Shah Rukh Khan Remuneration: ಪಠಾಣ್ ಸಿನಿಮಾಕ್ಕಾಗಿ ದುಬಾರಿ ಸಂಭಾವನೆ ಪಡೆದ ಶಾರುಖ್ ಖಾನ್.

Shah Rukh Khan Pathan Movie Salary: ಬಾಲಿವುಡ್ ಕಿಂಗ್ ಶಾರುಖ್ ಖಾನ್ (Shah Rukh Khan) ಅಭಿನಯದ ಪಠಾಣ್ (Pathaan) ಸಿನಿಮಾ ಜನವರಿ 26 ರಂದು ಬಿಡುಗಡೆ ಆಗಿ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಪಠಾಣ್ ಸಿನಿಮಾ ನೋಡಿದ ಶಾರುಖ್ ಖಾನ್ ಅಭಿಮಾನಿಗಳು ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

ಈ ಸಿನಿಮಾ ನೋಡಿದ ಜನರೆಲ್ಲಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ (Deepika Padukone) ಹಾಗು ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಭಾರಿ ಗೆಲುವನ್ನು ಪಡೆದುಕೊಳ್ಳುತ್ತಾ ಇದೆ.

Shah Rukh Khan was paid 100 crores for the film Pathan
Image Credit: instagram

ಬಾಲಿವುಡ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸಿನಿಮಾ ಪಠಾಣ್
ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಭಾರತ ಸೇರಿದಂತೆ ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಕಿಂಗ್ ಖಾನ್ ಚಿತ್ರವು ಭಾರತದಲ್ಲಿ 200 ಕೋಟಿ ರೂಪಾಯಿ ದಾಟಿದ್ದು ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಮಾಡಿದ ಪ್ರಮುಖ ಹಿಂದಿ ಚಲನ ಚಿತ್ರವಾಗಿದೆ. ಸದ್ಯ ಪಠಾಣ್ ಒಟ್ಟು ಸಂಗ್ರಹ 400 ರಿಂದ 429 ರೂಪಾಯಿ ಕೋಟಿಗಳ ಗಡಿಯನ್ನು ದಾಟಿದೆ.

Actor Shah Rukh Khan, who received a salary of 100 crores for the film Pathan, felt like an expensive actor
Image credit: instagram

ಪಠಾಣ್ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆದ ಶಾರುಖ್ ಖಾನ್
ಶಾರುಖ್ ಖಾನ್ ಹಾಗು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಪಠಾಣ್ ಸಿನಿಮಾ ಈಗಾಗಲೇ 429 ಕೋಟಿ ಲೂಟಿ ಮಾಡಿದೆ.

ಪಠಾಣ್ ಬಾಕ್ಸ್ ಆಫೀಸ್ ಮೊತ್ತ 429 ಕೋಟಿ ರೂಪಾಯಿ ಗಳಿಕೆ ಆಗಿದೆ. ಪಠಾಣ್ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿರುವ ಶಾರುಖ್ ಖಾನ್ ಈ ಚಿತ್ರಕ್ಕಾಗಿ 100 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ. ಪಠಾಣ್ ಸಿನಿಮಾ ರಿಲೀಸ್ ಆದ ದಿನದಿಂದ ಹಲವಾರು ಜನರು ಒಳ್ಳೆಯ ಪ್ರತಿಕ್ರಿಯೆ ನೀಡಿದರೆ ಇನ್ನು ಕೆಲವರು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಟ ಶಾರುಖ್ ಖಾನ್ ವಿವಾದದ ನಡುವೆಯೂ ಭರ್ಜರಿ 100 ಕೋಟಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group