Actress Sai Pallavi In Pushpa 2: ಪುಷ್ಪ 2 ಚಿತ್ರದಲ್ಲಿ ದುಬಾರಿ ಸಂಭಾವನೆ ಪಡೆಯುತ್ತಿರುವ ಸಾಯಿ ಪಲ್ಲವಿ, ರಶ್ಮಿಕಾಗಿಂತ ಹೆಚ್ಚು.

Actress Sai Pallavi In Pushpa 2: ಅಲ್ಲೂ ಅರ್ಜುನ್ ಹಾಗು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಚಿತ್ರ ತೆರೆ ಮೇಲೆ ಬಂದು ಸಾಕಷ್ಟು ಮೆಚ್ಚುಗೆ ಪಡೆದಿದೆ. ಪುಷ್ಪ ಚಿತ್ರದ ಹಾಡುಗಳು ಕೂಡ ಬಹಳ ಹಿಟ್ ಆಗಿವೆ.

ಹಾಗೇಯೇ ಇದೀಗ ಈ ಚಿತ್ರ ತಂಡ ಪುಷ್ಪ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಹೊಸ ಹೊಸ ನಟರನ್ನು ಆಯ್ಕೆ ಮಾಡಿಕೊಂಡು ಪುಷ್ಪ 2 ಚಿತ್ರವನ್ನು ವಿಭಿನ್ನವಾಗಿ, ವಿಶೇಷವಾಗಿ ಮಾಡಬೇಕೆಂದು ಪುಷ್ಪ ಚಿತ್ರತಂಡ ಹೊರಟಿದೆ.

Actress Sai Pallavi is acting in Pushpa 2
Image Credit: indianexpress

ಪುಷ್ಪ 2 ಚಿತ್ರದಲ್ಲಿ ಸಾಯಿ ಪಲ್ಲವಿ
ಇದೀಗ ಪುಷ್ಪ 2 ಚಿತ್ರದಲ್ಲಿ ರೌಡಿ ಬೇಬಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರರಂಗವನ್ನು ಬಿಟ್ಟು ಸಾಯಿ ಪಲ್ಲವಿ ಡಾಕ್ಟರ್ ಆಗುತ್ತಾರೆ ಎನ್ನುವ ಸುದ್ದಿ ಹರಡಿದ್ದು ಸಾಯಿ ಪಲ್ಲವಿ ಅಭಿಮಾನಿಗಳು ಇನ್ನು ಇವರನ್ನು ತೆರೆಯ ಮೇಲೆ ನೋಡಲು ಸಾಧ್ಯವಿಲ್ಲ ಎನ್ನುವ ಅನಿಸಿಕೆಯಲ್ಲಿದ್ದರು.

ಇದೀಗ ಪುಷ್ಪ 2 ಚಿತ್ರದ ಮೂಲಕ ಸಾಯಿ ಪಲ್ಲವಿ ಸಿನಿ ಪ್ರಿಯರನ್ನು ರಂಜಿಸಲು ಮತ್ತೆ ಬರುತ್ತಿದ್ದಾರೆ. ಈ ವಿಷಯ ತಿಳಿದ ಸಿನಿಪ್ರಿಯರು ಸಂತೋಷ ಪಡುತ್ತಿದ್ದಾರೆ.

Sai Pallavi who is getting paid dearly in Pushpa 2.
Image Credit: hindustantimes

ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ಪಾತ್ರಕ್ಕೆ ಬದಲಾಗಿ ಬರುತ್ತಾರಾ ಸಾಯಿ ಪಲ್ಲವಿ
ಅಲ್ಲೂ ಅರ್ಜುನ್ ಅಭಿನಯದ ತೆಲುಗಿನ ಚಿತ್ರ ಪುಷ್ಪ 2 ಚಿತ್ರದಲ್ಲಿ ಪ್ರಮುಖ ಪಾತ್ರಕ್ಕಾಗಿ ಸಾಯಿ ಪಲ್ಲವಿ ಅವರೊಂದಿಗೆ ಚಿತ್ರತಂಡ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.

Join Nadunudi News WhatsApp Group

ಹಾಗಾದರೆ ರಶ್ಮಿಕಾ ಮಂದಣ್ಣ ಗೆ ಗೇಟ್ ಪಾಸ್ ನೀಡಿ, ಅವರ ಜಾಗಕ್ಕೆ ಸಾಯಿ ಪಲ್ಲವಿ ಬರಲಿದ್ದಾರೆ ಎನ್ನುವ ಸುದ್ದಿ ಹರಡಿದೆ. ಆದರೆ ಈ ವಿಚಾರದ ಬಗ್ಗೆ ಚಿತ್ರತಂಡ ಯಾವುದೇ ಸ್ಪಷ್ಟನೆ ನೀಡಿಲ್ಲ. ಪುಷ್ಪ 2 ಚಿತ್ರದಲ್ಲಿ ಅಲ್ಲೂ ಅರ್ಜುನ್ ಗೆ ತಂಗಿ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಚಿತ್ರ ತಂಡ ಕೇಳಿರುವುದಾಗಿ ತಿಳಿದುಬಂದಿದೆ.

Sai Pallavi as Rashmika Mandanna's sister in Pushpa 2
Image Credit: timesofindia.indiatimes

ಅಲ್ಲೂ ಅರ್ಜುನ್ ತಂಗಿಯಾಗಿ ನಟಿಸಲಿರುವ ಸಾಯಿ ಪಲ್ಲವಿ
ಒಂದು ವೇಳೆ ಸಾಯಿ ಪಲ್ಲವಿ ಅನುಮತಿ ನೀಡಿದರೆ, ಅವರೊಂದಿಗೆ ಚಿತ್ರೀಕರಣ ಮಾಡಲು ನಿರ್ದೇಶಕ ಸುಕುಮಾರ್ ಸಿದ್ದಾರಾಗಿದ್ದಾರೆ. ಬುಡಕಟ್ಟು ಹುಡುಗಿಯ ಪಾತ್ರವನ್ನು ಸಾಯಿ ಪಲ್ಲವಿ ಮಾಡಲಿದ್ದು, ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲ ಅಲ್ಲೂ ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ.

ಒಂದು ವೇಳೆ ಸಾಯಿ ಪಲ್ಲವಿ ಆಫರ್ ತಿರಸ್ಕರಿಸಿದರೆ ಐಶ್ವರ್ಯ ರಾಜೇಶ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಲ್ಲೂ ಅರ್ಜುನ್ ಹಾಗು ಶ್ರೀ ದೇವಿ ಪ್ರಸಾದ್ ಅವರೊಂದಿಗೆ ಖಾಸಗಿ ಜೆಟ್ ನಲ್ಲಿ ಪಯಣಿಸುತ್ತಿರುವ ಚಿತ್ರವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದ ರಶ್ಮಿಕಾ ಮಂದಣ್ಣ ಥಾಂಕ್ ಯು ಫಾರ್ ಸ್ವಾಮಿ ಸ್ವಾಮಿ ಡಿ ಎಸ್ ಪಿ ಸರ್ ಜಿ ಎಂದು ಬರೆದುಕೊಂಡಿದ್ದರು.

Sai Pallavi got 4 crores salary to act in Pushpa 2
Image Credit: Sai Pallavi got 4 crores salary to act in Pushpa 2

ಪುಷ್ಪ 2 ಚಿತ್ರದಲ್ಲಿ ದುಬಾರಿ ಸಂಭಾವನೆ ಪಡೆಯುತ್ತಿರುವ ಸಾಯಿ ಪಲ್ಲವಿ
ಅಲ್ಲೂ ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ ಅಲ್ಲೂ ಅರ್ಜುನ್ ಗೆ ತಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಅಲ್ಲೂ ಅರ್ಜುನ್ ಜೊತೆ ಸುಮಾರು 20 ನಿಮಿಷಗಳ ಕಾಲ ಅಲ್ಲೂ ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ.

ಹಾಗು ಈ ಚಿತ್ರದಲ್ಲಿ ನಟಿಸಲು ಸಾಯಿ ಪಲ್ಲವಿ ಸುಮಾರು ನಾಲ್ಕರಿಂದ ಐದು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಇದೊಂದು ಅಂದಾಜು ಮೊತ್ತವಾಗಿದ್ದು, ನಿಖರವಾದ ಮಾಹಿತಿ ಇನ್ನು ಲಭ್ಯವಾಗಿಲ್ಲ.

Join Nadunudi News WhatsApp Group