Screen Pinning: ಮೊಬೈಲ್‌ ನಲ್ಲಿ ಈ ಸೆಟ್ಟಿಂಗ್ ಆನ್ ಮಾಡಿ, Password ಹಾಕದಿದ್ದರೂ ಯಾರು ಮೊಬೈಲ್ ಬಳಸಲು ಸಾಧ್ಯವಿಲ್ಲ

ಸ್ಮಾರ್ಟ್ ಫೋನ್ ನಲ್ಲಿ Screen Pinning ಫೀಚರ್, ಇನ್ಮುಂದೆ Password ಅಗತ್ಯ ಇಲ್ಲ

Screen Pinning Feature: ಇಂದಿನ ಕಾಲಮಾದಲ್ಲಿ ಸ್ಮಾರ್ಟ್ ಫೋನ್ ( Smart Phone ) ಬಳಸದವರು ಅತಿ ಕಡಿಮೆ ಎಂದರೆ ತಪ್ಪಾಗಲ್ಲ. ಸ್ಮಾರ್ಟ್ ಫೋನ್ ಬಳಕೆದಾರರ ವೈಯಕ್ತಿಕ ಡೇಟಾ ಹೊಂದಿರುವಂತ ವಸ್ತುವಾಗಿದೆ. ಜನರು ತಮ್ಮ ಫೋಟೋ, ವಿಡಿಯೋ, ಇತ್ಯಾದಿಯನ್ನು ಫೋನ್ ನಲ್ಲಿ ಸ್ಟೋರ್ ಮಾಡಿಟ್ಟುಕೊಂಡಿರುತ್ತಾರೆ.

ನಮ್ಮ ವೈಯಕ್ತಿಕ ಡೇಟಾವನ್ನು ನಾವು ಬೇರೆಯವರು ನೋಡಲು ಅನುಮತಿಸುದಿಲ್ಲ. ಈ ಕಾರಣಕ್ಕಾಗಿ ವೈಯಕ್ತಿಕ ಡೇಟಾ ಸುರಕ್ಷತೆ ಪ್ರಮುಖ ಸಮಸ್ಯೆಯಾಗಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಸ್ಮಾರ್ಟ್ ಫೋನ್ ನಲ್ಲಿ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಬಗ್ಗೆ ನಾವೀಗ ಮಾಹಿತಿ ತಿಳಿದುಕೊಳ್ಳೋಣ.

Screen Pinning Feature
Image Credit: Samsung

ಸ್ಮಾರ್ಟ್ ಫೋನ್ ನಲ್ಲಿ Screen Pinning ಫೀಚರ್
Smartphone ಬಳಕೆದಾರರು ವೈಯಕ್ತಿಕ ಡೇಟಾ ಸುರಕ್ಷತೆಗಾಗಿ ಫೋನ್ ಗಳಲ್ಲಿ ಪಾಸ್ ವರ್ಡ್ ಅನ್ನು ಇಟ್ಟುಕೊಂಡಿರುತ್ತಾರೆ. ಇದೀಗ ನೀವು ನಿಮ್ಮ ಫೋನ್ ಗೆ Password ಹಾಕುವ ಅಗತ್ಯ ಇಲ್ಲ. ಹೌದು ಈ ಫೀಚರ್ ಮೂಲಕ ನಿಮ್ಮ ಫೋನ್‌ ನಲ್ಲಿರುವ ವೈಯಕ್ತಿಕ ಡೇಟಾವನ್ನು ಇತರರಿಂದ ರಕ್ಷಿಸಬಹುದು.

ಈ ವೈಶಿಟ್ಯವನ್ನು Pin The Screen / Screen Pinning ಎಂದು ಕರೆಯಲಾಗುತ್ತದೆ. ಸದ್ಯ ನೀವು ನಿಮ್ಮ ಫೋನ್‌ ನಲ್ಲಿರುವ ಯಾವುದೇ ಅಪ್ಲಿಕೇಶನ್ ಅನ್ನು Screen Pinning ಮೂಲಕ ಲಾಕ್ ಮಾಡಬಹುದು. ಈ ವೈಶಿಷ್ಟ್ಯವು ಆಂಡ್ರಾಯ್ಡ್ 5.0 ಮತ್ತು ಮೇಲಿನ ಎಲ್ಲಾ ಆವೃತ್ತಿಗಳಲ್ಲಿ ಲಭ್ಯವಿದೆ.

Phone Lock Tips
Image Credit: Heraldspot

Screen Pinning ಫೀಚರ್ ಬಳಸುವುದು ಹೇಗೆ?
*ಮೊದಲು ಫೋನ್ ಸೆಟ್ಟಿಂಗ್ ಗೆ ಹೋಗಿ ಅಲ್ಲಿರುವ ಸೆಕ್ಯೂರಿಟಿ ಹಾಗೂ ಲಾಕ್ ಸ್ಕ್ರೀನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

Join Nadunudi News WhatsApp Group

*ಪ್ರೈವೆಸಿ ಗೆ ಸಂಬಂಧಿಸಿದ ಹಲವು ಆಯ್ಕೆಗಳಲ್ಲಿ Screen Pinning ಅನ್ನು ಆಯ್ಕೆ ಮಾಡಿ ಆನ್ ಮಾಡಬೇಕು.

*ಈಗ ನೀವು ನಿಮ್ಮ ಫೋನ್ ಅಲ್ಲಿ ಇತರರು ಬಳಸಲು ಬಯಸುವ ಅಪ್ಲಿಕೇಶನ್ ಅನ್ನು ಲಾಕ್ ಮಾಡಬಹುದು.

*ಇದರ ನಂತರ ನೀವು ಪಿನ್ ಮಾಡಲು ಬಯಸುವ ಅಪ್ಲಿಕೇಶನ್ ಅನ್ನು ದೀರ್ಘವಾಗಿ ಒತ್ತಿ ಪಿನ್ ಆಯ್ಕೆಯನ್ನು ಆರಿಸಿ ಪಿನ್ ಮಾಡಬೇಕು. ಈಗ ನಿಮ್ಮ ಫೋನ್ ನಲ್ಲಿ ಇತರ ಯಾವುದೇ ಅಪ್ಲಿಕೇಶನ್ ಅನ್ನು ಬೇರೆಯವರು ಬಳಸಲು ಸಾಧ್ಯವಾಗುವುದಿಲ್ಲ.

Screen Pinning Feature In Android Phone
Image Credit: Navbharattimes

ಪರದೆಯ ಪಿನ್ ತೆಗೆದುಹಾಕುವ ವಿಧಾನ
ನಿಮ್ಮ ಫೋನ್ ನಲ್ಲಿರುವ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಬೇರೆಯವರು ನಿಮಗೆ ಫೋನ್ ಅನ್ನು ಹಿಂತಿರುಗಿಸಿದಾಗ ನೀವು ಪಿನ್ ಆಯ್ಕೆಯನ್ನು ತೆಗೆದುಹಾಕಬಹುದು. ಇದಕ್ಕಾಗಿ ಹೋಮ್ ಮತ್ತು ಬ್ಯಾಕ್ ಬಟನ್‌ಗಳನ್ನು ಒಟ್ಟಿಗೆ ಒತ್ತಿ ಮತ್ತು ಲಾಕ್ ಸ್ಕ್ರೀನ್ ಪಾಸ್ ವರ್ಡ್ ಬಳಸಿ. ಸರಳವಾಗಿ ನಿಮ್ಮ ಫೋನ್‌ ನಿಂದ Screen Pinning ಆಯ್ಕೆಯನ್ನು ತೆಗೆದುಹಾಕಲಾಗುತ್ತದೆ.

Join Nadunudi News WhatsApp Group