SBI FD: SBI ಗ್ರಾಹಕರಿಗೆ ಹೊಸ ವರ್ಷದ ಇನ್ನೊಂದು ಉಡುಗೊರೆ, SBI ನಲ್ಲಿ ಜಾರಿಗೆ ಬಂತು ಹೊಸ FD ಸ್ಕೀಮ್

ಹೊಸ ವರ್ಷದ ಆರಂಭದಲ್ಲಿ SBI ಗ್ರಾಹಕರಿಗೆ ವಿಶೇಷ ಠೇವಣಿ ಯೋಜನೆ

SBI Green Rupee Term Deposit- SBI SGRTD: ಸರ್ಕಾರೀ ಸ್ವಾಮ್ಯದ ಬ್ಯಾಂಕ್ ಆಗಿರುವ SBI ಸದ್ಯ ದೇಶದಲ್ಲಿ ಜನರಿಗಾಗಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಅವಕಾಶವನ್ನು ನೀಡುವುದರ ಜೊತೆಗೆ ಹಲವಾರು ಡೆಪಾಸಿಟ್ ಸ್ಕೀಮ್ ಗಳನ್ನೂ ಕೂಡ ಪ್ರಾರಂಭಿಸಿದೆ. SBI ಗ್ರಾಹಕರು ಬ್ಯಾಂಕ್ ನೀಡುತ್ತಿರುವ ಡೆಪಾಸಿಟ್ ಸ್ಕೀಮ್ ಗಳ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು. ಸದ್ಯ SBI ತನ್ನ ಗ್ರಹಕರಿಗಾಗಿ ವಿಶೇಷ ಠೇವಣಿ ಪ್ಲಾನ್ ಅನ್ನು ಆಯೋಜಿಸಿದೆ. ನೀವು ಈ ಯೋಜನೆಯಲ್ಲಿ ಹಣವನ್ನ ಠೇವಣಿ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

SBI Green Rupee Term Deposit
Image Credit: Asianetnews

SBI Green Rupee Term Deposit (SBI SGRTD)
ಸದ್ಯ State Bank Of India ಇದೀಗ ಹೊಸ ವರ್ಷದ ಆರಂಭದಲ್ಲಿ ಗ್ರಾಹಕರಿಗಾಗಿ SBI Green Rupee Term Deposit ವಿಶೇಷ ಠೇವಣಿ ಯೋಜನೆಯನ್ನು ಪರಿಚಯಿಸಿದೆ. ಗ್ರೀನ್ ಬಾಂಡ್ ಸೇರಿದಂತೆ ಅಮೃತ ಕಲಶ, ವಿಕೇರ್ ಯೋಜನೆಗಳಂತೆಯೇ SBI SGRTD ಯೋಜನೆಯು ಇರಲಿದೆ. SBI ನ Green Rupee Term Deposit ನಲ್ಲಿ ಠೇವಣಿ ಇರಿಸುವ ಠೇವಣಿ ಹಣವನ್ನು ಪರಿಸರ ಸ್ನೇಹಿ ಅಥವಾ ಇ-ಪ್ರಾಜೆಕ್ಟ್‌ ಗಳಿಗೆ ಸಾಲ ನೀಡಲಾಗುತ್ತದೆ. ಪರಿಸರ ಕಾಳಜಿ ಇರುವವರು ಈ ಯೋಜನೆಯ ಲಾಭ ಪಡೆಯಬಹುದು.

SBI SGRTD ನಲ್ಲಿ ಹೂಡಿಕೆ ಮಾಡುವುದು ಹೇಗೆ..?
SBI Green Rupee Term Deposit ನಲ್ಲಿ ಹೂಡಿಕೆ ಮಾಡಲು ನಿಮಗೆ ಮೂರು ಆಯ್ಕೆಗಳಿರುತ್ತದೆ.
1 . 1,111 ದಿನಗಳು (36 ತಿಂಗಳುಗಳು)

2 . 1,777 ದಿನಗಳು (48 ತಿಂಗಳುಗಳು)

3 . 2,222 ದಿನಗಳು (72 ತಿಂಗಳುಗಳು)

Join Nadunudi News WhatsApp Group

SBI New FD Scheme
Image Credit: Karnataka News

ಈ ಯೋಜನೆಯಲ್ಲಿ ಹೂಡಿಕೆಗೆ ಎಷ್ಟು ಬಡ್ಡಿದರ ನೀಡಲಾಗುತ್ತದೆ..?
ಇನ್ನು ಸಾಮಾನ್ಯ ಹೂಡಿಕೆಯ ಪ್ಲಾನ್ ಗಳಿಗಿಂತ ಈ SBI Green Rupee Term Deposit ನಲ್ಲಿ ಬಡ್ಡಿದರ ಕಡಿಮೆ ಇರುತ್ತದೆ ಎನ್ನುವುದು ನಿಮಗೆ ತಿಳಿದಿರಲಿ. 5.90 ರಿಂದ ಶೇ. 7.40 ರವರೆಗೆ ಬಡ್ಡಿದರ ಇದೆ. ಹಿರಿಯ ನಾಗರಿಕರಿಗೆ ಗರಿಷ್ಠ ಬಡ್ಡಿ ದರವನ್ನು ನೀಡಲಾಗುತ್ತದೆ.

ಸಾಮಾನ್ಯ ಗ್ರಾಹಕರಿಗೆ 1,111 ಮತ್ತು 1,777 ದಿನಗಳ ಠೇವಣಿಗಳಿಗೆ ವಾರ್ಷಿಕ ಶೇ. 6.65% ಬಡ್ಡಿ ಇರುತ್ತದೆ. ಠೇವಣಿ 2,222 ದಿನಗಳವರೆಗೆ ಇದ್ದರೆ, ಬಡ್ಡಿ ದರ ರೂ. 6.40 ರಷ್ಟು ನೀಡಲಾಗಿದೆ. ಈ ಠೇವಣಿಗಳಿಗೆ ಹಿರಿಯ ನಾಗರಿಕರಿಗೆ ಶೇ. 7.15 ಮತ್ತು ಶೇ. 7.40 ಬಡ್ಡಿ ಸಿಗಲಿದೆ.

Join Nadunudi News WhatsApp Group