RTC And Aadhaar: ರೈತರಿಗೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್, ಪಹಣಿಗೆ ಆಧಾರ್ ಲಿಂಕ್ ಮಾಡದಿದ್ದರೆ ಹಣ ಬರಲ್ಲ

ರೈತರು ತಮ್ಮ RTC ಜೊತೆ Aadhaar Link ಮಾಡಿಸುವುದು ಕಡ್ಡಾಯವಾಗಿದೆ

Aadhaar Link  For RTC: ಸದ್ಯ ರೈತರ ಬರ ಪರಿಹಾರಕ್ಕಾಗಿ ಸರ್ಕಾರ ಮುಂದಾಗಿದೆ. ಬೆಳೆ ಹಾನಿಯಿಂದಾಗಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಸದ್ಯ ಬರ ಪರಿಹಾರದಿಂದ ಯಾವ ರೈತರು ಕೂಡ ವಂಚಿತರಬಾರದು ಎನ್ನುವ ಕಾರಣಕ್ಕೆ ಸರ್ಕಾರ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ರೈತರು ತಮ್ಮ ಪಹಣಿ (RTC) ಗೆ ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ.

RTC Link With Aadhar Card
Image Credit: Original Source

ರೈತರಿಗೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್
ರಾಜ್ಯದಲ್ಲಿ ಒಟ್ಟಾರೆ 70 % ರಷ್ಟು ಸಣ್ಣ ರೈತರಿದ್ದಾರೆ ಆದರೆ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಶೇ. 44 ರಷ್ಟು ಮಾತ್ರ. ಇದರಿಂದಾಗಿ ಕೇಂದ್ರದಿಂದ ಲಭ್ಯವಾಗುವ ಬರ ಪರಿಹಾರದಿಂದ ಸಾಕಷ್ಟು ರೈತರು ವಂಚಿತರಾಗುತ್ತಿದ್ದಾರೆ.

ಈ ಸಮಸ್ಯೆಯನ್ನು ಪರಿಹರಿಸಿಕೊಳಲು ರಾಜ್ಯದ ರೈತರು ತಮ್ಮ RTC ಜೊತೆ Aadhaar Link ಮಾಡುವುದು ಕಡ್ಡಾಯವಾಗಿದೆ. RTC ಜೊತೆ ಆಧಾರ್ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿ ಅಂಶಗಳ ಬಗ್ಗೆ ಮಾಹಿತಿ ಲಭಿಸುತ್ತದೆ. ಹೀಗಾಗಿ ಎಲ್ಲ ರೈತರು ತಮ್ಮ RTC ಜೊತೆ Aadhaar Link ಮಾಡಿಕೊಳ್ಳುವ ಮೂಲಕ ಸರ್ಕಾರ ಸೌಲಭ್ಯವನ್ನು ಪಡೆದುಕೊಳಬಹುದಾಗಿದೆ.

RTC Document Latest Update
Image Credit: Legalraasta

RTC ಜೊತೆ ಆಧಾರ್ ಲಿಂಕ್ ಕಡ್ಡಾಯ
ಜಿಲ್ಲೆಯಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ಮುಗಿದಿದೆ. ಆದರೆ ಶೇ. 33 ರಷ್ಟು ಒಟ್ಟು ರೈತರ ಒಟ್ಟು ಜಮೀನಿನ ವಿಸ್ತೀರ್ಣದ ಮಾಹಿತಿ ನಿಖರವಾಗಿ ನಮೂದಿಸಲಾಗಿಲ್ಲ. ಅಧಿಕಾರಿಗಳ ಇಂತಹ ನಡೆಯಿಂದ ರೈತರಿಗೆ ಅನ್ಯಾಯವಾಗಲಿದೆ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಆತನ ಅಧಿಕಾರದ ವ್ಯಾಪ್ತಿಯಲ್ಲಿ ಯಾವ ರೈತನಿಗೆ ಎಲ್ಲಿ ಎಷ್ಟು ಎಕರೆ ಜಮೀನಿದೆ…? ಎನ್ನುವ ಕನಿಷ್ಠ ಮಾಹಿತಿ ಇದ್ದೆ ಇರುತ್ತದೆ. ಅದನ್ನು ಮತ್ತೆ ರೈತರ ಬಳಿ ಕೇಳಿ ತಂತ್ರಾಂಶದಲ್ಲಿ ನಮೂದಿಸಬೇಕು.

ರೈತರ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು ನಮೂದಿಸದಿದ್ದರೆ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ RTC ಜೊತೆ Aadhaar Link ಮಾಡುವುದು ಕಡ್ಡಾಯವಾಗಿದೆ. ಆಧಾರ್ ಲಿಂಕ್ ಮಾಡಲು ಶೀಘ್ರದಲ್ಲೇ ಹೊಸ App ಬಿಡುಗಡೆ ಮಾಡಲಾಗುವುದು ಎಂದು ಸಚಿವರಾದ ಕೃಷ್ಣಾ ಬೈರೇಗೌಡ ಅವರು ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group