Rohit Sharma: ಮುಂದಿನ IPL ನಲ್ಲಿ ಈ ತಂಡದ ಕ್ಯಾಪ್ಟನ್ ಆಗಲಿದ್ದಾರೆ ರೋಹಿತ್ ಶರ್ಮಾ, ಮುಂಬೈ ನಿಂದ ಶರ್ಮಾ ಹೊರಕ್ಕೆ.

2025 ರ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಬೇರೆ ತಂಡದ ನಾಯಕನಾಗಲಿದ್ದಾರೆ

Rohit Sharma Latest Update: ಮುಂಬೈ ಇಂಡಿಯನ್ಸ್ ಐಪಿಎಲ್ ಹರಾಜು 2024 ರ ಮೊದಲು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಹಠಾತ್ ತೆಗೆದುಹಾಕುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಈ ನಿರ್ಧಾರದ ನಂತರ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಂದ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ಹಾರ್ದಿಕ್ ಪಾಂಡ್ಯ ಅವರನ್ನು MI ತಂಡಕ್ಕೆ ನಾಯಕರನ್ನಾಗಿಸುವುದು ಬಾರಿ ಚರ್ಚೆಗೆ ಕಾರಣವಾಗಿದೆ.

ಅಷ್ಟೇ ಅಲ್ಲ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಕೂಡ ತೀವ್ರ ವಿರೋಧ ಎದುರಿಸುತ್ತಿದ್ದಾರೆ. IPL 2024 ರಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರೋಹಿತ್ ಶರ್ಮ ಅವರ ನಡುವೆ ಬಾರಿ ಮನಸ್ತಾಪ ಏರ್ಪಟ್ಟಿದೆ ಎನ್ನುವ ಬಗ್ಗೆ ಕೂಡ ಮಾಹಿತಿ ಲಭಿಸಿದೆ.

ಇನ್ನು ರೋಹಿತ್ ಶರ್ಮಾ ಶೀಘ್ರದಲ್ಲೇ ಮುಂಬೈ ಇಂಡಿಯನ್ಸ್‌ ನಿಂದ ಹೊರ ನಡೆಯಲು ಆಗಲು ನಿರ್ಧರಿಸಿದ್ದಾರೆ ಎನ್ನುವ ವದಂತಿ ಕೂಡ ಕೇಳಿ ಬರುತ್ತಿದೆ. ಅದಾಗ್ಯೂ ರೋಹಿತ್ ಶರ್ಮಾ ಅವರು MI ತಂಡವನ್ನು ತ್ಯಜಿಸಿದರೆ ಯಾವ ತಂಡ ಸೇರಲಿದ್ದಾರೆ ಅನ್ನುವ ಪ್ರಶ್ನೆ ಸಾಕಷ್ಟು ಜನರನ್ನ ಕಾಡುತ್ತಿದೆ.

Rohit Sharma Latest Update
Image Credit: Hindustan Times

ಮುಂದಿನ IPL ನಲ್ಲಿ ಈ ತಂಡದ ಕ್ಯಾಪ್ಟನ್ ಆಗಲಿದ್ದಾರೆ ರೋಹಿತ್ ಶರ್ಮಾ
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಿದಾಗಿನಿಂದ ಅವರು ತಂಡವನ್ನು ತೊರೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ಐಪಿಎಲ್ ಋತುವಿನಲ್ಲಿ ರೋಹಿತ್ ಶರ್ಮಾ Chennai Super Kings ಸೇರಬಹುದು ಎಂಬ ಮಾತು ಕೇಳಿಬರುತ್ತಿದೆ. ಅವರನ್ನು ನಾಯಕನಾಗಿ CSK ಗೆ ಸೇರಿಸಿಕೊಳ್ಳಬಹುದು.

ವಾಸ್ತವವಾಗಿ, CSK ನ ಅತ್ಯಂತ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ IPL ನಿಂದ ನಿವೃತ್ತಿ ಘೋಷಿಸಬಹುದು. ಧೋನಿ ನಂತರ ಸಿಎಸ್ ಕೆಗೆ ಅನುಭವಿ ಆಟಗಾರನ ಅಗತ್ಯವಿದ್ದು, ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದೆಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ.

Join Nadunudi News WhatsApp Group

rohit sharma in ipl 2024
Image Credit: mykhel

ಮುಂಬೈ ನಿಂದ ಶರ್ಮಾ ಹೊರಕ್ಕೆ
ಮುಂಬೈ ಇಂಡಿಯನ್ಸ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಐಪಿಎಲ್ 17 ನೇ ಸೀಸನ್‌ ನಲ್ಲಿ ಬಹಳ ಕಳಪೆ ಪ್ರದರ್ಶನವನ್ನು ನೀಡಿದೆ. MI ತಂಡ ಸತತ ಪಂದ್ಯಗಳನ್ನು ಸೋಲುತಿದ್ದಾರೆ. ಇಲ್ಲಿಯವರೆಗೆ ಮುಂಬೈ ಈ ಋತುವಿನಲ್ಲಿ 4 ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಗೆಲುವು ದಾಖಲಿಸಿದೆ.

ಈ ಬಾರಿ ಮುಂಬೈನ ಸೋಲಿಗೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಯನ್ನು ಹೊಣೆ ಮಾಡಲಾಗುತ್ತಿದೆ. ಇನ್ನು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ಕೆಳಗಿಳಿಸಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದು, ಅದೇ ರೀತಿ ಮುಂದಿನ IPL ನಲ್ಲಿ Rohith Sharma ಮುಂಬೈ ತಂಡದಿಂದ ಹೊರಕ್ಕುಲಿಯಲಿದ್ದಾರೆ ಎನ್ನುವ ಬಗ್ಗೆ ಕೂಡ ಮಾಹಿತಿ ಕೇಳಿಬರುತ್ತಿದೆ.

rohit sharma mumbai captain
Image Credit: aajtak

Join Nadunudi News WhatsApp Group