SSY Profit: ಇನ್ನುಮುಂದೆ ಮಗಳ ಮದುವೆಯ ಚಿಂತೆ ಬೇಡ, ಕೇಂದ್ರದ ಈ ಯೋಜನೆಯಲ್ಲಿ ಮಗಳಿಗೆ 64 ಲಕ್ಷ ರೂ ಸಿಗಲಿದೆ.

ಈ ಯೋಜನೆ ಮೂಲಕ ನೀವು ಕಡಿಮೆ ಹೂಡಿಕೆಯಲ್ಲಿ ನಿಮ್ಮ ಮಗಳ ಶಿಕ್ಷಣ ಅಥವಾ ಮದುವೆಗಾಗಿ 64 ಲಕ್ಷ ಹಣವನ್ನು ಪಡೆಯಬಹುದು.

Sukanya Samriddhi Yojana: ದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ಕೇಂದ್ರದ ಮೋದಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತಿದೆ. ಹೆಣ್ಣು ಮಕ್ಕಳ ಪೋಷಕರ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ವಿವಿಧ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ.

ಸಾಮಾನ್ಯವಾಗಿ ತಂದೆ ತಾಯಿಗೆ ಹೆಣ್ಣು ಮಕ್ಕಳ ಭವಿಷ್ಯದ ಬಗೆ ಹೆಚ್ಚಿನ ಕಾಳಜಿ ಇರುತ್ತದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಜೀವನವನ್ನು ನೀಡಬೇಕು ಎನ್ನುವುದು ಪೋಷಕರ ಕನಸಾಗಿರುತ್ತದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಣದ ಅಗತ್ಯ ಇರುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಹೆಣ್ಣು ಮಗುವಿಗಾಗಿ ಸರ್ಕಾರ ಉತ್ತಮ ಹೂಡಿಕೆಯ ಯೋಜನೆಯನ್ನು ಪರಿಚಯಿಸಿದೆ.

Sukanya Samriddhi Yojana benefits
Image Credit: Etmoney

ಕೇಂದ್ರ ಸರ್ಕಾರದ SSY 
ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳಲ್ಲಿ Sukanya Samriddhi Yojana ಕೂಡ ಒಂದಾಗಿದೆ. ಈ ಯೋಜನೆಯಡಿ ಈಗಾಗಲೇ ಲಕ್ಷಾಂತರ ಪೋಷಕರು ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆಯನ್ನು ಆರಂಭಿಸಿದ್ದಾರೆ. ನಿಮ್ಮ ಮನೆಯ ಹೆಣ್ಣು ಮಗಳ ವಿದ್ಯಾಭ್ಯಾಸ, ಮದುವೆಗೆ ಸಹಾಯವಾಗಲು ಈ SSY ಯೋಜನೆ ಸಹಾಯವಾಗಲಿದೆ. SSY ಯೋಜನೆಯು ಹೂಡಿಕೆ ದಾರರಿಗೆ ನೀಡುವ ಬಡ್ಡಿದರ, ಹೂಡಿಕೆಯ ವಿಧಾನ, ಹೂಡಿಕೆಯಿಂದ ಗಳಿಸಬಹುದಾದ ಲಾಭದ ಮೊತ್ತ ಇವೆಲ್ಲದರ ಬಗ್ಗೆ ಮಾಹಿತಿ ತಿಳಿಯೋಣ.

ಕೇಂದ್ರದ ಈ ಯೋಜನೆಯಲ್ಲಿ ನಿಮ್ಮ ಮಗಳಿಗೆ 64 ಲಕ್ಷ ರೂ ಸಿಗಲಿದೆ
ಈ Sukanya Samriddhi Yojana ಕೇಂದ್ರ ಮೋದಿ ಸರ್ಕಾರವು ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮದುವೆಗೆ ಅನುಕೂಲ ಮಾಡಿಕೊಡುತ್ತದೆ. ಈ ಯೋಜನೆ ಮೂಲಕ ನೀವು ಕಡಿಮೆ ಹೂಡಿಕೆಯಲ್ಲಿ ನಿಮ್ಮ ಮಗಳ ಶಿಕ್ಷಣ ಅಥವಾ ಮದುವೆಗಾಗಿ 64 ಲಕ್ಷ ಹಣವನ್ನು ಪಡೆಯಬಹುದು. ಈ ಯೋಜನೆಯು ಹೆಚ್ಚಿನ ಸುರಕ್ಷತೆಯನ್ನು ಹೊಂದಿದ್ದು ಬಡ ಕುಟುಂಬಗಳಿಗೆ ಇದು ಉತ್ತಮ ಹೂಡಿಕೆಯ ಯೋಜನೆಯಾಗಿದೆ.

Sukanya Samriddhi Yojana investment
Image Credit: Dnpindiahindi

ಇನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರವು 8 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿರಬೇಕು. 10 ವರ್ಷದ ದಾಟಿದ ಮಗುವಿನ ಹೆಸರಿನಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ. ಹೆಣ್ಣು ಮಗು ಜನಸಿದ ತಕ್ಷಣವೇ ನೀವು ಈ ಯೋಜನೆಯ ಖಾತೆಯನ್ನು ತೆರೆಯಬಹದು.

Join Nadunudi News WhatsApp Group

ಹೂಡಿಕೆಯಿಂದ ಗಳಿಸುವ ಲಾಭದ ಮೊತ್ತ
ಮೋದಿ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದೆ, ಇದರಲ್ಲಿ ಕನಿಷ್ಠ 250 ರೂ.ಗಳಿಂದ ಗರಿಷ್ಠ 1.50 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಮೋದಿ ಸರ್ಕಾರ ನಡೆಸುತ್ತಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 12,500 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

Sukanya Samriddhi Yojana benefits
Image Credit: Zeebiz

ಇದರಲ್ಲಿ ಈ ಮೊತ್ತವು ಒಂದು ವರ್ಷದಲ್ಲಿ 1.5 ಲಕ್ಷ ಆಗುತ್ತದೆ. ಇದರಲ್ಲಿ ಪ್ರಮುಖವಾದ ವಿಷಯವೆಂದರೆ ನೀವು ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಮುಕ್ತಾಯದ ಮೇಲೆ 8% ಬಡ್ಡಿಯ ಲಾಭವನ್ನು ಪಡೆಯುತ್ತೇವೆ. ಮಗಳ ವಯಸ್ಸು 21 ವರ್ಷವಾದಾಗ, ಮೆಚ್ಯೂರಿಟಿ ಆದ ಮೇಲೆ ಒಟ್ಟು 63,79,634 ರೂ. ಲಾಭವನ್ನು ಪಡೆಯಬಹುದು.

Join Nadunudi News WhatsApp Group