾರಿ ಸಿಪ್ಪೆಯನ್ನು ಸಣ್ಣಗೆ ಕಟ್ ಮಾಡಬೇಕು. ಪ್ಲಾಸ್ಟಿಕ್ ಅಥವಾ ಸಿಮೆಂಟ್ ಚಟ್ಟೆಗೆ ಎರಡು ಮೂರು ಹೋಲ್ ಮಾಡಿ ಬಳಿಕ ಅದಕ್ಕೆ ಒಣಗಿದ ಎಲೆ ಹಾಕಿ.

ಬಳಿಕ ಅದರ ಮೇಲೆ ತರಕಾರಿ ಹಾಗೂ ಹಣ್ಣಿನ ಸಿಪ್ಪೆ ಹಾಕಿ ಬಳಿಕ ಮತ್ತೆ ಒಣ ಎಲೆ ಹಾಕಿ. ಬೆಳ್ಳುಳ್ಳಿ ಮತ್ತು ಈರುಳ್ಳಿ ಸಿಪ್ಪೆ ಕೂಡ ಹಾಕಬಹುದು. ಇದರಿಂದ ಮಿನರಲ್ಸ್ ಪೊಟ್ಯಾಶಿಯಂ (minarals and potashiyam) ಕೂಡ ಸಿಗಲಿದೆ. ಬಳಿಕ ಎರಡು ಚಮಜ ಮಜ್ಜಿಗೆ ಹಾಕಬೇಕು ಹೀಗೆ ಬಳಿಕ ಒಣಗಿದ ಎಲೆ ಸಿಪ್ಪೆ ಒಂದಾದ ಮೇಲೆ ಒಂದರಂತೆ ಲೇಯರ್ ಮಾದರಿಯಲ್ಲಿ ಹಾಕಬೇಕು. ಬಳಿಕ 15 ದಿನದ ವರೆಗೆ ಅದನ್ನು ಮುಚ್ಚಿ ಇಡಬೇಕು.

Join Nadunudi News WhatsApp Group

compost for Arecanut Plant
Image Credit: Agrifarming

ಈ ಅವಧಿಯಲ್ಲಿ ವಾಸನೆ ಬರಲಿದೆ ಆಗ ಅದರ ತಳಭಾಗಕ್ಕೆ ಒಂದು ಪ್ಲೇಟ್ ಇಡಿ ಮತ್ತು ಬೇಕಿಂಗ್ ಸೋಡಾ ಬೆರಸಿ. ಬಳಿಕ ಆ ಪಾಟ್ ನಲ್ಲಿರುವ ಕಂಪೋಸ್ಟ್ ಅನ್ನು ಕಾಲಿ ಪಾಟ್ ಗೆ ಬದಲಾಯಿಸಿ. ಬಳಿಕ ಅದಕ್ಕೆ ಬೇವಿನ ಪುಡಿ ಹಾಕಿ ಆಗ ಕೀಟ ಭಾಧೇ ಬರಲಾರದು ಮನೆಯಲ್ಲೆ ಗೊಬ್ಬರ ಇದ್ದರೆ ಸ್ವಲ್ಪ ಹಾಕಬಹುದು.

ಹೀಗೆ ಬಿಸಿಲಿನಲ್ಲಿ ಒಣಗಿಸಿ ಒಂದರಿಂದ ಎರಡು ತಿಂಗಳ ಒಳಗೆ ಕಾಂಪೋಸ್ಟ್ ಗೊಬ್ಬರ ತಯಾರಾಗಲಿದೆ‌. ಕಾಂಪೋಸ್ಟ್ ಪೂರ್ತಿ ತಯಾರಾದ ಬಳಿಕ ಅದರ ವಾಸನೆಯೇ ಇರಲಾರದು. ಬಳಿಕ ಅದನ್ನು ಜಾಲರಿಗೆ ಹಾಕಿ ಕಸ ಎಲ್ಲ ತೆಗೆದರೆ ಎರಡು ಬಿಸಿಲಿಗೆ ಒಣಗಿಸಿದರೆ ಡ್ರೈ ಕಾಂಪೋಸ್ಟ್ ಪೌಡರ್ ನಿಮಗೆ ಸಿಗಲಿದೆ.

ಈ ಸರಳ ಮಾರ್ಗದ ಮೂಲಕ ಕಾಂಪೋಸ್ಟ್ ತಯಾರಿಸಿ ಮನೆಯಲ್ಲಿನ ಗಿಡಗಳನ್ನು ಆರೈಕೆ ಮಾಡಬಹುದಾಗಿದೆ. ಇದರಿಂದ ಹಣ್ಣು ತರಕಾರಿ ಸಿಪ್ಪೆ ಕೂಡ ಉಪಯೋಗಕ್ಕೆ ಬರಲಿದೆ ಮತ್ತು ಹೆಚ್ಚು ಕಸ ಕೂಡ ಆಗಲಾರದು ಎನ್ನಬಹುದು.

Join Nadunudi News WhatsApp Group