Sobhita About Naga Chaitanya: ನಾಗಚೈತನ್ಯ ಜೊತೆಗಿನ ಮದುವೆ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಶೋಭಿತಾ.

Shobhita Dhulipala clearly gave about her marriage with Naga Chaitanya : ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ಜೊತೆಗೆ ನಟ ನಾಗ ಚತೈನ್ಯ ಪ್ರೀತಿಸಿ ಮದುವೆ ಆಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈ ಜೋಡಿ ಟಾಲಿವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿತ್ತು.

ಈ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಆದರೆ ಅಭಿಮಾನಿಗಳ ಮಚ್ಚುಗೆ ಜಾಸ್ತಿ ದಿನ ಇರಲಿಲ್ಲ. ಸಮಂತಾ (Samantha Ruth Prabhu) ಮತ್ತು ನಾಗ ಚೈತನ್ಯ (Naga Chaitanya) ಇಬ್ಬರಿಗೂ ಡಿವೋರ್ಸ್ ಆಯಿತು.

Actress Shobhita clarified about her marriage with Naga Chaitanya.
Image Source: India Today

ಈ ವಿಚಾರ ಅಭಿಮಾನಿಗಳ ಬೇಸರಕ್ಕೂ ಕಾರಣವಾಯಿತು. ಸಮಂತಾ ಜೊತೆಗೆ ನಾಗ ಚಾತನ್ಯ ಡಿವೋರ್ಸ್ ಪಡೆದ ನಂತರ ನಟಿ ಶೋಭಿತಾ ಜೊತೆ ಸುತ್ತಾಡುತ್ತಿದ್ದಾರೆ. ಇವರಿಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಡಿತ್ತು.

ನಾಗಚೈತನ್ಯ ಮತ್ತು ನಟಿ ಶೋಭಿತಾ
ನಾಗಚೈತನ್ಯ ಮತ್ತು ನಟಿ ಶೋಭಿತ ಧೂಳಿಪಲಾ (Sobhita Dhulipala) ಇಬ್ಬರು ಜೊತೆಗಿರುವುದನ್ನು ನೋಡಿದ ಜನರು ಇವರಿಬ್ಬರು ಮದುವೆ ಆಗುತ್ತಾರೆ ಅಂದುಕೊಂಡಿದ್ದರು. ಆದರೆ ಈ ಎಲ್ಲ ವದಂತಿಗಳಿಗೆ ನಟಿ ಶೋಭಿತಾ ಈಗ ಸ್ಪಷ್ಟನೆ ನೀಡಿದ್ದಾರೆ.

Actress Shobhita clarified about her marriage with Naga Chaitanya.
Image Source: India Today

 

Join Nadunudi News WhatsApp Group

 

ನಟಿ ಸಮಂತಾ ಅವರ ಜೊತೆ ನಾಗ ಚೈತನ್ಯ ಡಿವೋರ್ಸ್ ಪಡೆದುಕೊಂಡ ನಂತರ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಪ್ರೀತಿಸುತಿದ್ದಾರೆ. ಇಬ್ಬರು ಮದುವೆ ಆಗುತ್ತಾರೆ ಎಂಬೆಲ್ಲ ಸುದ್ದಿ ಎಲ್ಲ ಕಡೆ ವೈರಲ್ ಆಗಿತ್ತು. ಇದೀಗ ಈ ಸುದ್ದಿಗೆ ನಟಿ ಶೋಭಿತಾ ತೆರೆ ಎಳೆದಿದ್ದಾರೆ.

ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ನಟಿ ಶೋಭಿತಾ
ನಾಗ ಚೈತನ್ಯ ಮತ್ತು ನಟಿ ಶೋಭಿತ ಬಗ್ಗೆ ಬರುತ್ತಿರುವ ಎಲ್ಲ ಊಹಾಪೋಹಗಳಿಗೆ ನಟಿ ಶೋಭಿತಾ ಮೌನ ಮುರಿದಿದ್ದಾರೆ.  ನಾಗ ಚೈತನ್ಯ ಅವರು ನನಗೆ ಸೀನಿಯರ್. ಅವರಿಗೆ ನಾನು ಯಾವಾಗಲೂ ಗೌರವ ಕೊಡುತ್ತೇನೆ.

Actress Shobhita clarified about her marriage with Naga Chaitanya.
Image Source: India Today

ಆದರೆ ಅವರು ನನ್ನ ಜೊತೆ ಟಚ್ ನಲ್ಲಿ ಇಲ್ಲ ಎಂದು ಹೇಳುವ ಮೂಲಕ ಮದುವೆ ಸುದ್ದಿಗೆ ಶೋಭಿತಾ ಬ್ರೇಕ್ ಹಾಕಿದ್ದಾರೆ. ಈ ವಿಚಾರದ ಬಗ್ಗೆ ನಟಿ ಶೋಭಿತಾ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ.

Join Nadunudi News WhatsApp Group