SBI New Rule: SBI ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆ, ಗ್ರಾಹಕರಿಗೆ ಬೇಸರದ ಸುದ್ದಿ.

SBI New Rule: ಇದೀಗ 2023 ರ ಪ್ರಾರಂಭದಿಂದ ಬ್ಯಾಂಕ್ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ತಮ್ಮ ಗ್ರಾಹಕರಿಗಾಗಿ ಅನೇಕ ನಿಯಮಗಳನ್ನು ಬ್ಯಾಂಕ್ ಬದಲಾಯಿಸಿದೆ.

ಅದರ ಜೊತೆಗೆ ಗ್ರಾಹಕರಿಗೆ ಅನುಕೂಲವಾಗಲು ಹೊಸ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಇದೀಗ ಎಸ್ ಬಿಐ (State Bank Of India) ಗ್ರಾಹಕರಿಗೆ ಬ್ಯಾಂಕ್ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

Change in SBI Bank Rules, Disappointing News for Customers
Image Credit: thenewsminute

ಎಸ್ ಬಿಐ (State Bank Of India) ಗ್ರಾಹಕರಿಗೆ ಬೇಸರದ ಸುದ್ದಿ
ಇದೀಗ ಎಸ್ ಬಿಐ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಲಭಿಸಿದೆ. ನೀವು ಎಸ್ ಬಿಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ನಿಮ್ಮ ಖಾತೆಯಿಂದ ಸ್ವಯಂ ಚಾಲಿತವಾಗಿ ಹಣ ಕಡಿತಗೊಳ್ಳುತ್ತಿದ್ದರೆ, ಬ್ಯಾಂಕ್ ನಿಮ್ಮ ಖಾತೆಯಿಂದ ಹಣವನ್ನು ಏಕೆ ಕಡಿತಗೊಳಿಸುತ್ತದೆ ಎಂದು ತಿಳಿದುಕೊಳ್ಳೋಣ.

ಎಸ್ ಬಿಐ ಗ್ರಾಹಕರ ಖಾತೆಯಿಂದ 147.50 ರೂ ಕಡಿತ
ಇತ್ತೀಚಿನ ದಿನಗಳಲ್ಲಿ ಎಸ್ ಬಿಐ ಗ್ರಹಕರ ಖಾತೆಯಿಂದ ಹಣ ಕಡಿತವಾಗುತ್ತಿದೆ. ನೀವು ಇದರ ಬಗ್ಗೆ ತಲೆ ಕೆಡಿಸಿಕೊಂಡಿರಬಹುದು. ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಹಣ ಕಡಿತವಾಗುತ್ತಿದೆ.  147.50 ರೂಪಾಯಿ ಕಡಿತವಾಗುವ ಸಂದೇಶ ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ.

SBI has given the reason for the reduction of funds
Image Credit: thenewsminute

ಬ್ಯಾಂಕ್ ನಿಮ್ಮ ಖಾತೆಯಿಂದ 147.50 ರೂಪಾಯಿ ಕಡಿತಗೊಳಿಸುವ ಕಾರಣವನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದೆ. ಈ ಹಣವನ್ನು ವರ್ಷಕ್ಕೊಮ್ಮೆ ಮಾತ್ರ ಬ್ಯಾಂಕ್ ನಿಂದ ತೆಗೆದುಕೊಳ್ಳಲಾಗುತ್ತದೆ ಎಂದು ಬ್ಯಾಂಕ್ ಟ್ವೀಟ್ ಮಾಡುವ ಮೂಲಕ ತಿಳಿಸಿದೆ.

Join Nadunudi News WhatsApp Group

The bank clarified on Twitter that the money was deducted from the SBI account
Image Credit: businessworld

147.50 ರೂಪಾಯಿಯನ್ನು ಬ್ಯಾಂಕಿನಿಂದ ಶುಲ್ಕವಾಗಿ ಕಡಿತಗೊಳಿಸಲಾಗುತ್ತದೆ. ಬ್ಯಾಂಕ್ ನೀಡಿದ ಡೆಬಿಟ್ ಕಾರ್ಡ್ ಗೆ ಗ್ರಾಹಕರಿಂದ ವಾರ್ಷಿಕ 125 ರೂ. ಇದಕ್ಕೆ ಶೇಕಡಾ 18 ರ ದರದಲ್ಲಿ GST ಸೇರಿಸಲಾಗುತ್ತದೆ. ನಂತರ ಈ ಮೊತ್ತವು 147.50 ರೂ ಆಗುತ್ತದೆ. ಹಾಗೆಯೆ ನೀವು ನಿಮ್ಮ ಡೆಬಿಟ್ ಕಾರ್ಡ್ ಅನ್ನು ಬದಲಾಯಿಸಲು ಬಯಸಿದರೆ GST ಶುಲ್ಕವಾಗಿ 300 ರೂ ಪಾವತಿಸಬೇಕಾಗುತ್ತದೆ.

Join Nadunudi News WhatsApp Group