T20 2024: T20 ವಿಶ್ವಕಪ್ ನಲ್ಲಿ ಭಾರತದ ತಂಡದ ನಾಯಕ ರೋಹಿತ್ ಶರ್ಮ ಅಲ್ಲ, ನಾಯಕ ಸ್ಥಾನ ಬದಲಾವಣೆ.

T20 ವಿಶ್ವಕಪ್ ನಲ್ಲಿ ಭಾರತದ ತಂಡದ ನಾಯಕ ರೋಹಿತ್ ಶರ್ಮ ಅಲ್ಲ

Rohit Sharma Captaincy: ಪ್ರಸ್ತುತ IPL 17 ನೇ ಆವೃತ್ತಿ ನಡೆಯುತ್ತಿದೆ. ಇನ್ನೇನು ಕೆಲವು ಪಂದ್ಯಗಳು ನಡೆದರೆ IPL 2024 ರ ಕಪ್ ಯಾರ ಪಾಲಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯುತ್ತದೆ. ಇನ್ನು IPL ಮುಗಿದ ಬಳಿಕ T20 ಆರಂಭವಾಯುತ್ತದೆ. ICC 2024 ರ T20 ಗಾಗಿ ತಂಡವನ್ನು ರಚಿಸುವಲ್ಲಿ ಬ್ಯುಸಿ ಆಗಿದೆ. T20 ತಂಡಕ್ಕಾಗಿ IPL ನಲ್ಲಿ ಆಡುವ ಪ್ರತಿಯೊಬ್ಬರನ್ನು ICC ಗಮನಿಸುತ್ತಿದೆ.

ಸದ್ಯ T20 2024 ರ ಕ್ಯಾಪ್ಟನ್ಸಿ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಈ ಬಾರಿಯ T20 ರಲ್ಲಿ ಭಾರತ ತಂಡದ ನಾಯಕ ಬದಲಾಗಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. IPL ನಲ್ಲಿ ರೋಹಿತ್ ಶರ್ಮ ಕ್ಯಾಪ್ಟನ್ಸಿ ಕಳೆದುಕೊಂಡಂತೆ ಈ ಬಾರಿ T20 ಯಲ್ಲಿ ಕೂಡ ರೋಹಿತ್ ಶರ್ಮ ಕ್ಯಾಪ್ಟನ್ಸಿ ಕೈತಪ್ಪಿ ಹೋಗಲಿದೆ.

Rohit Sharma Captaincy
Image Credit: Aajtak

T20 ವಿಶ್ವಕಪ್ ನಲ್ಲಿ ಭಾರತದ ತಂಡದ ನಾಯಕ ರೋಹಿತ್ ಶರ್ಮ ಅಲ್ಲ
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಜಿ ನಿರ್ದೇಶಕ ಜಾಯ್ ಭಟ್ಟಾಚಾರ್ಯ ಅವರು ಐಸಿಸಿ ಟಿ 20 ವಿಶ್ವಕಪ್ 2024 ರ ಮೊದಲು ಭಾರತೀಯ ನಾಯಕ ರೋಹಿತ್ ಶರ್ಮಾ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಮುಂಬರುವ T20 ವಿಶ್ವಕಪ್ ಗೆ 5 ಸದಸ್ಯರ ತಂಡವನ್ನು ಸಿದ್ಧಪಡಿಸಲು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ರೋಹಿತ್ ಏಪ್ರಿಲ್ 30 ರ ಮೊದಲು ದೆಹಲಿಗೆ ಭೇಟಿ ನೀಡಲಿದ್ದಾರೆ. ಈ ಮಧ್ಯೆ ಆಯ್ಕೆ ಸಮಿತಿಯು ಸಮತೋಲಿತ ಮತ್ತು ಬಲಿಷ್ಠ ತಂಡವನ್ನು ಆಯ್ಕೆ ಮಾಡಬೇಕಾಗಿದೆ. ಇದೇ ಸಂದರ್ಭದಲ್ಲಿ ರೋಹಿತ್ ಟಿ20 ವಿಶ್ವಕಪ್‌ ಗೆ ಭಾರತದ ಅನರ್ಹ ನಾಯಕ ಎಂದು ಜಾಯ್ ಭಟ್ಟಾಚಾರ್ಯ ಹೇಳಿದ್ದಾರೆ.

ರೋಹಿತ್ ಅವರನ್ನು ಟೀಂ ಇಂಡಿಯಾ ನಾಯಕನನ್ನಾಗಿ ಮಾಡುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರವನ್ನು ಜಾಯ್ ಟೀಕಿಸಿದ್ದಾರೆ. ಕ್ರಿಕ್‌ ಬಜ್‌ ನೊಂದಿಗೆ ಮಾತನಾಡಿದ ಅವರು ರೋಹಿತ್ ಶರ್ಮಾ ಅವರನ್ನು ಟಿ 20 ವಿಶ್ವಕಪ್‌ ಗೆ ಭಾರತದ ನಾಯಕರನ್ನಾಗಿ ನೇಮಿಸುವ ಮೂಲಕ ಅವರು ತಮ್ಮನ್ನು ತಾವು ತೊಂದರೆಗೆ ಸಿಲುಕಿಸಿದ್ದಾರೆ. ಈ ಸಮಯದಲ್ಲಿ ರೋಹಿತ್ ಈ ಮಾದರಿಯಲ್ಲಿ (ಟಿ 20) ನಾಯಕರಾಗಬೇಕು ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.

Rohit Sharma Latest News Update
Image Credit: News 18

ನಾಯಕ ಸ್ಥಾನ ಬದಲಾವಣೆ
ಅವರ ಬಗ್ಗೆ ನನಗೆ ಗೌರವವಿದೆ. ಅವರೊಬ್ಬ ಅದ್ಭುತ ಕ್ರಿಕೆಟಿಗ ಆದರೆ ಭಾರತಕ್ಕೆ ಆಯ್ಕೆಯಾಗಿ ಬ್ಯಾಟಿಂಗ್ ಮಾಡುವ ಸ್ಥಿತಿಯಲ್ಲಿಲ್ಲ.” ವಿರಾಟ್ ಕೊಹ್ಲಿ, ಯಸ್ಸವಿ ಜೈಸ್ವಾಲ್, ಶುಭಮನ್ ಗಿಲ್ ರೋಹಿತ್ ಶರ್ಮಾ ಅವರಿಗಿಂತ ಉತ್ತಮ ಫಾರ್ಮ್‌ ನಲ್ಲಿದ್ದಾರೆ. ಅವರ ನಡುವೆ ಆರಂಭಿಕ ಸ್ಥಾನಕ್ಕಾಗಿ ಕಠಿಣ ಪೈಪೋಟಿ ಇದೆ. ಶರ್ಮಾ ಕ್ಯಾಪ್ಟನ್ ಆಗಿರುವುದೂ ನಿಜವೇ ಹಾಗಾಗಿ ಅವರೇ ಓಪನ್ ಮಾಡುತ್ತಾರೆ. ಒಬ್ಬ ಆಟಗಾರ ಕೆಳ ಕ್ರಮಾಂಕದಲ್ಲಿ ಒಂದು ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು, ”ಎಂದು ಭಟ್ಟಾಚಾರ್ಯ ಹೇಳಿದರು.

Join Nadunudi News WhatsApp Group

Rohit Sharma IPL 2024
Image Credit: TV9hindi

Join Nadunudi News WhatsApp Group