Galaxy Z Fold 6: ಮೊಬೈಲ್ ಲೋಕದಲ್ಲಿ ತಲ್ಲಣ ಸೃಷ್ಟಿಸಲು ಬಂತು ಇನ್ನೊಂದು Samsung ಮಡಚುವ ಮೊಬೈಲ್, ಅಗ್ಗದ ಬೆಲೆಗೆ

ಅಗ್ಗದ ಬೆಲೆಗೆ ಇನ್ನೊಂದು ಮಡಚುವ ಮೊಬೈಲ್ ಲಾಂಚ್ ಮಾಡಲು ಮುಂದಾದ Samsung

Samsung Galaxy Z Fold 6: ಇತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮಡಚುವ ಫೋನ್ ಗಳ (Foldable phones) ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಸ್ಯಾಮ್​ಸಂಗ್ (Samsung) ಕಂಪನಿಯ ಹೊಸ ಸ್ಯಾಮ್​ಸಂಗ್ ಗ್ಯಾಲಕ್ಸಿ ಫೋಲ್ಡ್ 6 ಫೋನ್ ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.

ಈ ಫೋಲ್ಡಬಲ್ ಫೋನ್ ಕೈಗೆಟಕುವ ಬೆಲೆಯಲ್ಲಿ ದೊರೆಯಲಿದೆ ಎನ್ನಲಾಗಿದ್ದು, ಆದರೆ, ಖಚಿತ ಬೆಲೆ ಬಹಿರಂಗ ಪಡಿಸಿಲ್ಲ. ಫೋಲ್ಡಬಲ್ ಫೋನ್ ಮಾರುಕಟ್ಟೆಯಲ್ಲಿ ಭರ್ಜರಿ ಆಗಿ ಸೇಲ್ ಆಗುತ್ತಿರುವ ಕಾರಣ ಸ್ಯಾಮ್​ಸಂಗ್ ಈ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ವರದಿ ಹೇಳುತ್ತದೆ.

Samsung Galaxy Z Fold 6 Smartphone
Image Credit: Piunikaweb

ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಫೋನ್ ನ ವೈಶಿಷ್ಟ್ಯಗಳು

ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಫೋನ್ ಇದು 7.6 ಇಂಚುಗಳ ಡಿಸ್​ಪ್ಲೇಯನ್ನು ಹೊಂದಿದೆ. ಮತ್ತು ಸೆಕೆಂಡರಿ ಡಿಸ್​ಪ್ಲೇ 6 ಇಂಚುಗಳಿಂದ ಕೂಡಿದೆ. ಈ ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕ್ವಾಲ್ಕಂನ ಸ್ನಾಪ್​ಡ್ರಾಗನ್ 8 Gen 2 ಪ್ರೊಸೆಸರ್‌ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕಳೆದ ವರ್ಷ ಆಗಸ್ಟ್‌ ನಲ್ಲಿ ಬಿಡುಗಡೆಯಾದ ಈ ಸ್ಯಾಮ್‌ಸಂಗ್ ಫೋನ್​ನ ಬೆಲೆ 1 ಲಕ್ಷಕ್ಕೂ ಅಧಿಕ. ಇದರ ಬೆಲೆ ಭಾರತದಲ್ಲಿ ರೂ. 1,54,999. ಪ್ರೀಮಿಯಂ ಬಳಕೆದಾರರನ್ನು ಮಾತ್ರ ಗುರಿಪಡಿಸಿ ಈ ಮೊಬೈಲ್ ಅನ್ನು ಲಾಂಚ್ ಮಾಡಲಾಗಿತ್ತು.

Samsung Galaxy Z Fold 6 Price In India
Image Credit: mspoweruser

ಸ್ಯಾಮ್​ಸಂಗ್ ಗ್ಯಾಲಕ್ಸಿ ಫೋಲ್ಡ್ 6 ಫೋನ್ ಬಗ್ಗೆ ಮಾಹಿತಿ

Join Nadunudi News WhatsApp Group

ಸ್ಯಾಮ್​ಸಂಗ್ ಗ್ಯಾಲಕ್ಸಿ ಫೋಲ್ಡ್ 6 ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಚೀನಾದ ಶವೋಮಿ, ಹಾನರ್ ಮತ್ತು ಹುವೈ ನಂತಹ ಕಂಪನಿಗಳು ಕಡಿಮೆ ಬೆಲೆಗೆ ಫೋಲ್ಡಬಲ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವ ಸಮಯದಲ್ಲಿ, ಸ್ಯಾಮ್‌ಸಂಗ್ ಕೂಡ ಈ ಸ್ಪರ್ಧೆಯಿಂದ ಉಳಿಯಲು ಫೋನ್ ಅನ್ನು ಬಿಡುಗಡೆ ಮಾಡುತ್ತಿದೆಯಂತೆ. ಈ ವರ್ಷದ ಜುಲೈ ನಂತರ ಸ್ಯಾಮ್​ಸಂಗ್ ಗ್ಯಾಲಕ್ಸಿ ಫೋಲ್ಡ್ 6 ಫೋನ್ ಬಿಡುಗಡೆ ಆಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Join Nadunudi News WhatsApp Group