V-Storm 800DE: 776 cc ಇಂಜಿನ್ ಬೈಕ್ ಲಾಂಚ್ ಮಾಡಿದ ಸುಜುಕಿ, ಕಾರಿಗಿಂತ ಹೆಚ್ಚು ಫೀಚರ್ ಮತ್ತು ಬೆಲೆ ಕೊಂಚ ಅಧಿಕ.

ಕಾರಿಗಿಂತ ಹೆಚ್ಚು ಫೀಚರ್ ಇರುವ Suzuki V-Storm 800DE Bike ಲಾಂಚ್

Suzuki V-Storm 800DE Bike: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಅನೇಕ ಮಾದರಿಯ ಬೈಕ್ ಗಳು ಲಾಂಚ್ ಆಗುತ್ತಿದೆ. ಇನ್ನು ಯುವಕರು ಹೆಚ್ಚಾಗಿ ಲೇಟೆಸ್ಟ್ ಲುಕ್ ನ ಬೈಕ್ ಗಳನ್ನೂ ಖರೀದಿಸಲು ಬಯಸುತ್ತಾರೆ.

ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕಂಪನಿಗಳು ವಿಭಿನ್ನ ವಿನ್ಯಾಸ ಹೊಂದಿರುವ ಬೈಕ್ ಗಳನ್ನೂ ಲಾಂಚ್ ಮಾಡಿವೆ. ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಬೈಕ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಮೂಲಕ ಎಲ್ಲ ಮಾಡೆಲ್ ಬೈಕ್ ಗಳಿಗೆ ಠಕ್ಕರ್ ನೀಡಲಿದೆ. ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಬೈಕ್ ನ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Suzuki V-Strom 800DE Bike Price
Image Credit: Bike Wale

ಕಾರಿಗಿಂತ ಹೆಚ್ಚು ಫೀಚರ್ ಇರುವ Suzuki V-Storm 800DE Bike ಲಾಂಚ್
ಸದ್ಯ Suzuki ಕಂಪನಿ ತನ್ನ ಲೇಟೆಸ್ಟ್ ಮಾಡೆಲ್ ಬೈಕ್ ಅನ್ನು ಲಂಚ್ ಮಾಡಿದೆ. ಸುಜುಕಿ V-Storm 800DE ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಈ ಬೈಕ್ ಅನ್ನು ಆರಂಭಿಕ ಎಕ್ಸ್ ಶೋ ರೂಂ ಬೆಲೆ 10.30 ಲಕ್ಷ ರೂ. ನಲ್ಲಿ ಬಿಡುಗಡೆಗೆ ನಿಗದಿಪಡಿಸಿದೆ. ಈ ಬೈಕ್ ಅನ್ನು ಮೂರು ಬಣ್ಣದ ಆಯ್ಕೆಗಳೊಂದಿಗೆ ಪರಿಚಯಿಸಲಾಗಿದೆ. ಇದು ಚಾಂಪಿಯನ್ ಹಳದಿ, ಗ್ಲಾಸ್ ಮ್ಯಾಟ್ ಮೆಕ್ಯಾನಿಕಲ್ ಗ್ರೇ ಮತ್ತು ಗ್ಲಾಸ್ ಸ್ಪಾರ್ಕಲ್ ಕಪ್ಪು ಬಣ್ಣಗಳನ್ನು ಒಳಗೊಂಡಿದೆ.

ಆಫ್-ರೋಡ್ ಸಾಮರ್ಥ್ಯವನ್ನು ಹೆಚ್ಚಿಸಲು, ಕಂಪನಿಯ ಈ ಬೈಕ್‌ ನಲ್ಲಿ 21-ಇಂಚಿನ ಮುಂಭಾಗ ಮತ್ತು 17-ಇಂಚಿನ ಹಿಂಭಾಗದ ಸ್ಪೋಕ್ ಚಕ್ರಗಳನ್ನು ಅಳವಡಿಸಲಾಗಿದೆ. ಇದು ರೈಡ್ ಮೋಡ್‌ ಗಳು, ‘ಗ್ರಾವೆಲ್’ ಮೋಡ್‌ನೊಂದಿಗೆ ಎಳೆತ ನಿಯಂತ್ರಣ, ರೈಡ್-ಬೈ-ವೈರ್, ಬೈ-ಡೈರೆಕ್ಷನಲ್ ಕ್ವಿಕ್‌ ಶಿಫ್ಟರ್, ಹೊಂದಾಣಿಕೆ ಮಾಡಬಹುದಾದ ವಿಂಡ್‌ ಸ್ಕ್ರೀನ್ ಮತ್ತು ಕಡಿಮೆ RPM ಅಸಿಸ್ಟ್‌ ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Suzuki V-Strom 800DE Bike
Image Credit: News 18

776 cc ಇಂಜಿನ್ ಬೈಕ್ ಲಾಂಚ್ ಮಾಡಿದ ಸುಜುಕಿ
ಕಂಪನಿಯ ಈ ಹೊಸ ಬೈಕ್‌ ನಲ್ಲಿ, 776 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 83bhp ಪವರ್ ಮತ್ತು 78Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಇದು ಉತ್ತಮವಾಗಿ ಕಾರ್ಯನಿರ್ವಹಿಸಲು ಬಹಳಷ್ಟು ಸಹಾಯ ಮಾಡುತ್ತದೆ. ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ BMW F850 GS ಮತ್ತು ಟ್ರಯಂಫ್ ಟೈಗರ್ 900 ನೊಂದಿಗೆ ಸ್ಪರ್ಧಿಸಲಿದೆ.

Join Nadunudi News WhatsApp Group

ಸುಜುಕಿ ವಿ ಸ್ಟ್ರೋಮ್ 800ಡಿಇ ಮಧ್ಯಮ ತೂಕದ ಬೈಕ್ ಆಗಿದೆ. ಇದರಲ್ಲಿ ನೀವು GSX-8R ಮತ್ತು ರಸ್ತೆ-ಕೇಂದ್ರಿತ GSX-8S ನಂತೆಯೇ ಅದೇ ಎಂಜಿನ್ ಅನ್ನು ಪಡೆಯುತ್ತೀರಿ. ಈ ಬೈಕ್‌ ನ ಎರಡೂ ಬದಿಯಲ್ಲಿ ಶೋವಾ ಸಸ್ಪೆನ್ಷನ್ ಅಳವಡಿಸಲಾಗಿದೆ. ಇದು 220 ಎಂಎಂ ಪ್ರಯಾಣ ಮತ್ತು 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ ನೊಂದಿಗೆ ಬರುತ್ತದೆ. ಉತ್ತಮ ಬ್ರೇಕಿಂಗ್‌ ಗಾಗಿ, ಈ ಬೈಕು ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ಯುಯಲ್-ಚಾನೆಲ್ ABS ಜೊತೆಗೆ ಡಿಸ್ಕ್ ಬ್ರೇಕ್‌ ಗಳನ್ನು ಹೊಂದಿದೆ.

Suzuki V-Strom 800DE Bike Feature
Image Credit: Carandbike

Join Nadunudi News WhatsApp Group