Galaxy A55: iPhone ಅಟ್ಟಹಾಸ ಕಡಿಮೆ ಮಾಡಲು ಸ್ಯಾಮ್ ಸಂಗ್ ನಿಂದ 32 MP ಕ್ಯಾಮೆರಾದ ಅಗ್ಗದ ಮೊಬೈಲ್ ಲಾಂಚ್

ಉತ್ತಮ ಛಾಯಾಗ್ರಹಣಕ್ಕಾಗಿ ಹೊಸ ಹ್ಯಾಂಡ್ ಸೆಟ್ ಬಿಡುಗಡೆ ಮಾಡಿದ ಸ್ಯಾಮ್ ಸಂಗ್

Samsung Galaxy A55 5G Smartphone: ದೇಶಿಯ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಹೊಸ ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುತ್ತಿರುತ್ತದೆ. ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇದೀಗ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪೆನಿಯಾಗಿರುವ Samsung ಪ್ರಪಂಚದಾದ್ಯಂತ ಹೆಚ್ಚಿನ ಬಳಕೆದಾರರನ್ನು ಪಡೆದುಕೊಂಡಿದೆ. ಇದೀಗ ಸ್ಯಾಮ್ ಸಂಗ್ ತನ್ನ ಗ್ರಾಹಕರಿಗಾಗಿ ಹೊಸ ಹ್ಯಾಂಡ್ ಸೆಟ್ ಅನ್ನು ಬಿಡುಗಡೆ ಮಾಡಿದೆ. ಸ್ಯಾಮ್ ಸಂಗ್ ಪರಿಚಯಿಸಿರುವ ಈ ಹೊಸ ಸ್ಮಾರ್ಟ್ ಫೋನ್ ನ ಬಗ್ಗೆ ನಾವೀಗ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

Samsung Galaxy A55 5G Smartphone Price And Feature
Image Credit: Techadvisor

Samsung Galaxy A55 5G Smartphone
ಸ್ಯಾಮ್‌ಸಂಗ್ ಕಂಪನಿಯು ತನ್ನ ಗ್ರಾಹಕರಿಗಾಗಿ ಇದೀಗ Samsung Galaxy A55 5G ಫೋನ್ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ನೀವು Samsung Galaxy A55 5G ಸ್ಮಾರ್ಟ್‌ ಫೋನ್ ಅನ್ನು ಮೂರು ಬಣ್ಣ ಆಯ್ಕೆಗಳೊಂದಿಗೆ ಖರೀದಿಸಬಹುದು. ಅವುಗಳೆಂದರೆ ಕಪ್ಪು, ತಿಳಿ ನೀಲಿ ಮತ್ತು ಗುಲಾಬಿ ಆಯ್ಕೆಗಳಾಗಿವೆ. Samsung Galaxy A55 ಸ್ಮಾರ್ಟ್‌ ಫೋನ್‌ ನ ಬಲ ಅಂಚಿನಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಅನ್ನು ಕಾಣಬಹುದು.

Samsung Galaxy A55 ಸ್ಮಾರ್ಟ್‌ ಫೋನ್ 6.4-ಇಂಚಿನ ಪೂರ್ಣ-HD ಸೂಪರ್ AMOLED ಪರದೆಯನ್ನು 120Hz ರಿಫ್ರೆಶ್ ದರವನ್ನು ಹೊಂದಿದೆ. ಇನ್-ಹೌಸ್ Exynos 1480 ಚಿಪ್‌ಸೆಟ್ ಅನ್ನು ಸ್ಮಾರ್ಟ್‌ ಫೋನ್‌ನಲ್ಲಿ ಪ್ರೊಸೆಸರ್ ಆಗಿ ಕಾರ್ಯನಿರ್ವಹಿಸಲಿದೆ. ಫೋನ್ Android 13-ಆಧಾರಿತ One UI 5.1 ಬಾಕ್ಸ್‌ ನ ಹೊರಗೆ ಕಾರ್ಯನಿರ್ವಹಿಸಲಿದೆ Samsung Galaxy A55 ಸ್ಮಾರ್ಟ್‌ ಫೋನ್‌ ನ ಕ್ಯಾಮೆರಾ ಫೀಚರ್ ಬಗ್ಗೆ ಹೇಳುವುದಾರೆ, 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಛಾಯಾಗ್ರಹಣಕ್ಕಾಗಿ ನೀಡಲಾಗಿದೆ.

Samsung Galaxy A55 5G Smartphone
Image Credit: Original Source

ಸ್ಯಾಮ್ ಸಂಗ್ ನಿಂದ 32 MP ಕ್ಯಾಮೆರಾದ ಅಗ್ಗದ ಮೊಬೈಲ್ ಲಾಂಚ್
ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮರಾವನ್ನು ನೀಡಲಾಗಿದೆ. ಈ ಸ್ಮಾರ್ಟ್ ಫೋನ್ 25W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

ಇನ್ನು ಮಾರುಕಟ್ಟೆಯಲ್ಲಿ Samsung Galaxy A55 5G Smartphone ಸರಿಸುಮಾರು 39990 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಕಂಪನಿಯು ಈ ನೂತನ ಮಾದರಿ ಯಾವಾಗ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನುವ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಅತಿ ಶೀಘ್ರದಲ್ಲೇ Samsung Galaxy A55 5G Smartphone ಗ್ರಾಹಕರ ಕೈ ಸೇರಲಿದೆ.

Join Nadunudi News WhatsApp Group