Rohit Sharma: ಗಿಲ್ ಮಾಡಿದ ಆ ಒಂದು ತಪ್ಪಿಗೆ ಮೊದಲ ಎಸೆತದಲ್ಲೇ ಔಟ್ ಆದ ರೋಹಿತ್, ವಿಡಿಯೋ ಸಕತ್ ವೈರಲ್

ಶುಭ್ಮಾನ್ ಗಿಲ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ ರೋಹಿತ್ ಶರ್ಮ.

Rohit Sharma Angry On Shubman Gill : ಮೊಹಾಲಿಯಲ್ಲಿ ನೆಡೆದ ಮೊದಲ T20 ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ್ 5 ವಿಕೆಟ್ ನೊಂದಿಗೆ 158 ರನ್ ಅನ್ನು ಗಳಿಸಿದೆ.

ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು ಗೆಲುವಿನ ಗರಿಯನ್ನು ಮುಡಿಗೇರಿಸಿಕೊಂಡಿದೆ. ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಒಂದು ಶಾಕಿಂಗ್ ಘಟನೆ ನೆಡೆದಿತ್ತು. ಅದೇನೆಂದು ನಾವೀಗ ತಿಳಿದುಕೊಳ್ಳೋಣ.

Afghanistan And India T20 Match
Image Credit: Hindustantimes

ಮೊದಲ ಓವರ್ ನಲ್ಲಿ ಖಾತೆ ತೆರೆಯದೆ ಪೆವಿಲಿಯನ್ ಗೆ ಮರಳಿದ ರೋಹಿತ್
14 ತಿಂಗಳ ಬಳಿಕ ರೋಹಿತ್ ಶರ್ಮಾ (Rohit Sharma) T20 ಗೆ ಪುನರಾಗಮನ ಮಾಡಿದ್ದಾರೆ. ರೋಹಿತ್ ಶರ್ಮ ಮೊಹಾಲಿಯಲ್ಲಿ ನೆಡೆದ ಮೊದಲ T20 ಪಂದ್ಯದ ಮೊದಲ ಓವರ್ ನಲ್ಲಿ ಔಟ್ ಆಗಿದ್ದರು. ಹೌದು ರೋಹಿತ್ ಶರ್ಮ ಮೊದಲ ಓವರ್ ನ ಎರಡನೇ ಎಸೆತದಲ್ಲಿ ಮುಂದೆ ಹೋಗಿ ಮಿಡ್-ಆಫ್‌ ನಲ್ಲಿ ಶಾಟ್ ಆಡಿ ರನ್‌ ಗಳಿಸಲು ಓಡುತ್ತಾರೆ.

ಆದರೆ ಮಿಡ್-ಆಫ್ ನಲ್ಲಿ ನಿಂತಿದ್ದ ಜದ್ರಾನ್ ಚೆಂಡನ್ನು ಹಿಡಿದು ಸ್ಟ್ರೈಕರ್ ಎಂಡ್ ನಲ್ಲಿ ಎಸೆಯುವ ಹೊತ್ತಿಗೆ ರೋಹಿತ್ ನಾನ್-ಸ್ಟ್ರೈಕರ್ ಎಂಡ್ ಅನ್ನು ತಲುಪಿದ್ದರು. ರೋಹಿತ್ ಗೆ ಪ್ರತಿಕ್ರಿಯಿಸುವ ಬದಲು ಶುಭ್ಮಾನ್ ಚೆಂಡನ್ನು ನೋಡುತ್ತಾ ನಿಂತಿದ್ದರು. ಶುಭ್ಮನ್ ಕ್ರೀಸ್‌ ನಲ್ಲಿರುವುದರಿಂದ ರೋಹಿತ್ ರನ್ ಔಟ್ ಆಗಬೇಕಾಯಿತು. ಇದರಿಂದ ರೋಹಿತ್ ಶರ್ಮ ಖಾತೆ ತೆರೆಯದೆ ಪೆವಿಲಿಯನ್ ಗೆ ಮರಳಬೇಕಾಯಿತು.

Rohit Sharma Angry On Shubman Gill
Image Credit: Cricketnmore

ಶುಭ್ಮಾನ್ ಗಿಲ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ ರೋಹಿತ್ ಶರ್ಮ
ಶುಭ್ಮಾನ್ ಗಿಲ್ (Shubman Gill) ನಿಂದ ರನ್ ಔಟ್ ಆದ ರೋಹಿತ್ ಶರ್ಮ ಲೈವ್ ಮ್ಯಾಚ್ (Live Match) ನಲ್ಲೆ ಶುಭ್ಮಾನ್ ಗಿಲ್ ಮೇಲೆ ಕೋಪವನ್ನು ಹೊರಹಾಕಿದ್ದಾರೆ. ಆದರೆ ಗಿಲ್ ಕೂಡ ಕೆಲವು ಸ್ಪಷ್ಟನೆಗಳನ್ನು ನೀಡಿದ್ದಾರೆ. ರೋಹಿತ್ ಅಸಮಾಧಾನದಿಂದ ಶುಭ್ಮಾನ್ ಗಿಲ್ ಗೆ ಬೈದುಕೊಂಡು ಪೆವಿಲಿಯನ್ ಗೆ ಹೋಗುತ್ತಾರೆ. ಇನ್ನು ರೋಹಿತ್ ಶರ್ಮ ಪೆವಿಲಿಯನ್‌ ಗೆ ಮರಳಿದ ನಂತರ ಶುಭ್ಮನ್ ಗಿಲ್ ಕೆಲವು ಉತ್ತಮ ಹೊಡೆತಗಳನ್ನು ಆಡುತ್ತಾರೆ, ನಂತರ ಅವರು 4 ನೇ ಓವರ್ ನಲ್ಲಿ ಔಟ್ ಆಗಿ ಪೆವಿಲಿಯನ್ ಗೆ ಮರಳುತ್ತಾರೆ.

Join Nadunudi News WhatsApp Group

Join Nadunudi News WhatsApp Group