Sanjay Dutt Injured: ಕೇಡಿ ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡ ಬಾಲಿವುಡ್ ನಟ ಸಂಜಯ್ ದತ್.

ದೀಗ ಕೇಡಿ ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟ (Bollywood Actor) ತೀವ್ರ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ

Kedi Movie Shooting: ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ (Dhruva Sarja) ಅಭಿನಯದ ಕೇಡಿ ಚಿತ್ರದ (Kedi Movie)  ಚಿತ್ರೀಕರಣ ಆರಂಭಗೊಂಡಿದೆ. ಈಗಾಗಲೇ ಕೇಡಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದ್ದು, ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಇನ್ನು ಕೇಡಿ ಚಿತ್ರದ ಬಗ್ಗೆ ಸಾಕಷ್ಟು ಅಪ್ಡೇಟ್ ಗಳು ಬಂದಿದ್ದವು. ಇದೀಗ ಕೇಡಿ ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟ (Bollywood Actor) ತೀವ್ರ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

Sanjay Dutt Injured
Image Source: India Today

ಕೇಡಿ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್
ಕೇಡಿ ಚಿತ್ರದಲ್ಲಿ ನಟಿಸುವವರ ಬಗ್ಗೆ ಈಗಾಗಲೇ ಮಾಹಿತಿ ಹೊಸಬಿದ್ದಿದೆ. ಇನ್ನು ಈ ಚಿತ್ರದಲ್ಲಿ ಬಾಲಿವುಡ್ ನ್ ಖ್ಯಾತ ನಟ ಸಂಜಯ್ ದತ್ ನಟಿಸಲಿದ್ದಾರೆ ಎನ್ನುವ ಮಾಹಿತಿ ಎಲ್ಲರಿಗು ತಿಳಿದೇ ಇದೆ. ಇದೀಗ ಸಂಜಯ್ ದತ್ (Sanjay Dutt) ಅವರು ಕೇಡಿ ಚಿತ್ರದ ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಂಬ್ ಬ್ಲಾಸ್ಟಿಂಗ್ ಶೂಟಿಂಗ್ ನಡೆಯುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ.

Sanjay Dutt Injured
Image Source: Youtube

ಚಿತ್ರೀಕರಣದ ವೇಳೆ ಗಾಯಗೊಂಡ ಬಾಲಿವುಡ್ ನಟ
ನಟ ಸಂಜಯ್ ದತ್ ಅವರು ಈ ಹಿಂದೆ ಕೆಜಿಎಫ್ 2 ನಲ್ಲಿ ನಟಿಸುದರ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು. ಕೇಡಿ ಚಿತ್ರದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರ ಮಾಡಲಿದ್ದಾರೆ. ಇದೀಗ ಮಾಗಡಿ ರಸ್ತೆಯ ಸಿಗೇನಹಳ್ಳಿಯಲ್ಲಿ ಶೂಟಿಂಗ್ ನಡೆಯುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ.

Sanjay Dutt Injured
Image Source:m Youtube

ಸಿನಿಮಾದಲ್ಲಿ ಬಾಂಬ್ ಬ್ಲಾಸ್ಟ್ ಚಿತ್ರೀಕರಣದ ನೆಡೆಯುತ್ತಿರುವ ವೇಳೆ ಗ್ಲಾಸ್ ಫೀಸ್ ಬಂದು ಸಂಜಯ್ ದತ್ ಅವರ ಕಣ್ಣಿನ ಕೆಳಭಾಗದಲ್ಲಿ ಬಿದ್ದಿದೆ. ಸಂಜಯ್ ದತ್ ಅವರಿಗೆ ಗಾಯವಾದ ಕಾರಣ ಕೇಡಿ ಚಿತ್ರದ ಚಿತ್ರೀಕರಣವನ್ನು ಸದ್ಯ ನಿಲ್ಲಿಸಲಾಗಿದೆ. ಅಷ್ಟೊಂದು ಗಂಭೀರ ಗಾಯಗಳಾಗಿಲ್ಲದ ಕಾರಣ ಸಂಜಯ್ ದತ್ ಅವರು ಇದೀಗ ಮುಂಬೈ ಗೆ ಹಿಂತಿರುಗಿದ್ದಾರೆ. ಇನ್ನು ಸಂಜಯ್ ದತ್ ಬೇಗ ಗುಣಮುಖವಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

Join Nadunudi News WhatsApp Group

Sanjay Dutt Injured
Image Source: India Today

 

 

Join Nadunudi News WhatsApp Group