Renault New: ಬೆಲೆ ಕೇವಲ 2 ಲಕ್ಷ ಮಾತ್ರ ಮತ್ತು ಮೈಲೇಜ್ ಭರ್ಜರಿ 22 Km , ಈ ಕಾರಿನ ಮುಂದೆ ಸ್ವಿಫ್ಟ್ ಬೇಡಿಕೆ ಕಡಿಮೆಯಾಗಿದೆ.

ಕೇವಲ 2 ಲಕ್ಷಕ್ಕೆ 22km ಮೈಲೇಜ್ ನ ಈ ಐಷಾರಾಮಿ ಕಾರ್

Renault Kwid Price And Feature: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ವಿಭಿನ್ನ ರೂಪಾಂತರ ಕಾರ್ ಗಳು ಲಭ್ಯವಿದೆ. ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಗಳು ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ಕಾರ್ ಖರೀದಿಸುವವರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿವೆ.

ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಕಾರ್ ಗಳ ಕಲೆಕ್ಷನ್ ಸಾಕಷ್ಟಿವೆ. ಇದೀಗ ಮಾರುಕಟ್ಟೆಯಲ್ಲಿ Renault ಕಂಪನಿಯು ತನ್ನ ಹೊಸ ಮಾದರಿಯನ್ನು ಪರಿಚಯಿಸಿಯಲಿದೆ. ಈ ನೂತನ ಮಾದರಿಯ ವೈಶಿಷ್ಟ್ಯ ಹಾಗೂ ಬೆಲೆಯ ಬಗ್ಗೆ ಕೇಳಿದರೆ ಕಾರ್ ಖರೀದಿಸಲು ನೀವು ಮನಸ್ಸು ಮಾಡುವುದಂತೂ ನಿಜ. ಆದ್ಯಾಗೂ, ಕಂಪನಿಯು ಈ ನೂತನ ಮಾದರಿಯನ್ನು ಕಡಿಮೆ EMI ನಲ್ಲಿ ಕೂಡ ನೀಡುತ್ತಿದೆ.

Renault Kwid Price In India
Image Credit: Motoroctane

ಮಾರುಕಟ್ಟೆಗೆ ಬಂತು ಹೆಚ್ಚಿನ ಮೈಲೇಜ್ ನೀಡುವ ರೆನಾಲ್ಟ್ ಕ್ವಿಡ್
ಹೊಸ ರೆನಾಲ್ಟ್ KWID ಕಾರು ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದೆ. RXE ಮತ್ತು RXL(O) ಸೇರಿದಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಸಹ ಲಭ್ಯವಿದೆ. ಐಸ್ ಕೂಲ್ ವೈಟ್, ಮೂನ್‌ ಲೈಟ್ ಸಿಲ್ವರ್ ಸೇರಿದಂತೆ 5-ಮೊನೊಟೋನ್ ಮತ್ತು 5-ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು  ರೆನಾಲ್ಟ್ KWID ನಲ್ಲಿ 5 ಮಂದಿ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಬಹುದು.

ಈ ಹ್ಯಾಚ್‌ ಬ್ಯಾಕ್ 1-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 68 ಪಿಎಸ್ ಗರಿಷ್ಠ ಪವರ್ ಮತ್ತು 91 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಂಟಿ (ಆಟೋಮೆಟಿಕ್) ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದ್ದು, ರೂಪಾಂತರಗಳಿಗೆ ಅನ್ವಯವಾಗಿ 21.46 ರಿಂದ  22.3km ವರೆಗೆ ಮೈಲೇಜ್ ನೀಡುತ್ತದೆ.

Renault Kwid Mileage
Image Credit: India Today

ಕೇವಲ 2 ಲಕ್ಷಕ್ಕೆ 22km ಮೈಲೇಜ್ ನ ಈ ಐಷಾರಾಮಿ ಕಾರ್
ಹೊಸ ರೆನಾಲ್ಟ್ ಕ್ವಿಡ್ ನಲ್ಲಿ 8-ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ, ಕೀಲೆಸ್ ಎಂಟ್ರಿ ಮತ್ತು ಮ್ಯಾನ್ಯುವಲ್ ಎಸಿ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ ಅನ್ನು ಕಾಣಬಹುದು. ಇನ್ನು ಈ ಮಾದರಿಯು 279 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಕೂಡ ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದಲೂ ಈ ಕಾರು ಹೆಚ್ಚಿನ ಅಫೀಚರ್ ಅನ್ನು ಹೊಂದಿದೆ.

Join Nadunudi News WhatsApp Group

ಇದು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್ (Antilock Braking System), ಇಬಿಡಿ (Electronic Brakeforce Distribution), ಟಿಪಿಎಂಎಸ್ (Tire Pressure Monitoring System), ಇಎಸ್‌ಪಿ (Electronic Stability Program), ಟಿಸಿಎಸ್ (Traction Control System) ಮತ್ತು ಹಿಲ್ ಸ್ಟಾರ್ಟ್‌ ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಈ ಕಾರಿನ ಬೆಲೆ ರೂ. 4.70 ಲಕ್ಷದಿಂದ ರೂ.6.45 ಲಕ್ಷದವರೆಗೆ ನಿಗದಿಪಡಿಸಲಾಗಿದೆ. ನೀವು ಈ ಕಾರನ್ನು ರೂ. 2 ಲಕ್ಷದ ಡೌನ್ ಪೇಮೆಂಟ್ ಮಾಡಿ ಖರೀದಿಸಬಹುದು. ನೀವು 7 ವರ್ಷಗಳ ಅವಧಿಗೆ ತಿಂಗಳಿಗೆ ರೂ. 5,966 ಇಎಂಐ ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Renault Kwid Price And Features
Image Credit: Indiacarnews

Join Nadunudi News WhatsApp Group