SA vs IND: ಇಂದು ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ, ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲು ರಣತಂತ್ರ ರೂಪಿಸಿದ SRK ಪಡೆ

ದಕ್ಷಿಣ ಆಫ್ರಿಕಾ ಇರುವ ವಿನ್ ಆಗುವ ರಣತಂತ್ರ ರೂಪಿಸಿದ ಟೀಮ್ ಇಂಡಿಯಾ

SA vs IND 3rd T20: Team India ಇಂದು ದಕ್ಷಿಣ ಆಫ್ರಿಕಾದ ವಿರುದ್ಧ ಮೂರನೇ ಹಾಗೂ ಅಂತಿಮ T20 ಪಂದ್ಯ ಆಡಲು ಕಣಕ್ಕಿಳಿಯುತ್ತಿದೆ (India And South Africa 3rd T20 Match). ಭಾರತ ಮತ್ತು ದಕ್ಷಿಣ ಆಫ್ರಿಕಾ (South Africa) ನಡುವಿನ ಮೂರು ಪಂದ್ಯಗಳ T20I ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯ ಇಂದು ಜೋಹಾನ್ಸ್‌ ಬರ್ಗ್‌ ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು, ನಂತರದ ಎರಡನೇ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ಭಾರತವನ್ನು 5 ವಿಕೆಟ್‌ ಗಳಿಂದ ಸೋಲಿಸಿತು. ಹೀಗಾಗಿ ಮೂರನೇ ಟಿ20ಯಲ್ಲಿ ಭಾರತ ಗೆದ್ದರೆ ಸರಣಿ ಸೋಲನ್ನು ತಪ್ಪಿಸಬಹುದು. 2024ರ ಟಿ20 ವಿಶ್ವಕಪ್ ತಯಾರಿಯ ಮೇಲೆ ಕಣ್ಣಿಟ್ಟಿರುವ ರಾಹುಲ್ ದ್ರಾವಿಡ್-ಸೂರ್ಯಕುಮಾರ್ ಯಾದವ್ ಇಂದಿನ ಪಂದ್ಯ ಗೆಲ್ಲಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

SA vs IND 3rd T20I
Image Credit: Hindustantimes

ಇಂದು ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ
ಭಾರತವು ಜೋಹಾನ್ಸ್‌ಬರ್ಗ್‌ನಲ್ಲಿ ಸೋತರೆ, ಇದು 2023 ರಲ್ಲಿ ತವರಿನ ಹೊರಗೆ ಅವರ ಎರಡನೇ ಟಿ 20 ಸರಣಿಯನ್ನು ಕಳೆದುಕೊಳ್ಳುತ್ತದೆ. ಟೀಮ್ ಇಂಡಿಯಾ ಈ ವರ್ಷದ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಯನ್ನು 2-3 ರಿಂದ ಸೋತಿತ್ತು. 2017ರಿಂದ ಭಾರತ ವಿದೇಶದಲ್ಲಿ ಮೂರು ಟಿ20ಐ ಸರಣಿಗಳನ್ನು ಕಳೆದುಕೊಂಡಿದೆ. ಈಗ ಗೆಲ್ಲಲೇಬೇಕಾದ ಪಂದ್ಯಕ್ಕೆ ಬದಲಾವಣೆ ಖಚಿತ ಎನ್ನಲಾಗುತ್ತಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲು ರಣತಂತ್ರ ರೂಪಿಸಿದ SRK ಪಡೆ
ಕಳೆದ ಪಂದ್ಯದಲ್ಲಿ ಭಾರತವು ಬೌಲಿಂಗ್ ವಿಭಾಗದಲ್ಲಿ ಎಡವಿತ್ತು. ಸೂರ್ಯಕುಮಾರ್ ಮತ್ತು ರಿಂಕು ಸಿಂಗ್ ಬಿಟ್ಟರೆ ಉಳಿದವರು ಬ್ಯಾಟಿಂಗ್ ನಲ್ಲಿ ಸರಿಯಾಗಿ ಆಡಲಿಲ್ಲ. ಇಂದಿನ ಪಂದ್ಯಕ್ಕೆ ತಿಲಕ್ ವರ್ಮಾ ಬದಲಿಗೆ ಶ್ರೇಯಸ್ ಅಯ್ಯರ್ ಮತ್ತು ಕುಲದೀಪ್ ಯಾದವ್ ಬದಲಿಗೆ ರವಿ ಬಿಷ್ಣೋಯ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಜಿತೇಶ್ ಶರ್ಮಾ ಬದಲಿಗೆ ಇಶಾನ್ ಕಿಶನ್ ಬರಬಹುದು. ಟಿ20 ವಿಶ್ವಕಪ್‌ ಗೆ ಸಿದ್ಧವಾಗಲು ಹರಿಣಗಳಿ ಪಡೆ ಕೇವಲ ನಾಲ್ಕು ಟಿ20 ಪಂದ್ಯಗಳನ್ನು ಹೊಂದಿದೆ. ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ ಮತ್ತು ಮ್ಯಾಥ್ಯೂ ಬ್ರೀಟ್ಜ್‌ಕೆ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

South Africa vs India T20
Image Credit: Outlookindia

ಕ್ಯಾಪ್ಟನ್ ಐಡನ್ ಮಾರ್ಕ್ರಾಮ್ ಕೂಡ ಪಂದ್ಯದಲ್ಲಿ ದೊಡ್ಡ ಮಟ್ಟದ ಸಹಾಯ ಮಾಡುತ್ತಿದ್ದಾರೆ. ಬೌಲಿಂಗ್‌ ನಲ್ಲಿ ಆಫ್ರಿಕಾ ಕೂಡ ಮಾರಕವಾಗಿದ್ದು, ಸ್ಪಿನ್ನರ್‌ ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವೆದರ್‌ ಕಾಮ್ ನೀಡಿರುವ ಹವಾಮಾನ ಮುನ್ಸೂಚನೆಯ ಪ್ರಕಾರ, ಜೋಹಾನ್ಸ್‌ಬರ್ಗ್‌ನಲ್ಲಿ ಭಾನುವಾರ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಪಂದ್ಯದುದ್ದಕ್ಕೂ ಮಳೆಯ ಸಾಧ್ಯತೆ ಕಡಿಮೆ, ಆದರೆ ಮೋಡ ಕವಿದ ವಾತಾವರಣ ಇರುತ್ತದೆ.

Join Nadunudi News WhatsApp Group

Join Nadunudi News WhatsApp Group