Mid Week Elimination: ಈ ಒಂದು ಕಾರಣದಿಂದ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ತನಿಷಾ, ಕಣ್ಣೀರು ಹಾಕಿದ ತನಿಷಾ

ಈ ಒಂದು ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ತನಿಷಾ

Tanisha Kundapura Eliminated From Bigg Boss Season 10 Kannada: ಬಿಗ್ ಬಾಸ್ ಸೀಸನ್ 10 ಕಾರ್ಯಕ್ರಮ ಕೊನೆಯ ಹಂತ ತಲುಪಿದ್ದು, ಇನ್ನು ಫೈನಲ್ ರಿಸಲ್ಟ್ ಬರುವುದೊಂದೇ ಬಾಕಿ ಇದೆ. ಹಾಗೆಯೆ ಸ್ಯಾಂಡಲ್‌ವುಡ್‌ ನಟಿ, ಬಿಗ್‌ ಬಾಸ್‌ ಮನೆಯ ಬೆಂಕಿ ಎಂದೇ ಖ್ಯಾತರಾಗಿದ್ದ ತನಿಷಾ ಕುಪ್ಪಂಡ ಇವರು ಇದೀಗ ಮಿಡ್‌ ವೀಕ್‌ ಎಲಿಮಿನೇಷನ್‌(Elimination) ಮೂಲಕ ಆಚೆ ಬಂದಿದ್ದಾರೆ ಎಂದು ಹೇಳಲಾಗಿದೆ.

ಫಿನಾಲೆ ತಲುಪುವ ಎಲ್ಲಾ ಅರ್ಹತೆಗಳಿದ್ದರೂ ತನಿಷಾ ಮನೆಯಿಂದ ಹೊರಬಂದಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅನರ್ಹರ ಗುಂಪಿನಲ್ಲಿದ್ದರೂ ಅರ್ಹರಗಿಂತ ಮಿಗಿಲಾಗಿ ಆಟ ಆಡಿ, ಬಿಗ್‌ ಬಾಸ್‌ ವೀಕ್ಷಕರಿಂದ ಸೈ ಎನಿಸಿಕೊಂಡ ಸ್ಪರ್ಧಿ ಇವರಾಗಿದ್ದಾರೆ.

Tanisha Kuppanda Eliminated
Image Credit: News 18

ಬಿಗ್ ಬಾಸ್ ಮನೆಯಿಂದ ಹೊರಬಂದ ತನಿಷಾ

ಬಿಗ್ ಬಾಸ್ ಮನೆಯಲ್ಲಿ ಉಳಿಯಬೇಕೆಂದರೆ ವೀಕ್ಷಕರ ವೋಟ್ ಮುಖ್ಯ ಆಗಿದೆ. ಕಡಿಮೆ ವೋಟ್‌ ಬೀಲುವ ಸ್ಪರ್ಧಿಗಳು ಎಲಿಮಿನೇಟ್‌ ಆಗುತ್ತಾರೆ. ಕಳೆದ ವಾರದ ಎಲಿಮಿನೇಷನ್‌ ಹೋಲ್ಡ್‌ ನಲ್ಲಿ ಇಡಲಾಗಿದೆ ಎಂದು ಸುದೀಪ್‌ ಹೇಳಿದ್ದರು. ಇದೀಗ ತನಿಷಾ ಬಿಗ್‌ ಬಾಸ್‌ ಮನೆಯಿಂದ ಆಚೆ ಹೋಗಿದ್ದು, ಕಳೆದ ವಾರವೇ ತನಿಷಾ ಹೋಗಬೇಕಿತ್ತು ಎಂದು ಹೇಳಲಾಗ್ತಿದೆ. ಫಿನಾಲೆ ತಲುಪುವ ಎಲ್ಲಾ ಅರ್ಹತೆಗಳಿದ್ದರೂ ತನಿಷಾ ಮನೆಯಿಂದ ಹೊರಬಂದಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

Tanisha Kundapura Eliminated From Bigg Boss Season 10 Kannada
Image Credit: TV9kannada

ಆಟದಲ್ಲಿ ಎಡವಿದ್ರಾ ತನಿಷಾ?

Join Nadunudi News WhatsApp Group

ಬಿಗ್‌ ಬಾಸ್‌ ಮನೆಯ ಹಿಂದಿನ ವಾರಗಳಿಗೆ ಹೋಲಿಸಿದರೆ ತನಿಷಾ ವರ್ತನೆ ಕಂಪ್ಲೀಟ್‌ ಬದಲಾಗಿತ್ತು. ತನಿಷಾ ಕುಪ್ಪಂಡ ಹಾಗೂ ಕಾರ್ತಿಕ್‌ ನಡುವಿನ ಸ್ನೇಹ ಕಳೆದ ವಾರ ಸಂಪೂರ್ಣ ಹಾಳಾಗಿತ್ತು. ಕಾರ್ತಿಕ್‌ ತಮ್ಮನ್ನು ನಾಮಿನೇಟ್‌ ಮಾಡಿದರೆಂಬ ಕಾರಣಕ್ಕೆ ತನಿಷಾ ವಾರ ಪೂರ್ತಿ ಹಗೆ ಸಾಧಿಸುತ್ತಾ ಬಂದರು. ಅಲ್ಲದೇ, ವರ್ತೂರ ಅವರಿಗೆ ತುಂಬಾ ಹತ್ತಿರವಾಗಲು ಪ್ರಯತ್ನಿಸಿದರು.

ಕಾರ್ತಿಕ್‌ ವಿರುದ್ಧವೇ ಎಲ್ಲರ ಬಳಿ ತನಿಷಾ ಮಾತನಾಡಿದ್ದು, ಬಿಗ್‌ ಬಾಸ್‌ ವೀಕ್ಷಕರಿಗೆ ಸರಿ ಎನಿಸಲಿಲ್ಲ ಎಂದು ಹೇಳಲಾಗ್ತಿದೆ. ಕಾರ್ತಿಕ್‌ ಮೇಲೆ ತನಿಷಾ ಮುನಿಸೇ ಅವರಿಗೆ ಮುಳುವಾದಂತಿದೆ ಎಂದು ಬಿಗ್‌ ಬಾಸ್‌ ವೀಕ್ಷಕರು ಹೇಳುತ್ತಿದ್ದಾರೆ. ಕಳೆದ ವಾರಗಳಂತೆ ತನಿಷಾ ತಮ್ಮ ಆಟವನ್ನೇ ತಾವು ಆಡಿದ್ದರೇ ಬಹುಶಃ ಫಿನಾಲೆ ವೀಕ್‌ ತಲುಪುತ್ತಿದ್ದರು ಎನ್ನಲಾಗ್ತಿದೆ.

Join Nadunudi News WhatsApp Group