Traffic Rule: ಕಾರ್ ಮತ್ತು ಬೈಕ್ ಇದ್ದವರಿಗೆ ಹೊಸ ನಿಯಮ, ಇನ್ಮುಂದೆ ಈ ತಪ್ಪು ಮಾಡಿದರೆ 25000 ರೂ ದಂಡ

ಕಾರ್ ಬೈಕ್ ಇದ್ದವರು ಇನ್ಮುಂದೆ ಈ ತಪ್ಪು ಮಾಡಿದರೆ ಬರೋಬ್ಬರಿ 25000 ರೂ ದಂಡ

Traffic Rule For Minors: ಸದ್ಯ ದೇಶದಲ್ಲಿ ಈಗಾಗಲೇ ಸಾಕಷ್ಟು ಸಂಚಾರ ನಿಯಮಗಳು ಜಾರಿಯಾಗಿದೆ. ವಾಹನ ಸವಾರರ ಸುರಕ್ಷೆತೆಗಾಗಿ ಹಾಗೂ ರಸ್ತೆಗಳಲ್ಲಿ ಉಂಟಾಗುವ ಅಪಾಯವನ್ನು ತಡೆಯುವ ಉದ್ದೇಶದಿಂದ ಸರ್ಕಾರ ಸಂಚಾರ ನಿಯಮವನ್ನು ಕಠಿಣಗೊಳಿಸುತ್ತದೆ.

ರಸ್ತೆಗಳಲ್ಲಿ ವಾಹನ ಚಲಾಯಿಸುವ ಪ್ರತಿಯೊಬ್ಬರೂ ಕೂಡ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಸದ್ಯ ಅಪ್ರಾಪ್ತ ಮಕ್ಕಳಿಗಾಗಿ ಹೊಸ Traffic Rule ಜಾರಿಯಾಗಿದೆ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

Traffic Rule For Minors
Image Credit: Vistaranews

ಪೋಷಕರೇ ನಿಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನವನ್ನು ನೀಡುವ ಮುನ್ನ ಎಚ್ಚರ
ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟವರಿಗೆ ವಾಹನ ಪವಾರವಾನಗಿಯನ್ನು ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರು ವಾಹನವನ್ನು ಚಲಾಯಿಸಲು ಅರ್ಹರಾಗಿರುತ್ತಾರೆ. ಇನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನವನ್ನು ಚಲಾಯಿಸುವುದು ಕಾನೂನು ಬಾಹಿರವಾಗಿದೆ. ಈ ಕಾನೂನಿನ ನಿಯಮವನ್ನು ಉಲ್ಲಂಘಿಸಿ ಕೆಲ ಪೋಷಕರು ತಮ್ಮ ಮಕ್ಕಳಿಗೆ ವಾಹನವನ್ನು ಚಲಾಯಿಸಲು ಕೊಡುತ್ತಾರೆ. ಇದನ್ನು ಗಮನಿಸಿದ ಸಂಚಾರ ಇಲಾಖೆ ಇದೀಗ ಹೊಸ ನಿಯಮವನ್ನು ಜಾರಿಗೊಳಿಸಿದೆ. ಪೋಷಕರು ಈ ಹೊಸ ಸಂಚಾರ ನಿಯಮವನ್ನು ತಿಳಿಯುವುದು ಅಗಾತ್ಯವಾಗಿದೆ.

ಅಪ್ರಾಪ್ತರು ಮಕ್ಕಳಿಗೆ ವಾಹನ ನೀಡಿದರೆ ಕಟ್ಟಬೇಕು ಬಾರಿ ದಂಡ
ವಾಹನ ಚಲಾಯಿಸಲು ನಿಗದಿತ ವಯೋಮಿತಿಯನ್ನು ಇರಿಸಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸುವುದು ಅಪರಾಧವಾಗಿದೆ. ಇನ್ನು ದ್ವಿಚಕ್ರವಾಹನದಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ ಹೆಚ್ಚಿನ Fine ವಿಧಿಸಲಾಗುತ್ತದೆ.

Traffic Rules And Fine In Karnataka
Image Credit: Original Source

ಕಾನೂನಿನ ನಿಯಮವನ್ನು ವಿರೋಧಿಸಿ ನೀವು ನಿಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನವನ್ನು ನೀಡಿದರೆ 25 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಇನ್ನುಮುಂದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನವನ್ನು ನೀಡುವ ಮುನ್ನ ಪೋಷಕರು ಎಚ್ಚರ ವಹಿಸುವುದು ಸೂಕ್ತ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನವನ್ನು ತೆಗೆದುಕೊಂಡಿ ರಸ್ತೆಗಿಳಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದಂತೂ ನಿಜ.

Join Nadunudi News WhatsApp Group

Join Nadunudi News WhatsApp Group