Sold Property: ಮಾರಾಟವಾದ ಹೆತ್ತವರ ಆಸ್ತಿಯ ಮೇಲೆ ಮಕ್ಕಳಿಗೆ ಹೇಗೆ ಹಕ್ಕಿರುತ್ತದೆ, ಕಾನೂನು ನಿಯಮ ತಿಳಿಯಿರಿ.

ಪೂರ್ವಜರ ಆಸ್ತಿ ಮಾರಾಟವಾದ ಮೇಲೆ ಮಕ್ಕಳಿಗೆ ಆ ಆಸ್ತಿಯ ಮೇಲೆ ಎಷ್ಟು ಹಕ್ಕಿರುತ್ತದೆ ಎನ್ನುವ ಬಗ್ಗೆ ತಿಳಿಯಿರಿ.

Sold Property Right: ನಾಲ್ಕು ತಲೆಮಾರಿನ ಪುರುಷರು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಪೂರ್ವಜರ ಆಸ್ತಿ (Ancestral property)  ಎನ್ನಲಾಗುತ್ತದೆ. ಆಸ್ತಿಯನ್ನು ಮುಖ್ಯವಾಗಿ ಎರಡು ರೀತಿಯಾಗಿ ವಿಂಗಡಿಸಲಾಗುತ್ತದೆ. ಸ್ವ- ಸ್ವಾದೀನ ಆಸ್ತಿ ಮತ್ತು ಪೂರ್ವಜರ ಆಸ್ತಿಯಾಗಿ ವಿಂಗಡಿಸಲಾಗುತ್ತದೆ.

ನೀವೇ ಸಂಪಾದಿಸಿದ ಆಸ್ತಿಯನ್ನು ಸ್ವ- ಸ್ವಾದೀನ ಆಸ್ತಿ ಎನ್ನಲಾಗುತ್ತದೆ. ಇನ್ನು ಹಲವಾರು ತಲೆಮಾರುಗಳಿಂದ ಪಡೆದ ಆಸ್ತಿ ಪೂರ್ವಜರ ಆಸ್ತಿ ಆಗಿರುತ್ತದೆ. ಇದೀಗ ಪೂರ್ವಜರ ಆಸ್ತಿ ಮಾರಾಟವಾದ ಮೇಲೆ ಮಕ್ಕಳಿಗೆ ಆ ಆಸ್ತಿಯ ಮೇಲೆ ಎಷ್ಟು ಹಕ್ಕಿರುತ್ತದೆ ಎನ್ನುವ ಬಗ್ಗೆ ವಿವರಗಳನ್ನು ತಿಳಿಯೋಣ.

sold property updates
Image Credit: Blog.ipleaders

ಮಾರಾಟವಾದ ಹೆತ್ತವರ ಆಸ್ತಿಯ ಮೇಲೆ ಮಕ್ಕಳಿಗೆ ಹೇಗೆ ಹಕ್ಕಿರುತ್ತದೆ
ಒಮ್ಮೆ ಪೂರ್ವಜರ ಆಸ್ತಿಯನ್ನು ವಿಭಜಿಸಿದರೆ ಅದು ಪೂರ್ವಜರ ಆಸ್ತಿಯ ಲಕ್ಷಣವನ್ನು ಹೊಂದುವುದನ್ನು ನಿಲ್ಲಿಸುತ್ತದೆ ಮತ್ತು ಅದನ್ನು ಸ್ವೀಕರಿಸಿದ ಕುಟುಂಬದ ಸದಸ್ಯರ ಕೈಯಲ್ಲಿ ಸ್ವಯಂ ಸ್ವಾಧೀನಪಡಿಸಿಕೊಂಡ ಆಸ್ತಿ ಆಗುತ್ತದೆ. ಇದು ಅಂತಹ ಕುಟುಂಬದ ಸದಸ್ಯರಿಗೆ ವ್ಯವಹರಿಸಲು ಅನಿಯಂತ್ರಿತ ಹಕ್ಕನ್ನು ನೀಡುತ್ತದೆ ಮತ್ತು ಅಂತಹ ಆಸ್ತಿಯನ್ನು ವಿಲೇವಾರಿ ಮಾಡಲಾಗುತ್ತದೆ.

ಮಾರಾಟ ಮಾಡಿದ ಆಸ್ತಿಯ ಮೇಲೆ ಮಕ್ಕಳಿಗೆ ಹಕ್ಕಿಲ್ಲ
ಇನ್ನು ಪೂರ್ವಜರ ಆಸ್ತಿಯನ್ನು ಮಾರಾಟ ಮಾಡಿದ ಬಳಿಕ ಅವರ ಮಕ್ಕಳಿಗೆ ಪೂರ್ವಜರ ಆಸ್ತಿಯಲ್ಲಿ ಎಷ್ಟು ಹಕ್ಕಿದೆ ಎನ್ನುವ ಬಗ್ಗೆ ಗೊಂದಲಗು ಸೃಷ್ಟಿಯಾಗುತ್ತದೆ.

ಮಹಿಳೆಯು ತನ್ನ ಪೂರ್ವಜರ ಆಸ್ತಿಯ ವಿಭಜನೆಯ ಅನುಸಾರವಾಗಿ ಪಡೆದ ತನ್ನ ಹಕ್ಕನ್ನು ವರ್ಗಾಯಿಸಿದ ಮತ್ತು ಮಾರಾಟ ಮಾಡಿದ ಸಂದರ್ಭದಲ್ಲಿ, ಅಂತಹ ವರ್ಗಾವಣೆಯ ನಂತರ ಜನಿಸಿದ ಅವಳ ಮಕ್ಕಳು ತಮ್ಮ ತಾಯಿಯು ಮಾರಾಟ ಮಾಡಿದ ಆಸ್ತಿಯ ಮೇಲೆ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ವಿಭಜನೆಯ ಬಲದಿಂದ ಅವಳ ಸ್ವ-ಸ್ವಾಧೀನ ಆಸ್ತಿಯಾಗುತ್ತದೆ.

Join Nadunudi News WhatsApp Group

sold property updates
Image Credit: Twollow

ಪೂರ್ವಜರ ಆಸ್ತಿಯ ಹಂಚಿಕೆ
ಪೂರ್ವಜರ ಆಸ್ತಿಯ ಹಂಚಿಕೆಯ ಹಕ್ಕನ್ನು ಎಲ್ಲರು ಹುಟ್ಟಿನಿಂದಲೇ ಪಡೆಯುತ್ತಾರೆ. ಆಸ್ತಿಯ ಮಾಲೀಕರ ಮರಣದ ನಂತರ ಉತ್ತರಾಧಿಕಾರಿಗಳು ಪೂರ್ವಜರ ಆಸ್ತಿಯನ್ನು ಹಂಚಿಕೊಳ್ಳುತ್ತಾರೆ.

ಆಸ್ತಿಯ ಮುಖ್ಯ ಮಾಲೀಕರ ಮಕ್ಕಳನ್ನು ಮೊದಲು ಎಣಿಸಲಾಗುತ್ತದೆ ಮತ್ತು ಅದರ ಆಧಾರದ ಮೇಲೆ ಆಸ್ತಿಯನ್ನು ವಿಂಗಡಿಸಲಾಗುತ್ತದೆ. ಪೂರ್ವಜರ ಆಸ್ತಿಯಲ್ಲಿ ವಿಂಗಡಣೆಯಾದರೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಸಮಾನ ಹಂಚಿಕೆ ಆಗಬೇಕು ಎಂದು ಕಾನೂನು ತೀರ್ಪನ್ನು ನೀಡಿದೆ.

Join Nadunudi News WhatsApp Group