RPLI: ಪೋಸ್ಟ್ ಆಫೀಸ್ ನಲ್ಲಿ ಜಾರಿಗೆ ಬಂತು ಹೊಸ ಯೋಜನೆ, 25 ರೂ ಹೂಡಿಕೆ ಮಾಡಿದರೆ ಸಿಗಲಿದೆ 17 ಲಕ್ಷ ರೂಪಾಯಿ.

ಈ ಯೋಜನೆಯಲ್ಲಿ 25 ರೂ. ಹೂಡಿಕೆ ಮಾಡುವ ಮೂಲಕ ಪಡೆಯಿರಿ 17 ಲಕ್ಷ ಲಾಭ.

Rural Post Life Insurance: ಭಾರತೀಯ ಅಂಚೆ ಇಲಾಖೆ (Post Office) ದೇಶದ ಜನರಿಗಾಗಿ ವಿವಿಧ ರೀತಿಯ ಹೂಡಿಕೆಯ ಉಳಿತಾಯ ಯೋಜನೆಯನ್ನು ಪರಿಚಯಿಸುವ ಮೂಲಕ ಜನರಿಗೆ ಭವಿಷ್ಯಕ್ಕೆ ಆರ್ಥಿಕವಾಗಿ ನೆರವಾಗಲು ಸಹಾಯವಾಗುತ್ತಿದೆ. ಅಂಚೆ ಇಲಾಖೆ ಈಗಾಗಲೇ ವಿವಿಧ ಯೋಜನೆಯನ್ನು ಪರಿಚಯಿಸಿದೆ. ಸದ್ಯ ಅಂಚೆ ಇಲಾಖೆಯು ವಿಶೇಷವಾಗಿ ಗ್ರಾಮೀಣ ಭಾಗದ ಜನತೆಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಿದೆ.

ಗ್ರಾಮೀಣ ಭಾಗದ ಜನರು ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಹೀಗಾಗಿ ಅಂತವರಿಗೆ ಆರ್ಥಿಕ ಸ್ಥಿರತೆಯನ್ನು ನೀಡಲು ಅಂಚೆ ಇಲಾಖೆ ಈ ಯೋಜನೆಯನ್ನು ಪ್ರಾರಂಭಿಸಿದೆ. ಅತಿ ಕಡಿಮೆ ಹೂಡಿಕೆಯಲ್ಲಿನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

 Life Insurance Updates
Image Credit: Indiafilings

Rural Post Life Insurance
ಇದೀಗ ಅಂಚೆ ಇಲಾಖೆಯು ಗ್ರಾಮೀಣ ಭಾಗದ ಜನತೆಗಾಗಿ “ಗ್ರಾಮೀಣ ಅಂಚೆ ಜೀವ ವಿಮಾ” (Rural Post Life Insurance ) ಯೋಜನೆಯನ್ನು ಪರಿಚಯಿಸಿದೆ. ಗ್ರಾಮೀಣ ಪ್ರದೇಶದ ಜನರು ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು. ಕನಿಷ್ಠ 19 ರಿಂದ 45 ವರ್ಷ ವಯಸ್ಸಿನವರು ಈ Rural Post Life Insurance ನಲ್ಲಿ ಹೂಡಿಕೆಯನ್ನು ಮಾಡಬಹುದಾಗಿದೆ. ಐದು ವರ್ಷಗಳ ನಂತರ ಈ ಯೋಜನೆಯನ್ನು ದತ್ತಿ ಯೋಜನೆಯಾಗಿ ಪರಿವರ್ತಿಸಬಹುದು.

ಇದನ್ನು ಮಾಡದಿದ್ದರೆ ಆರನೇ ವರ್ಷದ ನಂತರ ಇದು ಸಂಪೂರ್ಣ ಜೀವ ಖಾತ್ರಿ ಯೋಜನೆಯಂತೆ ಕೆಲಸ ಮಾಡಲು ಆರಂಭಿಸುತ್ತದೆ. ಈ ಯೋಜನೆಯಡಿ ಪಾಲಿಸಿದಾರನು ಮರಣಹೊಂದಿದಾಗ, ನಾಮಿನಿಯು ವಿಮಾ ಮೊತ್ತ ಮತ್ತು ಬೋನಸ್‌ ನ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಅರ್ಹನಾಗಿರುತ್ತಾರೆ. ವಿಮಾ ಮೊತ್ತವು ಕನಿಷ್ಠ 10 ಸಾವಿರದಿಂದ ಗರಿಷ್ಟ 10 ಲಕ್ಷದವರೆಗಿದೆ. ಈ ಯೋಜನೆಯಡಿ ನಾಲ್ಕು ವರ್ಷದ ನಂತರ ಸಾಲ ಸೌಲಭ್ಯವನ್ನು ಪಡೆಯಬಹುದು.

Rural Post Life Insurance
Image Credit: GConnect

25 ರೂ ಹೂಡಿಕೆ ಮಾಡಿದರೆ ಸಿಗಲಿದೆ 17 ಲಕ್ಷ ರೂಪಾಯಿ
ನೀವು RPLS ಯೋಜನೆಯಲ್ಲಿ ಯಾವ ರೀತಿ ಹೂಡಿಕೆ ಮಾಡಬೇಕೆಂದು ಯೋಚಿಸುತ್ತದೆ ವಿವರ ಇಲ್ಲಿದೆ. ಇನ್ನು 20 ನೇ ವರ್ಷ ವಯಸ್ಸಿನಲ್ಲಿ ವ್ಯಕ್ತಿಯೊಬ್ಬರು 60 ವರ್ಷಗಳಲ್ಲಿ ಮೆಚುರಿಟಿ ಇರುವ Post Office ನ Rural Post Life Insurance ಯೋಜನೆಯಡಿ ಕನ್ವರ್ಟಿಬಲ್ ಫುಲ್ ಲೈಫ್ ಅಶೂರೆನ್ಸ್ ಪಾಲಿಸಿಯಲ್ಲಿ ರೂ. 5 ಲಕ್ಷ ವಿಮಾ ಮೊತ್ತವನ್ನು ಖರೀದಿಸಿದರೆ, ಅದರ ದೈನಂದಿನ ಪ್ರೀಮಿಯಂ ಸುಮಾರು 25 ರೂ. ಆಗಲಿದೆ. ನೀವು ಕೇವಲ 25 ರೂ. ಹೂಡಿಕೆಯಲ್ಲಿ 17 ಲಕ್ಶ ರೂ. ಗಳ ಲಾಭವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group