Saving Account Tax: ಸೇವಿಂಗ್ ಅಕೌಂಟ್ ನಲ್ಲಿ ಇದಕ್ಕಿಂತ ಹೆಚ್ಚು ಹಣ ಇಟ್ಟರೆ ಬರಲಿದೆ ತೆರಿಗೆ ನೋಟೀಸ್, ಕಠಿಣ ತೆರಿಗೆ ನಿಯಮ.
ಉಳಿತಾಯ ಖಾತೆಯಲ್ಲಿ ಇರಿಸಬಹುದಾದ ಹಣದ ಮಿತಿ ಎಷ್ಟು...? ಇಲ್ಲಿದೆ ಡೀಟೇಲ್ಸ್
Saving Account Cash Limit Rule: ಸಾಮಾನ್ಯವಾಗಿ ಎಲ್ಲರು ಕೂಡ ಒಂದಾದರು Bank Account ಅನ್ನು ಹೊಂದಿರುತ್ತಾರೆ. ಕೆಲ ಸರ್ಕಾರೀ ಹಾಗೂ ಸರ್ಕಾರೇತರ ಕೆಲಸಗಳಿಗೆ ಬ್ಯಾಂಕ್ ಅಕೌಂಟ್ ಮಾಹಿತಿ ನೀಡುವು ಅಗತ್ಯವಾಗುತ್ತದೆ. ಇನ್ನು ಪ್ರತಿ ತಿಂಗಳು ಆದಾಯ ಪಡೆಯುವ ಎಲ್ಲರು ಕೂಡ ಹೆಚ್ಚಾಗಿ Saving Account ಅನ್ನು ಹೊಂದಿರುತ್ತಾರೆ.
ಹಣದ ಉಳಿತಾಯಕ್ಕೆ Saving Account ಉತ್ತಮವಾಗಿರುತ್ತದೆ. ಇನ್ನು ಈ ಬ್ಯಾಂಕ್ ನಲ್ಲಿ ತೆರೆಯಲಾದ ಖಾತೆಗಳಿಗೂ ಕೂಡ RBI ನಿಯಮವನ್ನು ರೂಪಿಸಿರುತ್ತದೆ. ಹೌದು, ನೀವು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಇಡಬಹುದು ಎನ್ನುವುದಕ್ಕೆ RBI ನಿಯಮ ರೂಪಿಸಿದೆ. ನಿಯಮಕ್ಕಿಂತ ಹೆಚ್ಚಿನ ಹಣವನ್ನು ಖಾತೆಯಲ್ಲಿ ಇರಿಸಿದೆ ಅದು ತೆರಿಗೆಗೆ ಒಳಪಡುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.
![Saving Account Cash Limit Rule](https://nadunudi.in/wp-content/uploads/2024/02/Saving-Account-Cash-Limit-Rule.png)
ಉಳಿತಾಯ ಖಾತೆಯಲ್ಲಿ ಇರಿಸಬಹುದಾದ ಹಣದ ಮಿತಿ ಎಷ್ಟು…?
ಉಳಿತಾಯ ಖಾತೆಯಲ್ಲಿ ಇರಿಸಬಹುದಾದ ಹಣಕ್ಕೆ RBI ಯಾವುದೇ ಮಿತಿಯನ್ನು ನೀಡಿಲ್ಲ. ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಬೇಕಾದರೂ ಇರಿಸಬಹುದಾಗಿದೆ. ಆದರೆ ನೀವು ITR ಸಲ್ಲಿಸುತ್ತಿದ್ದರೆ ಉಳಿತಾಯ ಖಾತೆಯ ಎಲ್ಲ ವಿವರವನ್ನು ನೀಡಬೇಕಾಗುತ್ತದೆ. ಆದಾಯ ಇಲಾಖೆಯು ನಿಮ್ಮ ಖಾತೆಯಲ್ಲಿ ಹೆಚ್ಚಿನ ಹಣ ಇದ್ದರೆ ಅದಕ್ಕೆ ಸರಿಯಾದ ದಾಖಲೆಯನ್ನು ಕೇಳುತ್ತದೆ.
ತೆರಿಗೆ ಇಲಾಖೆಯು ಹಣಕಾಸು ವರ್ಷದಲ್ಲಿ 10 ಲಕ್ಷ ರೂ. ಗಿಂತ ಹೆಚ್ಚಿನ ನಗದು ಠೇವಣಿಯ ಬಗ್ಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದೆ. ಈ ಮಿತಿಯು FDs, Mutual Funds, Bonds and Shares ಗಳಲ್ಲಿನ ಹೂಡಿಕೆಗಳಿಗೂ ಅನ್ವಯಿಸುತ್ತದೆ. ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಯ ಮೇಲೆ ತೆರಿಗೆಯನ್ನು ಸಹ ಪಾವತಿಸಬೇಕಾಗುತ್ತದೆ. ನಿಮ್ಮ ಉಳಿತಾಯ ಖಾತೆಯಲ್ಲಿ ಎಷ್ಟು ಬಡ್ಡಿಯನ್ನು ಸ್ವೀಕರಿಸಲಾಗಿದೆ ಎಂಬುದರ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ.
![Saving Account Cash Limit](https://nadunudi.in/wp-content/uploads/2024/02/Saving-Account-Cash-Limit.png)
ಸೇವಿಂಗ್ ಅಕೌಂಟ್ ನಲ್ಲಿ ಇದಕ್ಕಿಂತ ಹೆಚ್ಚು ಹಣ ಬರಲಿದೆ ತೆರಿಗೆ ನೋಟೀಸ್
*ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80TTA ಅಡಿಯಲ್ಲಿ, ಆರ್ಥಿಕ ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ ಗಳಿಸಿದ 10,000 ರೂ. ವರೆಗಿನ ಬಡ್ಡಿಗೆ ಸಾಮಾನ್ಯ ಜನರಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
*ಬಡ್ಡಿ ಮೊತ್ತ ಇದಕ್ಕಿಂತ ಹೆಚ್ಚಾದರೆ ತೆರಿಗೆ ಕಟ್ಟಬೇಕಾಗುತ್ತದೆ. ಆದರೆ, ಹಿರಿಯ ನಾಗರಿಕರಿಗೆ 50 ಸಾವಿರ ರೂ. ತೆರಿಗೆ ಮಿತಿ ನೀಡಲಾಗಿದೆ.
*ದೇಶದ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು ಉಳಿತಾಯ ಖಾತೆಗಳ ಮೇಲೆ 2.70 ಪ್ರತಿಶತದಿಂದ 4 ಪ್ರತಿಶತದವರೆಗೆ ಬಡ್ಡಿಯನ್ನು ನೀಡುತ್ತಿವೆ.
*ಇನ್ನು 10 ಕೋಟಿ ರೂ. ವರೆಗಿನ ಬ್ಯಾಲೆನ್ಸ್ ಹೊಂದಿರುವ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರ ಶೇ. 2.70 ಆಗಿದೆ. ಅನೇಕ ಸಣ್ಣ ಹಣಕಾಸು ಬ್ಯಾಂಕ್ ಗಳು ಷರತ್ತುಗಳೊಂದಿಗೆ ಉಳಿತಾಯ ಖಾತೆಗಳ ಮೇಲೆ 7 ಪ್ರತಿಶತದ ವರೆಗೆ ಬಡ್ಡಿಯನ್ನು ನೀಡುತ್ತಿವೆ.