Sim Purchase Rule: ಮೊಬೈಲ್ ಗೆ ಎರಡು ಸಿಮ್ ಹಾಕಿಸಿಕೊಳ್ಳುವ ಮುನ್ನ ಹೊಸ ಕಾನೂನು ತಿಳಿದುಕೊಳ್ಳಿ, ಕಟ್ಟುನಿಟ್ಟಿನ ಕ್ರಮ.

ಜನವರಿ 1 ರಿಂದ ಸಿಮ್ ಕಾರ್ಡಿಗೆ ಸಂಬಂಧಿಸಿದಂತೆ ಜಾರಿಗೆ ಬರಲಿದೆ ಹೊಸ ನಿಯಮ.

New Sim Card Purchase Rule From January 1st: ಸದ್ಯ ದೇಶದಲ್ಲಿ ಹೊಸ ನಿಯಮಗಳು ಪರಿಚಯವಾಗುತ್ತಿದೆ. ದೇಶದಲ್ಲಿ ವಂಚನೆ ಹೆಚ್ಚುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ವಂಚನೆಯನ್ನು ತಡೆಯಲು  ವಿವಿದ ಕ್ರಮ ಕೈಗೊಳ್ಳುತ್ತಿದೆ.

ಇನ್ನು ಫೋನ್ ಕರೆಯ ಮೂಲಕ ವಂಚನೆ ಹೆಚ್ಚುತ್ತಿರುವ ಹೆಚ್ಚಾಗಿ ಬೆಳಕಿಗೆ ಬರುತ್ತಿರುವ ಹಿನ್ನಲೆ, ವಂಚಕರು ಸಿಮ್ ಕಾರ್ಡ್ ಗಳನ್ನೂ ದುರ್ಬಳಕೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಸರ್ಕಾರ ದೇಶದಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಈಗಾಗಲೇ ಕೇಂದ್ರ ಸರ್ಕಾರ ಒಂದು ಐಡಿಯಲ್ಲಿ ಸೀಮಿತ ಸಿಮ್ ಗಳನ್ನೂ ಖರೀದಿಸುವ ನಿಯಮವನ್ನು ಅಳವಡಿಸಿತ್ತು. ಇದರ ಬೆನ್ನಲ್ಲೇ ಕೇಂದ್ರದಿಂದ ಸಿಮ್ ಖರೀದಿಗೆ ಮತ್ತೊಂದು ಹೊಸ ನಿಯಮ ಅನ್ವಯವಾಗಲಿದೆ.

Sim Deactivation
Image Credit: Manilashaker

ಸಿಮ್ ಕಾರ್ಡ್ ಕುರಿತಂತೆ ಹೊಸ ಮಾರ್ಗಸೂಚಿ
ಸದ್ಯ ದೇಶದಲ್ಲಿ ಟೆಲಿಕಾಂ ಸಚಿವಾಲಯ ಸಿಮ್ ಖರೀದಿಯ ನಿಯಮವನ್ನು ಪರಿಚಯಿಸಿದೆ. ಹೊಸ ವರ್ಷದಿಂದ ಸಿಮ್ ಖರೀದಿಗೆ ಹೊಸ ನಿಯಮ ಅನ್ವಯವಾಗಲಿದೆ. ಈ ಹೊಸ ನಿಯಮ ಹೊಸ ಸಿಮ್ ಕಾರ್ಡ್ ಖರೀದಿಯ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ.

ದೇಶದಲ್ಲಿ ಡಿಜಿಟಲೀಕರಣವನ್ನು ಉತ್ತೇಜಿಸಲು, ದೂರಸಂಪರ್ಕ ಇಲಾಖೆ ಈಗ ಹೊಸ ಸಿಮ್ ಕಾರ್ಡ್ ಪಡೆಯಲು ಕಾಗದ ಆಧಾರಿತ KYC ಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಮಾಹಿತಿ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಗ್ರಾಹಕರು ಹೊಸ ಸಿಮ್ ಕಾರ್ಡ್ ಪಡೆಯಲು ಡಿಜಿಟಲ್ ಅಥವಾ ಇ-ಕೆವೈಸಿಯನ್ನು ಮಾತ್ರ ಸಲ್ಲಿಸಬೇಕಾಗುತ್ತದೆ.

Sim Deactivation Latest Update
Image Credit: Retailnews

ಮೊಬೈಲ್ ಬಳಸುವವರಿಗೆ ಜನವರಿ 1 ರಿಂದ ಹೊಸ ರೂಲ್ಸ್
ಹೊಸ ವರ್ಷದಿಂದ ಅಂದರೆ ಜನವರಿ 1, 2024 ರಿಂದ ಸಿಮ್ ಕಾರ್ಡ್‌ಗಳನ್ನು ಖರೀದಿಸುವ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುವುದು ಎಂದು ಸಂವಹನ ಸಚಿವಾಲಯದ ಟೆಲಿಕಾಂ ಇಲಾಖೆಯು ಮಂಗಳವಾರ ಅಧಿಸೂಚನೆಯನ್ನು ಹೊರಡಿಸಿದೆ. ಈಗ ಯಾವುದೇ ಗ್ರಾಹಕರು ಇ- SIM ಕಾರ್ಡ್ ಪಡೆಯಲು KYC ಮತ್ತು ಈಗ ಕಾಗದ ಆಧಾರಿತ KYC ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ.

Join Nadunudi News WhatsApp Group

ಇನ್ನು ಹೊಸ ಮೊಬೈಲ್ ಸಂಪರ್ಕವನ್ನು ಪಡೆಯುವ ಉಳಿದ ನಿಯಮಗಳು ಒಂದೇ ಆಗಿರುತ್ತವೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂದು ತಿಳಿಸಲಾಗಿದೆ. ಹೊಸ ನಿಯಮದ ಅಡಿಯಲ್ಲಿ, ಸಿಮ್ ಕಾರ್ಡ್ ಪಡೆಯಲು, ನೀವು ಇ-ಕೆವೈಸಿ ಜೊತೆಗೆ ಪೇಪರ್ ಆಧಾರಿತ ಕೆವೈಸಿ ಮಾಡಬಹುದಿತ್ತು, ಆದರೆ ಈಗ ಅದನ್ನು ಜನವರಿ 1 ರಿಂದ ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ.

Join Nadunudi News WhatsApp Group