Redmi 12C: ಅತೀ ಕಡಿಮೆ ಬೆಲೆಯ Redmi 12C ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ, 5000 mAh ಬ್ಯಾಟರಿ.

ಭಾರತದಲ್ಲಿ ಕೇವಲ 8,999 ರೂಪಾಯಿಗೆ ಖರೀದಿಗೆ ಸಿಗುತ್ತಿದೆ ರೆಡ್ಮಿ 12 ಸಿ ಸ್ಮಾರ್ಟ್ ಫೋನ್.

Redmi 12C Smartphone Price And Review: ಭಾರತದಲ್ಲಿ ರೆಡ್ಮಿ 12 C (Redmi 12C) ಎಂಬ ಹೊಸ ಸ್ಮಾರ್ಟ್ ಫೋನು ತನ್ನ ಛಾಪನ್ನು ಪಸರಿಸುತ್ತಿದೆ. ಎಡಿದ ಈ ಸ್ಮಾರ್ಟ್ ಫೋನ್ ದೇಶದಲ್ಲಿ ಭರ್ಜರಿ ಮಾರಾಟ ಕಾಣುತ್ತಿದೆ. ಅಲ್ಲದೆ ಈ ಫೋನ್ ಅತಿ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು ಈ ಫೋನಿನ ವೈಶಿಷ್ಟ್ಯತೆ ಕೂಡ ಹೆಚ್ಚಿನ ರೂಪದಲ್ಲಿ ಕಂಡು ಬಂದಿದೆ.

Redmi 12C mobile launched in India
Image Credit: gadgets360

ರೆಡ್ಮಿ 12 ಸಿ ಸ್ಮಾರ್ಟ್ ಫೋನ್ ನ ಬೆಲೆ ಮತ್ತು ಬಣ್ಣಗಳು
ರೆಡ್ಮಿ 12 ಸಿ ಸ್ಮಾರ್ಟ್ ಫೋನ್ ಭಾರತದಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಾ ಇದೆ. ಈ ಫೋನ್ ಅತ್ತ್ಯುತ್ತಮ ಕ್ಯಾಮೆರಾ, ಸೆಟ್ ಅಪ್, ಬ್ಯಾಟರಿ ಹಾಗು ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ರೆಡ್ಮಿ 12 ಸಿ ಸ್ಮಾರ್ಟ್ ಫೋನು ಭಾರತದಲ್ಲಿ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ.

ಇದರ 4GB RAM+ 64GB ವೆರಿಯಂಟ್ ಗೆ ಕೇವಲ 8,999 ರೂಪಾಯಿ ಆಗಿದೆ. ಈ ಮೊಬೈಲ್ ಫೋನ್ ಆನ್ ಲೈನ್ ಅಲ್ಲಿ ಸಹ ಖರೀದಿ ಮಾಡಬಹುದು. ಅಮೆಜಾನ್, ಫ್ಲಿಪ್ ಕಾರ್ಟ್, ಸೇರಿದಂತೆ ಎಂ ಐ ಅಧಿಕೃತ ವೆಬ್ ಸೈಟ್ ನಲ್ಲಿ ಖರೀದಿಗೆ ಸಿಗುತ್ತಿದೆ. ಮ್ಯಾಟ್ ಬ್ಲಾಕ್, ಮಿಂಟ್ ಗ್ರೀನ್ ರಾಯಲ್ ಬ್ಲೂ ಮತ್ತು ಲ್ಯಾವೆಂಡರ್ ಪರ್ಪಲ್ ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ.

Redmi 12C mobile is launched in India and its price is around 9 thousand rupees.
Image vnexpressCredit:

ರೆಡ್ಮಿ 12 ಸಿ ಸ್ಮಾರ್ಟ್ ಫೋನ್ ನ ವೈಶಿಷ್ಟ್ಯತೆ
ಈ ಫೋನ್ ನ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಡ್ಯುಯೆಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ನಲ್ಲಿದೆ. ಇವುಗಳ ಜೊತಗೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಇನ್ನು ಈ ಫೋನ್​ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು ಇದಕ್ಕೆ ತಕ್ಕಂತೆ 10W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

Join Nadunudi News WhatsApp Group

Join Nadunudi News WhatsApp Group