Old Pension: ರಾಜ್ಯ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ಪಿಂಚಣಿ ನಿಯಮ ಬದಲಾಯಿಸಿದ ಸಿದ್ದರಾಮಯ್ಯ.

ಹಳೆಯ ಪಿಂಚಣಿ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ, ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ.

Siddaramaiah About Old Pension: ಇತ್ತೀಚಿಗೆ ಸರ್ಕಾರಿ ನೌಕರರಿಗೆ ವೇತನದ ವಿಷಯವಾಗಿ ಸರ್ಕಾರ ಸಾಕಷ್ಟು ರೀತಿಯ ಅಪ್ಡೇಟ್ ಗಳನ್ನೂ ನೀಡುತ್ತಿವೆ. ಸರ್ಕಾರಿ ನೌಕರರ ವೇತನ ಹೆಚ್ಚಳದ ಕುರಿತು ಸರ್ಕಾರ ನೌಕರರಿಗೆ ಸಿಹಿಸುದ್ದಿ ನೀಡಿದೆ. ಇನ್ನು ಇತ್ತೀಚಿಗೆ ಹಳೆಯ ಪಿಂಚಣಿ (Old Pension) ನೀಡುವ ಕುರಿತು ಸಾಕಷ್ಟು ರೀತಿಯ ಸುದ್ದಿಗಳು ಹರಡಿದ್ದವು.

ಇದೀಗ ಸರ್ಕಾರ ಹಳೆಯ ಪಿಂಚಣಿ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಯಾರಿಗೆ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ ಎನ್ನುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

Government has taken an important decision on old age pension.
Image Credit: india

ರಾಜ್ಯ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್
ಪ್ರಸ್ತುತ ಸರ್ಕಾರೀ ನೌಕರರಿಗೆ ಹೊಸ ಪಿಂಚಣಿ ಪದ್ದತಿಯಲ್ಲಿ ಪಿಂಚಣಿ ನೀಡಲಾಗುತ್ತಿದೆ. ಹೀಗಾಗಿ ನೌಕರರು ಹಳೆಯ ಪಿಂಚಣಿ ಪದ್ಧತಿ ಪ್ರಕಾರ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದೀಗ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು ಅನೇಕ ನಿಯಮಗಳು ಬದಲಾಗಿವೆ. ಇದೀಗ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹಳೆಯ ಪಿಂಚಣಿ ಮರು ಜಾರಿ ಮಾಡುವ ಕುರಿತು ಮಹತ್ವದ ಘೋಷಣೆಯನ್ನು ಹೊರಡಿಸಿದ್ದಾರೆ.

ಹಳೆಯ ಪಿಂಚಣಿ ಮರು ಜಾರಿ ಸಾಧ್ಯತೆ
ಹಳೆಯ ಪಿಂಚಣಿ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಜೆಟ್ ನಲ್ಲಿ ಘೋಷಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.

Government has taken an important decision on old age pension.
Image Credit: abplive

ಈ ಮೂಲಕ ರಾಜ್ಯ ಸರ್ಕಾರೀ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಸರ್ಕಾರೀ ಏನ್.ಪಿ.ಎಸ್ ನೌಕರರ ಸಂಘ ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡಿಕೊಂಡಿದೆ.

Join Nadunudi News WhatsApp Group

2006 ರ ನಂತರ ನೇಮಕವಾಗಿರುವ ಎಲ್ಲಾ ಸರ್ಕಾರೀ ನೌಕರರು ಮತ್ತು ಅವರ ಅವಲಂಭಿತ ಕುಟುಂಬಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. 7 ನೇ ವೇತನ ಆಯೋಗದ ವರದಿಗಳನ್ನು ಶೀಘ್ರವಾಗಿ ಪಡೆದು ವೇತನ, ಭತ್ಯೆ ಪರಿಷ್ಕರಿಸಬೇಕು ಎಂದು ಸರಕಾರಿ ನೌಕರರು ಮನವಿ ಮಾಡಿದ್ದರು. ಇದೀಗ ಹೊಸ ಪಿಂಚಣಿ ನೀತಿ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ತರಲು ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಅವರು ಘೋಷಣೆ ಹೊರಡಿಸಿದ್ದಾರೆ.

Join Nadunudi News WhatsApp Group