Bank Penalty: 5 ಸಹಕಾರಿ ಬ್ಯಾಂಕುಗಳಿಗೆ ದಂಡ ವಿಧಿಸಿದ RBI, ಮುಚ್ಚು ಭೀತಿಯಲ್ಲಿ ಈ 5 ಸಹಕಾರಿ ಬ್ಯಾಂಕುಗಳು

ಈ 5 ಸಹಕಾರಿ ಬ್ಯಾಂಕುಗಳಿಗೆ ದಂಡ ವಿಧಿಸಿದ RBI, ಸಂಕಷ್ಟದಲ್ಲಿ ಖಾತೆದಾರರು

RBI Penalty For Co-operative Bank:  Reserve Bank Of India ಸದ್ಯ ಬ್ಯಾಂಕುಗಳಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ಎಲ್ಲಾ ಬ್ಯಾಂಕ್ ಗಳು ಕೂಡ RBI ನಿಯಮಾನುಸಾರ ತಮ್ಮ ಹಣಕಾಸಿನ ವಹಿವಾಟನ್ನು ನಡೆಸುತ್ತಿದೆ. ಬ್ಯಾಂಕ್ ಗಳು ಗ್ರಾಹಕರಿಗೆ ಹೊಸ ನಿಯಮದ ಬಗ್ಗೆ ಮಾಹಿತಿ ನೀಡುತ್ತಿದೆ. ಇತ್ತೀಚಿಗೆ RBI ನಿಯಮ ಉಲ್ಲಂಘನೆ ಮಾಡಿದಂತಹ ಬ್ಯಾಂಕ್ ಗಳಿಗೆ ಬಾರಿ ದಂಡವನ್ನು ವಿಧಿಸುವುದರ ಜೊತೆಗೆ ಕೆಲ ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಪಡಿಸಿದೆ.

ಈಗಾಗಲೇ ಹಲವಾರು ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿರುವ RBI ಸದ್ಯ ದೇಶದ ಈ ಐದು ಸಹಕಾರಿ ಬ್ಯಾಂಕ್ ಗಳಿಗೆ ಬಾರಿ ಮೊತ್ತದ ದಂಡವನ್ನು ವಿಧಿಸಿದೆ. ಸದ್ಯದಲ್ಲೇ ಬ್ಯಾಂಕ್ ಗಳ ಪರವಾನಗಿ ಕೂಡ ರದ್ದು ಮಾಡುವ ಸಾಧ್ಯತೆ ಇದೆ. RBI ದಂಡ ವಿಧಿಸಿರುವ ಬ್ಯಾಂಕ್ ಗಳ ಪಟ್ಟಿಯಲ್ಲಿ ನೀವು ಖಾತೆ ಹೊಂದಿರುವ ಬ್ಯಾಂಕ್ ಇದೆಯೇ..? ಎನ್ನುವುದನ್ನು ಪರಿಶೀಸಿಕೊಳ್ಳಿ.

RBI Penalty For Co-operative Bank
Image Credit: Universaltimesmagazine

5 ಸಹಕಾರಿ ಬ್ಯಾಂಕುಗಳಿಗೆ ದಂಡ ವಿಧಿಸಿದ RBI
1. Indopur Co-operative Bank Limited,

2.The Patan Urban Co-operative Bank Limited,

3.Pune Merchants Co-operative Bank Limited,

Join Nadunudi News WhatsApp Group

4.Janakalyan Co-operative Bank Limited

5. Pune Muncipal Corporation Servants Co -operative Urban Bank LTD

Co-operative Bank Penalty
Image Credit: Punemirror

ಮುಚ್ಚು ಭೀತಿಯಲ್ಲಿ ಈ 5 ಸಹಕಾರಿ ಬ್ಯಾಂಕುಗಳು
•ಠೇವಣಿ ಖಾತೆ ಮತ್ತು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಯ ನಿಯಮಗಳನ್ನು ನಿರ್ಲಕ್ಷಿಸಿರುವ ಕಾರಣ ಕೇಂದ್ರ ಬ್ಯಾಂಕ್ ಇಂದಾಪುರ ಸಹಕಾರಿ ಬ್ಯಾಂಕ್ ಮತ್ತು ಪುಣೆ ಬ್ಯಾಂಕ್‌ಗೆ 5 ಲಕ್ಷ ದಂಡ ವಿಧಿಸಿದೆ.

•ಕ್ರೆಡಿಟ್ ಮಾಹಿತಿಯ ನಿಯಮಗಳನ್ನು ಅನುಸರಿಸಲು ನಿರ್ಲಕ್ಷಿಸಿದ ಕಾರಣಕ್ಕಾಗಿ ಆರ್‌ ಬಿಐ ಮುಂಬೈ ಮೂಲದ ಜನಕಲ್ಯಾಣ್ ಕೋ-ಆಪರೇಟಿವ್ ಬ್ಯಾಂಕ್ ಬ್ಯಾಂಕ್ ಲಿಮಿಟೆಡ್ ಗೆ 5 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.

•ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ RBI ನಿಯಮಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಸತಾರಾದ ಪಟಾನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗೆ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

•ಠೇವಣಿ ಖಾತೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡದ ಕಾರಣ ಪುಣೆ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ಆರ್‌ ಬಿಐ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

•ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಸರ್ವೆಂಟ್ಸ್ ಕೋಆಪರೇಟಿವ್ ಅರ್ಬನ್ ಬ್ಯಾಂಕಿನ ಅಸಮರ್ಪಕ ಮಾಹಿತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಹಂಚಿಕೊಳ್ಳದಿದ್ದಕ್ಕಾಗಿ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ.

Join Nadunudi News WhatsApp Group