New Swaraj Tractor: ರೈತರಿಗಾಗಿ ಕೈಗೆಟುಕುವ ಬೆಲೆಗೆ ಟ್ರ್ಯಾಕ್ಟರ್ ಲಾಂಚ್, ಆಕರ್ಷಕ ಫೀಚರ್ ಮತ್ತು ಉತ್ತಮ ಮೈಲೇಜ್.

ರೈತರಿಗಾಗಿ ಕೈಗೆಟುಕುವ ಬೆಲೆಗೆ ಟ್ರ್ಯಾಕ್ಟರ್ ಲಾಂಚ್ ಮಾಡಿದ Swaraj Tractor

Swaraj Tractor  Launch In India: ದೇಶದಲ್ಲಿ ಬಹುತೇಕ ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಸ್ವಂತವಾಗಿ ಕೃಷಿಯನ್ನು ಮಾಡುತ್ತಾ ರೈತರು ತಮ್ಮ ಆದಾಯವನ್ನು ಗಳಿಸುತ್ತಿದ್ದಾರೆ. ಮೊದಲೆಲ್ಲ ಕೃಷಿ ಮಾಡುವುದು ಬಹಳ ಕಷ್ಟವಾಗಿತ್ತು. ಕೃಷಿಗಾಗಿ ಎಲ್ಲ ಅಗತ್ಯ ಕೆಲಸಗಳನ್ನು ರೈತರೇ ಮಾಡಬೇಕಿತ್ತು. ಆದರೆ ಈಗ ಹಾಗಲ್ಲ. ರೈತರ ಕೃಷಿ ಕೆಲಸಕ್ಕೆ ಸಹಾಯವಾಗಲು ಸಾಕಷ್ಟು ಯಂತ್ರೋಪರಕಣಗಳು ಸಹಕಾರಿಯಾಗಿದೆ. ಅದರಲ್ಲೂ ಹೆಚ್ಚಾಗಿ Tractor ಗಳು ಕೃಷಿ ಚಟುವಟಿಕೆಗಳಿಗೆ ಹೆಚ್ಚು ಉಪಯುಕ್ತವಾಗಿದೆ.

Swaraj Tractor  Launch In India
Image Credit: Economic Times

ರೈತರ ಕೃಷಿ ಚಟುವಟಿಕೆಗೆ ಸಹಾಯವಾಗಲಿದೆ ಈ ಹೊಸ ಟ್ರಾಕ್ಟರ್
ಟ್ರಾಕ್ಟರ್‌ ಗಳು ಬಿತ್ತನೆ ಮತ್ತು ಕೊಯ್ಲು ಮುಂತಾದ ವಿವಿಧ ಕೃಷಿ ಕಾರ್ಯಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಟ್ರಾಕ್ಟರ್ ಹೊಂದಿರುವ ರೈತರಿಗೆ ಕೃಷಿಯ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಕೂಲಿ ಮಾಡುವವವರ ವೆಚ್ಚವನ್ನು ಉಳಿಸುತ್ತದೆ. ಟ್ರಾಕ್ಟರ್ ಬಳಸುವ ರೈತರ ಕೃಷಿಯ ಚಟುವಟಿಕೆಯು ಬಹಳ ಸರವಾಗಿರುತ್ತದೆ. ಪ್ರಸ್ತುತ ಟ್ರಾಕ್ಟಾರ್ ಗಳು ರೈತರ ಸ್ನೇಹಿಯಾಗಿದೆ ಎನ್ನಬಹುದು. ಸದ್ಯ ಮಾರುಕಟ್ಟೆಯಲ್ಲಿ ರೈತರು ಖರೀದಿಸಲು ಆಗುವಂತಹ ಬೆಲೆಯಲ್ಲಿ ಟ್ರಾಕ್ಟರ್ ಪರಿಚಯವಾಗಿದೆ. ಈ ನೂತನ ಟ್ರಾಕ್ಟರ್ ನ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

ರೈತರಿಗಾಗಿ ಕೈಗೆಟುಕುವ ಬೆಲೆಗೆ ಟ್ರ್ಯಾಕ್ಟರ್ ಲಾಂಚ್
ಮಹೀಂದ್ರಾ & ಮಹೀಂದ್ರಾ 40 ರಿಂದ 50 ಅಶ್ವಶಕ್ತಿಯ ವಿಭಾಗದಲ್ಲಿ Swaraj Tractor ಗಳ ಹೊಸ ಸರಣಿಯನ್ನು ಪರಿಚಯಿಸಿದೆ. ಈ ಟ್ರ್ಯಾಕ್ಟರ್‌ ಗಳ ಬೆಲೆ 6.99 ಲಕ್ಷದಿಂದ 9 ಲಕ್ಷ ರೂಪಾಯಿಗಳಾಗಿದ್ದು, LED ಲ್ಯಾಂಪ್‌ ಗಳು ಮತ್ತು ಹೊಸ ಗ್ರಿಲ್‌ ನಂತಹ ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಹೊಸ ಸರಣಿಯು ಶಕ್ತಿಯುತ ಎಂಜಿನ್, ಹೆಚ್ಚಿದ ಟಾರ್ಕ್ ರೇಟಿಂಗ್, ಅತ್ಯುತ್ತಮ ಇಂಧನ ಸಾಮರ್ಥ್ಯ ಮತ್ತು ಹೆವಿ-ಡ್ಯೂಟಿ ಆಕ್ಸಲ್ ಡ್ರೈವಿಂಗ್ ಸೈಡ್-ಶೇವ್ ಫೋರ್-ವೀಲ್ ಡ್ರೈವ್ ಅನ್ನು ಹೊಂದಿದೆ.

Swaraj Tractor Price In India
Imager Credit: Ridelikesk

ಆಕರ್ಷಕ ಫೀಚರ್ ಮತ್ತು ಉತ್ತಮ ಮೈಲೇಜ್
ಭಾರತದಲ್ಲಿ ಟ್ರ್ಯಾಕ್ಟರ್ ಉದ್ಯಮವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಬಹುದು. ಮಹೀಂದ್ರಾ & ಮಹೀಂದ್ರಾ ಕಂಪನಿಯು ಟ್ರಾಕ್ಟರ್ ವಿಭಾಗದಲ್ಲಿ ಹೆಚ್ಚಿನ ಯಶಸ್ಸನ್ನು ಕಂಡಿದೆ. MS ಧೋನಿ, ಮಾಜಿ ಭಾರತೀಯ ಕ್ರಿಕೆಟ್ ನಾಯಕ, ಹೊಸ ಸ್ವರಾಜ್ ಟ್ರಾಕ್ಟರ್ ಸರಣಿಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಉತ್ಪನ್ನದ ಆಕರ್ಷಣೆ ಮತ್ತು ಮಾರುಕಟ್ಟೆ ಉಪಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಮಾರುಕಟ್ಟೆಯಲ್ಲಿ ಈ ನೂತನ ಟ್ರಾಕ್ಟರ್ ರೈತರಿಗೆ ಲಭ್ಯವಾಗಲಿದೆ. ರೈತರ ಕೃಷಿಗೆ ಸ್ವರಾಜ್ ಟ್ರಾಕ್ಟರ್ ಸಹಾಯವಾಗಲಿದೆ

Join Nadunudi News WhatsApp Group

Join Nadunudi News WhatsApp Group