Roopesh Shetty: ಸಾನ್ಯ ಮತ್ತು ರೂಪೇಶ್ ಶೆಟ್ಟಿ ಮದುವೆ ಫಿಕ್ಸ್ ಆಯಿತು, ಅನುಮಾನ ಹೊರಹಾಕಿದ ನೆಟ್ಟಿಗರು.

ಸಾನ್ಯ ಅಯ್ಯರ್ ಅವರ ಮನೆಯಲ್ಲಿ ರೂಪೇಶ್ ಶೆಟ್ಟಿ ಅವರು ಕಾಣಿಸಿಕೊಂಡ ಕಾರಣ ಇಬ್ಬರ ಮದುವೆ ಫಿಕ್ಸ್ ಆಗಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

Sanya Iyer And Roopesh Shetty: ಬಿಗ್ ಬಾಸ್ ಖ್ಯಾತಿಯ ನಟಿ ಸಾನ್ಯಾ ಅಯ್ಯರ್ (Sanya Iyer) ಹಾಗು ರೂಪೇಶ್ ಶೆಟ್ಟಿ (Roopesh Shetty) ಇದೀಗ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಸೀಸನ್ 9 (Bigg Boss Season 9)ರಲ್ಲಿ ಪರಿಚಯರಾಗಿದ್ದ ಈ ಜೋಡಿ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದರು.

Sanya Iyer And Roopesh Shetty
Image Source: Times Of India

ಬಿಗ್ ಬಾಸ್ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ರೂಪೇಶ್ ಶೆಟ್ಟಿ ಹಾಗು ನಟಿ ಸಾನ್ಯಾ ಅಯ್ಯರ್ ಅವರ ನಡುವೆ ಪ್ರೀತಿ ಪ್ರೇಮ ಇದೆ ಎಂದು ಹಲವರು ತಿಳಿದುಕೊಂಡಿದ್ದರು. ಆದರೆ ಈ ಜೋಡಿ ಬಿಗ್ ಬಾಸ್ ಮನೆಯಿಂದ ಹೊರ ಬಂದು ನಮ್ಮ ನಡುವೆ ಒಳ್ಳೆಯ ಗೆಳೆತನ ಇದೆ, ಇನ್ನೇನು ಇಲ್ಲ ಎಂದಿದ್ದರು. ಇದೀಗ ಸಾನ್ಯಾ ಅಯ್ಯರ್ ಮನೆಯಲ್ಲಿ ರೂಪೇಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

Sanya Iyer And Roopesh Shetty
Image Source: Instagram

ಸಾನ್ಯಾ ಅಯ್ಯರ್ ಮನೆಯಲ್ಲಿ ಕಾಣಿಸಿಕೊಂಡ ರೂಪೇಶ್ ಶೆಟ್ಟಿ
ನಟ ರೂಪೇಶ್ ಶೆಟ್ಟಿ ಸಾನ್ಯಾ ಅಯ್ಯರ್ ಮನೆಗೆ ಹೋದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇಬ್ಬರ ನಡುವೆ ಮದುವೆ ಮಾತುಕತೆ ಆಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ರೂಪೇಶ್ ಶೆಟ್ಟಿ ಶೇರ್ ಮಾಡಿರುವ ಫೋಟೋದಲ್ಲಿ ಸಾನ್ಯಾ ಅಯ್ಯರ್ ಮತ್ತು ಅವರ ಕುಟುಂಬದವರು ಇದ್ದಾರೆ. ಎಲ್ಲರೂ ಖುಷಿಯಿಂದ ಫೋಟೋಗೆ ಪೋಸ್ ನೀಡಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Sanya Iyer And Roopesh Shetty
Image Source: Instagram

ಬಿಗ್ ಬಾಸ್ ಸಾನ್ಯಾ ಮತ್ತು ರೂಪೇಶ್ ಶೆಟ್ಟಿ
ಸಾನ್ಯಾ ಅಯ್ಯರ್ ಹಾಗು ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ಇಬ್ಬರಿಗೂ ಮದುವೆ ಬಗ್ಗೆ ಸಂದರ್ಶನದಲ್ಲಿ ಕೇಳಲಾಯಿತು. ಆದರೆ ಇಬ್ಬರು ನಾವಿಬ್ಬರು ಫ್ರೆಂಡ್ಸ್ ನಮಗೆ ನಮ್ಮ ಕೆರಿಯರ್ ಮುಖ್ಯ ಎಂದಿದ್ದರು. ಇದೀಗ ರೂಪೇಶ್ ಶೆಟ್ಟಿ ಸಾನ್ಯಾ ಅಯ್ಯರ್ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿದ್ದನ್ನು ನೋಡಿ ನೆಟ್ಟಿಗರು ಮದುವೆ ಫಿಕ್ಸ್ ಆಗಿದೆ ಎಂದು ತಿಳಿದುಕೊಂಡಿದ್ದಾರೆ.

Join Nadunudi News WhatsApp Group

Sanya Iyer And Roopesh Shetty
Image Source: Instagram

Join Nadunudi News WhatsApp Group