Samantha Remuneration: ವಿಜಯ್ ದೇವರಕೊಂಡ ಜೊತೆ ನಟಿಸಲು ದುಬಾರಿ ಸಂಭಾವನೆ ಕೇಳಿದ ಸಮಂತಾ.

Samantha Ruth Prabhu Remuneration Per Movie: ನಟಿ ಸಮಂತಾ ಸದಾ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಹಲವು ತಿಂಗಳುಗಳಿಂದ ನಟಿ ಸಮಂತಾ ಮಯೋಸಿಟೀಸ್ (Myositis) ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಇದೀಗ ಚೇತರಿಸಿಕೊಂಡು ಸಿನಿಮಾ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದಾರೆ. ಇದೀಗ ನಟಿ ಸಮಂತಾ ಮತ್ತೆ ಸುದ್ದಿಯಲ್ಲಿದ್ದಾರೆ.

Samantha asked for expensive remuneration to act with Vijay Devarakonda.
Image Source: India Today

ಖುಷಿ ಸಿನಿಮಾಗಾಗಿ ಡಿಮ್ಯಾಂಡ್ ಮಾಡುತ್ತಿರುವ ನಟಿ ಸಮಂತಾ
ನಟ ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ನಟಿಸುತ್ತಿರುವ ಸಮಂತಾ ಅನಾರೋಗ್ಯ ಕಾರಣದಿಂದ ಶೂಟಿಂಗ್ ಗೆ ಹಾಜರಾಗಲಿಲ್ಲ. ಹೀಗಾಗಿ ಸಿನಿಮಾ ಶೂಟಿಂಗ್ ಕೂಡ ಮುಂದೂಡಲಾಗಿತ್ತು.

ಇದೀಗ ಚೇತರಿಕೆ ಕಂಡ ನಟಿ ಸಮಂತಾ ತೆಲುಗಿನ ಖುಷಿ ಸಿನಿಮಾಗೆ ಡೇಟ್ ಕೊಡಲು ಸತಾಯಿಸುತ್ತಿದ್ದಾರೆ. ಜೊತೆಗೆ ನಿರ್ದೇಶಕರು ಹಾಗು ನಿರ್ಮಾಪಕರ ಬಳಿ ಕೆಲವು ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Samantha asked for expensive remuneration to act with Vijay Devarakonda.
Image Source: India Today

ನಟಿ ಸಮಂತಾ ಖುಷಿ ಸಿನಿಮಾ
ಇದೀಗ ಚೇತರಿಸಿಕೊಂಡಿರುವ ನಟಿ ಸಮಂತಾ ನಟ ವಿಜಯ್ ದೇವರಕೊಂಡ (Vijay Devarakonda) ಜೊತೆಗಿನ ಖುಷಿ ಸಿನಿಮಾ ಬಿಟ್ಟು ವೆಬ್ ಸೀರಿಸ್ ಗೆ(Web Series) ಡೇಟ್ ಕೊಟ್ಟಿದ್ದಾರಂತೆ. ಅಷ್ಟೇ ಅಲ್ಲದೇ ಖುಷಿ ಚಿತ್ರದ ಕಥೆಯನ್ನೇ ಬದಲಿಸುವಂತೆ ಸಮಂತಾ ಪಟ್ಟು ಹಿಡಿದಿದ್ದಾರಂತೆ.

Join Nadunudi News WhatsApp Group

ಸಮಂತಾ ಡಿಮ್ಯಾಂಡ್ ಕೇಳಿ ನಿರ್ದೇಶಕ ಹಾಗೂ ನಿರ್ಮಾಪಕರೇ ಬೆಚ್ಚಿಬಿದ್ದಿದ್ದಾರೆ. ಖುಷಿ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಕಡಿಮೆ ಇದೆ.

Samantha asked for expensive remuneration to act with Vijay Devarakonda.
Image Source: India Today

ಹೀಗಾಗಿ ನನ್ನ ಪಾತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಕೊಂಚ ಕಥೆ ಬದಲಿಸುವಂತೆ ನಿರ್ದೇಶಕ ಹಾಗು ನಿರ್ಮಾಪಕರ ಬಳಿ ಕೇಳಿದ್ದಾರಂತೆ. ಕಥೆ ಬದಲಿಸುವಂತೆ ಡಿಮ್ಯಾಂಡ್ ಮಾಡಿದ ಬಳಿಕ ಸಮಂತಾ ತೆಲುಗಿನ ಖುಷಿ ಚಿತ್ರಕ್ಕೆ ಡೇಟ್ಸ್ ನೀಡದೆ ವೆಬ್ ಸೀರಿಸ್​ಗೆ ನೀಡಿದ್ದು ಚಿತ್ರತಂಡದ ಅಸಮಾಧಾನಕ್ಕೆ ಕಾರಣವಾಗಿದೆ.

Samantha asked for expensive remuneration to act with Vijay Devarakonda.
Image Source: India Today

Join Nadunudi News WhatsApp Group