Train Location: ಇಂಟರ್ನೆಟ್ ಇಲ್ಲದೆ ರೈಲಿನ ಲೊಕೇಶನ್ ತಿಳಿಯುವುದು ಹೇಗೆ…? ರೈಲು ಪ್ರಯಾಣಿಕರಿಗೆ ಉತ್ತಮ ಮಾಹಿತಿ

ಇಂಟರ್ನೆಟ್ ಇಲ್ಲದೆ ಟ್ರೈನ್ ಲೈವ್ ಲೊಕೇಶನ್ ತಿಳಿಯಲು ಇಲ್ಲಿದೆ ಮಾರ್ಗ.

Check Train Live Location Without Internet: ಸಾಮಾನ್ಯವಾಗಿ ಹೆಚ್ಚಿನ ಜನರು ದೂರದ ಪ್ರಯಾಣಕ್ಕಾಗಿ ರೈಲಿನಲ್ಲಿ ಪ್ರಯಾಣವನ್ನು ಮಾಡುತ್ತಾರೆ. ದೂರದ ಪ್ರಯಾಣಕ್ಕೆ ರೈಲುಪ್ರಯಾಣ ಉತ್ತಮ ಎನ್ನಬಹುದು. ಇನ್ನು Indian railway ಪ್ರಯಾಣಿಕರಿಗಾಗಿ ಸಾಕಷ್ಟು ಸೌಲಭ್ಯವನ್ನು ನೀಡುತ್ತದೆ. ಇನ್ನು ರೈಲು ಪ್ರಯಾಣ ಮಾಡುವಾಗ ಎಲ್ಲ ಪ್ರಯಾಣಿಕರು ಎದುರಾಗುವ ಸಮಸ್ಯೆ ಎಂದರೆ ಅದು Network ಸಮಸ್ಯೆ ಎನ್ನಬಹುದು. ಹೌದು, ರೈಲುಗಳು ಚಲಿಸುತ್ತಿರುವಾಗ ಸಾಕಷ್ಟು ಕಡೆಗಳಲ್ಲಿ Network ಸಿಗುವುದಿಲ್ಲ.

Train Live Location
Image Credit: Deccan Herald

ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ Network ಅಥವಾ Internet ಇಲ್ಲದಿದ್ದರೆ ಚಿಂತಿಸಬೇಡಿ
ಪ್ರಯಾಣಿಕರಿಗೆ ತಾವು ಯಾವ ಸ್ಥಳವನ್ನು ತಲುಪಿದ್ದೇವೆ ಎಂದು ತಿಳಿಯಲು Network ಹಾಗೂ Internet ಅವಶ್ಯಕತೆ ಇರುತ್ತದೆ. ಇನ್ನು ಕೆಲ ಗ್ರಾಮೀಣ ಪ್ರದೇಶದಲ್ಲಿ ರೈಲು ಸಂಚರಿಸುತ್ತಿರುವಾಗ Internet ಇದ್ದರು ಕೂಡ Network ಸಿಗದ ಕಾರಣ ಸಾಕಷ್ಟು ತೊಂದರೆಯಾಗುತ್ತದೆ. ಸದ್ಯ ಪ್ರಯಾಣಿಕರ ಈ ಸಮಸ್ಯೆಗೊಂದು ಪರಿಹಾರ ಲಭಿಸಿದೆ ಎನ್ನಬಹುದು. ಹೌದು, ಇನ್ನುಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ Network ಅಥವಾ Internet ಇಲ್ಲದೆ ಇದ್ದರು Train Live Location ಅನ್ನು ತಿಳಿದುಕೊಳ್ಳಬಹುದು. ಅದು ಹೇಗೆ ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

Internet ಇಲ್ಲದೆ Train Live Location ತಿಳಿಯಲು ಇಲ್ಲಿದೆ ಮಾರ್ಗ
Internet ಇಲ್ಲದೆ Train Live Location ತಿಳಿಯಲು ನೀವು ಮೊದಲು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ Where Is My Train Application ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಇದಕ್ಕಾಗಿ ನೀವು ಅಪ್ಲಿಕೇಶನ್‌ ನಲ್ಲಿ ಸಣ್ಣ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಈ ಅಪ್ಲಿಕೇಶನ್ ಸ್ಥಳವನ್ನು ಹುಡುಕಲು 2 ಮಾರ್ಗಗಳನ್ನು ಹೊಂದಿದೆ. ಇಂಟರ್ನೆಟ್ ಸೆಲ್ ಟವರ್‌ ಗಳು, GPS. ಈ ಎರಡು ಆಯ್ಕೆಗಳನ್ನು ರೈಲಿನಲ್ಲಿ ಪ್ರಯಾಣಿಸುವಾಗ ಮಾತ್ರ ಬಳಸಬಹುದು. ಇವುಗಳಲ್ಲಿ ಸೆಲ್ ಟವರ್ ಆಯ್ಕೆಯು Internet ಇಲ್ಲದೆ ರೈಲಿನ Live location ನಿಮಗೆ ತಿಳಿಸುತ್ತದೆ.

Train Live Location Without Internet
Image Credit: India

ಸೆಲ್ ಟವರ್ ಮೋಡ್‌ ನಲ್ಲಿ ಈ ಅಪ್ಲಿಕೇಶನ್, ಆ ಸಮಯದಲ್ಲಿ ರೈಲು ಹಾದುಹೋಗುವ ಪ್ರದೇಶದ Mobile tower signal ಅನ್ನು ಹಿಡಿಯುತ್ತದೆ. ಹತ್ತಿರದ ಟವರ್ ಎಲ್ಲಿದ್ದರೂ, ಈ ಅಪ್ಲಿಕೇಶನ್‌ ನಲ್ಲಿ ನೀವು ಅದರ ಸ್ಥಳವನ್ನು ತಿಳಿದುಕೊಳ್ಳಬಹುದು. ಆದರೆ ಫೋನ್ ನಲ್ಲಿ ನೆಟ್ವರ್ಕ್ ಇರುವುದು ಅಗತ್ಯವಾಗಿದೆ. ಇಂಟರ್ನೆಟ್ ಮೋಡ್‌ ನಲ್ಲಿ ರೈಲಿನ ಲೈವ್ ಲೊಕೇಶನ್ NTES ಸರ್ವರ್‌ ನಿಂದ ತಿಳಿಯುತ್ತದೆ. ಇದನ್ನು ರೈಲ್ವೇಯಿಂದ ನಿರಂತರವಾಗಿ ನವೀಕರಿಸಲಾಗುತ್ತದೆ. ಖಾಸಗಿ ಕಂಪನಿಗಳ ಅಪ್ಲಿಕೇಶನ್‌ ಗಳು ತಮ್ಮ ಡೇಟಾವನ್ನು ಇಲ್ಲಿಂದ ಸಂಗ್ರಹಿಸುತ್ತವೆ.

Join Nadunudi News WhatsApp Group

Join Nadunudi News WhatsApp Group