Yash As Villain: ಹೀರೋ ಬದಲು ವಿಲನ್ ಆದ ರಾಕಿ ಬಾಯ್, ವಿಲನ್ ಆದ ಬಗ್ಗೆ ಸ್ಪಷ್ಟನೆ ನೀಡಿದ ಯಶ್.

ಯಶ್ ರಾವಣನ ಪಾತ್ರದಲ್ಲಿ ನಟಿಸಲು ಅಭಿಮಾನಿಗಳ ವಿರೋಧ, ವಿಲನ್ ಆದ ಬಗ್ಗೆ ಸ್ಪಷ್ಟನೆ ನೀಡಿದ ಯಶ್.

Actor Yash In Ravana Cast: ಪ್ಯಾನ್ ಇಂಡಿಯಾ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ (Yash) ಇತ್ತೀಚಿಗೆ ತಮ್ಮ ಮುಂದಿನ ಚಿತ್ರದ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಯಶ್ ಅಭಿಮಾನಿಗಳು ಯಶ್ ಅವರ 19 ನೇ ಚಿತ್ರದ ಘೋಷಣೆ ಸಲುವಾಗಿ ಕಾಯುತ್ತಿದ್ದಾರೆ. ಈಗಾಗಲೇ ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಅಪ್ಡೇಟ್ ಗಳು ಹರಡಿದ್ದವು. ಇದೀಗ ಯಶ್ ಮುಂದಿನ ಚಿತ್ರದ ಕುರಿತು ಹೊಸ ಮಾಹಿತಿಯೊಂದು ಲಭಿಸಿದೆ.

ಯಶ್ ಮುಂದಿನ ಚಿತ್ರ ಯಾವುದು
ನಟ ಯಶ್ ಅವರ ಕೆಜಿಎಫ್ 2 ಚಿತ್ರ ವಿಶ್ವದಾದ್ಯಂತ ಸಾಕಷ್ಟು ದಾಖಲೆ ಬರೆದಿದೆ. ಅದೆಷ್ಟೋ ಚಿತ್ರಗಳ ದಾಖಲೆಯನ್ನು ಯಶ್ ಅವರ ಕೆಜಿಎಫ್ ಚಿತ್ರ ಮುರಿದಿದೆ. ಇನ್ನು ಕೆಜಿಎಫ್ ಯಶಸ್ಸು ಕಂಡು ವರ್ಷಗಳೇ ಕಳೆದರು ಕೂಡ ಇನ್ನು ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ.

Fans oppose Yash playing Ravana's role
Image Credit: zoomnews

ಈಗಾಗಲೇ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರು ಯಶ್ ಅವರಿಗೆ ಕಥೆ ಬರೆಯಲಿದ್ದಾರೆ ಎನ್ನುವ ಮಾಹಿತಿ ಕೂಡ ಕೇಳಿಬಂದಿತ್ತು. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಯಶ್ ಮುಂದಿನ ನಟನೆಯ ಕುರಿತು ಅಚ್ಚರಿಯ ಸುದ್ದಿ ಕೇಳಿಬರುತ್ತಿದೆ.

ಹೀರೋ ಬದಲು ವಿಲನ್ ಆಗಿ ನಟಿಸಲಿದ್ದಾರಾ ರಾಕಿ ಬಾಯ್
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಚಿತ್ರದಲ್ಲಿ ನಟ ಯಶ್ ಅವರು ನೆಗೆಟಿವ್ ರೋಲ್ ಮಾಡಲಿದ್ದಾರೆ ಎನ್ನುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ನಟ ಯಶ್ ಅವರು ಬಾಲಿವುಡ್ ನ ಖ್ಯಾತ ನಿರ್ದೇಶಕರಾದ ನಿತೇಶ್ ತಿವಾರಿ ಅವರು ನಿರ್ದೇಶಿಸಲಿರುವ ರಾಮಾಯಣ್ ಚಿತ್ರದಲ್ಲಿ ವಿಲನ್ ಪಾತ್ರ ಮಾಡಲಿದ್ದಾರೆ ಎನ್ನುವ ಮಾಹಿತಿ ವೈರಲ್ ಆಗುತ್ತಿದೆ. ಆದರೆ ಈ ಸುದ್ದಿ ಕೇಳಿದ ಯಶ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Fans oppose Yash playing Ravana's role
Image Credit: filmfare

ಯಶ್ ರಾವಣನ ಪಾತ್ರದಲ್ಲಿ ನಟಿಸಲು ಅಭಿಮಾನಿಗಳ ವಿರೋಧ
ಯಶ್ ಅವರ ಟ್ವೀಟ್ ಖಾತೆಗೆ ಟ್ಯಾಗ್ ಮಾಡುವ ಮೂಲಕ ಯಶ್ ಅಭಿಮಾನಿಗಳು ರಾವಣ ಪಾತ್ರದ ಅಭಿನಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಫಿಲ್ಮಿ ಫೀವರ್ ಎಂಬ ಸಿನಿಮಾ ವೆಬ್ ತಾಣ ಯಶ್ ನೆಗೆಟಿವ್ ಪಾತ್ರದ ಕುರಿತು ಸ್ಪಷ್ಟನೆ ನೀಡಿದೆ.

Join Nadunudi News WhatsApp Group

“ರಾಕಿಂಗ್ ಸ್ಟಾರ್ ಯಶ್ ಅವರು ನಿತೇಶ್ ತಿವಾರಿ ಅವರ ರಾಮಾಯಣ್ ಚಿತ್ರದಲ್ಲಿ ರಾವಣ ಪಾತ್ರವನ್ನು ನಿರ್ವಹಿಸಲು ನಿರಾಕರಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಈ ಸುದ್ದಿ ಕೇಳಿ ಯಶ್ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

Fans oppose Yash playing Ravana's role
Image Credit: filmfare

ವಿಲನ್ ಆದ ಬಗ್ಗೆ ಸ್ಪಷ್ಟನೆ ನೀಡಿದ ಯಶ್
ರಾವಣನ ಪಾತ್ರ ನಿರ್ವಹಿಸುವುದು ನಿಮ್ಮ ಅಭಿಮಾನಿಗಳಿಗೆ ಇಷ್ಟವಿಲ್ಲ, ರಾವನಷ್ಟೇ ಬಲಿಷ್ಠವಾದ ಮತ್ಯಾವುದೇ ಖಳ ನಾಯಕನ ಪಾತ್ರ ಮಾಡಿದರು ಸಹ ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ ಎಂದು ಯಶ್ ಆಪ್ತ ವಲಯ ಯಶ್ ಅವರಿಗೆ ತಿಳಿಸಿದೆ.

ಇನ್ನು ಈ ಹಿಂದೆ ಸಂದರ್ಶನದಲ್ಲಿ ಮಾತನಾಡುವಾಗ ಯಶ್ ಅವರು ‘ನನ್ನ ಅಭಿಮಾನಿಗಳ ಭಾವನೆಗಳ ಬಗ್ಗೆ ನಾನು ತುಂಬಾ ಜಾಗರೂಕನಾಗಿರಬೇಕು. ಅವರು ತುಂಬಾ ಭಾವನಾತ್ಮಕವಾಗಿರುತ್ತಾರೆ ಮತ್ತು ನಾನು ಅವರ ಇಚ್ಛೆಗೆ ವಿರುದ್ಧವಾಗಿ ಹೋದಾಗ ಅತಿಯಾಗಿ ಪ್ರತಿಕ್ರಿಯಿಸುತ್ತಾರೆ” ಎಂದು ಹೇಳಿದ್ದರು. ಯಶ್ ಪರೋಕ್ಷವಾಗಿ ವಿಲನ್ ಆಗಿ ನಟಿಸುವುದನ್ನು ನಿರಾಕರಿಸಿದ್ದಾರೆ.

Join Nadunudi News WhatsApp Group