FD Interest Rate: SBI ನಲ್ಲಿ FD ಇಡುವವರಿಗೆ ಬಂಪರ್ ಆಫರ್, ಬಡ್ಡಿದರದಲ್ಲಿ ಭರ್ಜರಿ ಏರಿಕೆ.

SBI ನಲ್ಲಿ FD ಇಡುವವರಿಗೆ ಸಿಹಿ ಸುದ್ದಿ, FD ದರದಲ್ಲಿ ಏರಿಕೆ

SBI FD Interest Rate Hike: ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ಹೊರಡಿಸಿದೆ. FD ಬಡ್ಡಿದರದಲ್ಲಿ ಹೊಸ ನಿಯಮ ಜಾರಿಗೆ ತರಲು ಎಸ್ ಬಿಐ ನಿರ್ಧರಿಸಿದೆ. SBI ಹೊಸ ನಿಯಮವು ಬ್ಯಾಂಕ್ ನಲ್ಲಿ FD ಇಟ್ಟವರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ.

SBI ಹೊಸ ನಿಯಮದ ಪ್ರಕಾರ, FD ಇಟ್ಟವರು ಇನ್ನುಮುಂದೆ ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದಾರೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಿರ ಠೇವಣಿಗಳ (ಎಫ್‌ಡಿ) ಬಡ್ಡಿದರವನ್ನು ಹೆಚ್ಚಿಸುವ ಮೂಲಕ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು SBI ತನ್ನ FD ಬಡ್ಡಿದರವನ್ನು ಎಷ್ಟು ಹೆಚ್ಚಿಸಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

SBI FD Interest Rate Hike
Image Credit: gnttv

SBI ನಲ್ಲಿ FD ಇಡುವವರಿಗೆ ಬಂಪರ್ ಆಫರ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಗದಿತ ಅವಧಿಗೆ ಚಿಲ್ಲರೆ ಠೇವಣಿಗಳ ಮೇಲಿನ (2 ಕೋಟಿ ರೂ.ವರೆಗೆ) ಸ್ಥಿರ ಠೇವಣಿ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಬ್ಯಾಂಕ್‌ ನ ವೆಬ್‌ ಸೈಟ್‌ ನ ಪ್ರಕಾರ, ಹೊಸ ಎಫ್‌ಡಿ ದರಗಳು ಮೇ 15, 2024 ರಿಂದ ಜಾರಿಗೆ ಬರುತ್ತವೆ. ಎಸ್‌ಬಿಐ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಬಡ್ಡಿ ದರಗಳನ್ನು 46 ರಿಂದ 179 ದಿನಗಳವರೆಗೆ, 180 ರಿಂದ 210 ದಿನಗಳವರೆಗೆ 25-75 ಬೇಸಿಸ್ ಪಾಯಿಂಟ್‌ ಗಳಷ್ಟು ಹೆಚ್ಚಿಸಿದೆ. ಈ ಮೂಲಕ SBI ನಲ್ಲಿ FD ಇಂತವರಿಗೆ ಬ್ಯಾಂಕ್ ಸಿಹಿ ಸುದ್ದಿ ನೀಡಿದೆ.

FD ಬಡ್ಡಿದರಲ್ಲಿ ಭರ್ಜರಿ ಏರಿಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಠೇವಣಿಯ ಅವಧಿಯನ್ನು ಅವಲಂಬಿಸಿ ವಿಭಿನ್ನ ಸ್ಥಿರ ಠೇವಣಿ (FD) ಬಡ್ಡಿ ದರಗಳನ್ನು ನೀಡುತ್ತದೆ. 7 ದಿನಗಳಿಂದ 45 ದಿನಗಳವರೆಗೆ ಅಲ್ಪಾವಧಿ ಠೇವಣಿಯ ಬಡ್ಡಿ ದರವು 3.50% ಆಗಿದೆ. 46 ದಿನಗಳಿಂದ 179 ದಿನಗಳ ನಡುವಿನ ಠೇವಣಿಗಳಿಗೆ, ಬಡ್ಡಿ ದರವು 5.50% ಕ್ಕೆ ಏರುತ್ತದೆ. 180 ದಿನಗಳಿಂದ 210 ದಿನಗಳವರೆಗೆ ಬಡ್ಡಿ ದರ 6.00%. 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ 6.25% ಬಡ್ಡಿದರವನ್ನು ಪಡೆಯುತ್ತದೆ.

1 ವರ್ಷದಿಂದ 2 ವರ್ಷದೊಳಗಿನ ಬಡ್ಡಿ ದರವು 6.80% ಕ್ಕಿಂತ ಹೆಚ್ಚಾಗಿರುತ್ತದೆ. 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ, ಈ ದರವು ಗರಿಷ್ಠ 7.00% ತಲುಪುತ್ತದೆ. 3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ ಅವಧಿಗೆ ಬಡ್ಡಿ ದರವು 6.75% ಕ್ಕೆ ಸ್ವಲ್ಪ ಕಡಿಮೆಯಾಗುತ್ತದೆ. 5 ವರ್ಷದಿಂದ 10 ವರ್ಷಗಳವರೆಗಿನ ದೀರ್ಘಾವಧಿ ಠೇವಣಿಗಳ ಬಡ್ಡಿ ದರವು 6.50% ಆಗಿದೆ.

Join Nadunudi News WhatsApp Group

SBI FD Interest Rate
Image Credit: Timesnowhindi

Join Nadunudi News WhatsApp Group