Repo Rate 2024: Repo ದರದ ಬಗ್ಗೆ ಇಂದು ಮಹತ್ವದ ಘೋಷಣೆ, ಮತ್ತೆ ಹೆಚ್ಚಾಗುತ್ತಾ ಹೋಂ ಲೋನ್ ಬಡ್ಡಿ

Repo ದರದ ಬಗ್ಗೆ ಇಂದು ಮಹತ್ವದ ಘೋಷಣೆ

Shaktikanta Das About Repo Rate: ಇಂದು RBI ಗವರ್ನರ್ Shaktikanth Das ಅವರು ಮಹತ್ವದ ಸಭೆ ನಡೆಸಿ ರೆಪೋ ದರ ಸೇರಿದಂತೆ ಇನ್ನಿತರ ದರಗಳ ಬಗ್ಗೆ ಮಹತ್ವದ ಘೋಷಣೆ ಹೊರಡಿಸಲಿದ್ದಾರೆ. ಈವರೆಗೆ RBI ತನ್ನ ರೆಪೋ ದರವನ್ನು ಹೆಚ್ಚಿಸಿಲ್ಲ. ಪ್ರಸ್ತಿತ RBI Repo ದರವು 6.5 ನಷ್ಟಿದೆ. ಇನ್ನು RBI ತನ್ನ ರೆಪೋ ದರವನ್ನು ಹೆಚ್ಚಿಸಿದರೆ ಬ್ಯಾಂಕುಗಳು ತನ್ನ ಸಾಲದ ಬಡ್ಡಿದರವನ್ನು ಹೆಚ್ಚಿಸುವುದು ಸಾಮಾನ್ಯ.

ಇದು ಸಾಲಗಾರರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇನ್ನು ಕಳೆದ ವರ್ಷದಿಂದ RBI ಹಣದುಬ್ಬರತೆಯ್ನನು ಗಮನದಲ್ಲಿಟ್ಟುಕೊಂಡು ತನ್ನ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ತಂದಿರಲಿಲ್ಲ. ಸದ್ಯ MPC ಸಭೆಯ ಬಳಿಕ ಶಕ್ತಿಕಾಂತ್ ದಾಸ್ ಅವರು ರೆಪೋ ದರದ ಬಗ್ಗೆ ಘೋಷಣೆ ಹೊರಡಿಸಲಿದ್ದಾರೆ. ಜನಸಮಾನ್ಯರು RBI ಘೋಷಣೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ ಎನ್ನಬಹುದು.

RBI Governor Shaktikanta Das
Image Credit: The Print

Repo ದರದ ಬಗ್ಗೆ ಇಂದು ಮಹತ್ವದ ಘೋಷಣೆ
ಆರ್‌ಬಿಐನ RBI Monetary Policy Committee ಮೂರು ದಿನಗಳ ಸಭೆ ಇಂದು ಮುಕ್ತಾಯವಾಗಲಿದೆ. ಇದರ ಬೆನ್ನಲ್ಲೇ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು (ಫೆ.8) ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಸಭೆಯ ನಿರ್ಧಾರ ಹಾಗೂ ಚರ್ಚಿಸಿದ ಸಂಗತಿಗಳನ್ನು ಬಹಿರಂಗಪಡಿಸಲಿದ್ದಾರೆ. ಈ ಸಭೆಯಲ್ಲಿ ರೆಪೋ ದರ, GDP, ಹಣದುಬ್ಬರ ಸೇರಿದಂತೆ ಇನ್ನಿತರ ದರಗಳ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಶಕ್ತಿಕಾಂತ್ ದಾಸ್ ಅವರು ಸುದ್ದಿಗೋಷ್ಠಿ ನಡೆಸಿ ರೆಪೊ ದರದ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ.

RBI ರೆಪೋ ದರವನ್ನು ಹೆಚ್ಚಿಸುತ್ತಾ..?
ಕಳೆದ ಹಣಕಾಸು ವರ್ಷದಲ್ಲಿ ಕೂಡ ಜನಸಾಮಾನ್ಯರು ಹಣದುಬ್ಬರದ ಪರಿಸ್ಥಿಯನ್ನು ಎದುರಿಸಿದ್ದರು. ಕಳೆದ ಬಾರಿ RBI ಆರು ಬಾರಿ ರೆಪೊ ದರವನ್ನು ಹೆಚ್ಚಿಸಿದೆ. ಕಳೆದ ವರ್ಷದ ಮೇ ತಿಂಗಳಿನಿಂದ RBI ರೆಪೋ ದರದಲ್ಲಿ ಶೇ. 2.5 ಏರಿಕೆ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಶೇ. 4 ಕ್ಕೆ ನಿಗಧಿಯಾಗಿದ್ದ ಆರ್ ಬಿಐ ರೆಪೋ ದರ 2023 ರ ಜನವರಿ ವೇಳೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು.

Repo Rate In India
Image Credit: Moneyview

ಇದೀಗ RBI ರೆಪೋ ದರ ಮತ್ತೆ ಹೆಚ್ಚಳ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಸಾಲಗಳ ಹೊರೆ ಹೆಚ್ಚಾಗಬಾರದು ಅನ್ನುವ ಉದ್ದೇಶದಿಂದ RBI ರೆಪೋ ದರದಲ್ಲಿ ಯಥಾಸ್ಥಿತಿಯನ್ನ ಕಾಯ್ದುಕೊಳ್ಳಲಿದೆ ಎನ್ನುವ ಬಗ್ಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 2023 ರ ಜನವರಿ ವೇಳೆಯಲ್ಲಿ ಆರ್ ಬಿಐ ರೆಪೋ ದರ ಶೇ. 6.50 ಕ್ಕೆ ಏರಿಕೆಯಾಗಿದೆ. ಪ್ರಸ್ತುತ RBI ರೆಪೋ ದರವನ್ನು ಎಷ್ಟರಲ್ಲಿ ಇರಿಸಲಿದೆ ಎನ್ನುವ ಬಗ್ಗೆ ಕಾದು ನೋಡಬೇಕಿದೆ.

Join Nadunudi News WhatsApp Group

Join Nadunudi News WhatsApp Group