Loan Reduce: ಹೋಮ್ ಲೋನ್ ಪಡೆಯುವಾಗ ಈ ಟ್ರಿಕ್ ಬಳಸಿದರೆ 32 ಲಕ್ಷ ಉಳಿಸಬಹುದು, ಸುಲಭ ವಿಧಾನ

ಹೋಮ್ ಲೋನ್ ಪಡೆಯುವಾಗ ಈ ರೀತಿಯ ಟ್ರಿಕ್ ಬಳಸಿದರೆ ಲಕ್ಷ ಲಕ್ಷ ಬಡ್ಡಿಯನ್ನು ಉಳಿಸಬಹುದು

Home Loan  Reduce Trick: ಸ್ವಂತ ಮನೆ ನಿರ್ಮಾಣದ ಕನಸು ಯಾರಿಗೆ ತಾನೇ ಇರುವುದಿಲ್ಲ. ಸಾಮಾನ್ಯವಾಗಿ ಮನೆ ನಿರ್ಮಾಣದ ಕನಸಿಗೆ ಎದುರಾಗುವ ಸಮಸ್ಯೆ ಎಂದರೆ ಹಣಕಿಸಿನ ಸಮಸ್ಯೆಯಾಗಿದೆ. ಈ ಸಮಸ್ಯೆ ಎದುರಾದಾಗ ಜನರಿಗೆ ಮೊದಲ ಆಯ್ಕೆಯಾಗಿ ಬರುವುದೇ ಗೃಹ ಸಾಲ. ಇನ್ನು ಗೃಹ ಸಾಲವನ್ನು ಪಡೆದುಕೊಂಡು ಮನೆ ನಿರ್ಮಾಣದ ಕನಸನ್ನು ನನಸು ಮಾಡಿಕೊಳ್ಳಬಹುದು.

ಆದರೆ ಮನೆ ನಿರ್ಮಾಣ ಚಿಂತೆಯೊಂದಿಗೆ ಗೃಹ ಸಾಲದ ಬಡ್ಡಿ ಪಾವತಿಯ ಹೊರೆ ಕೂಡ ಕಾಡುತ್ತ ಇರುತ್ತದೆ. ನಿಮ್ಮ ಸ್ವಂತ ಮನೆಯ ನಿರ್ಮಾಣದ ಕನಸಿಗೆ ನೀವು ಹೋಮ್ ಲೋನ್ ಪಡೆದುಕೊಂಡರೆ, ಈ ರೀತಿಯ ಟ್ರಿಕ್ ಬಳಸುವುದರಿಂದ ನೀವು ಲಕ್ಷ ಲಕ್ಷ ಬಡ್ಡಿಯನ್ನು ಉಳಿಸಬಹುದು.

Home Loan Update 2024
Image Credit: The Economic Times

ಹೋಮ್ ಲೋನ್ ಪಡೆಯುವಾಗ ಈ ಟ್ರಿಕ್ ಬಳಸಿದರೆ 32 ಲಕ್ಷ ಉಳಿಸಬಹುದು
ಹೋಮ್ ಲೋನ್ ಪಾವತಿಯಲ್ಲಿ ಹಣ ಉಳಿಸಲು ಮುಖ್ಯವಾಗಿ ನೀವು ದೀರ್ಘಾವಧಿಯ ಹೋಮ್ ಲೋನ್ ಪಡೆಯುವ ಬದಲು ಕಡಿಮೆ ಅವಧಿಯ ಹೋಮ್ ಲೋನ್ ಅನ್ನು ಪಡೆಯುವುದು ಉತ್ತಮ. ಇದರಿಂದಾಗಿ 30 ವರ್ಷದ ಹೋಮ್ ಲೋನ್ ಅನ್ನು ನೀವು 15 ವರ್ಷದಲ್ಲೇ ತೀರಿಸಬಹುದು. ಇದರಿಂದಾಗಿ 32 ಲಕ್ಷ ರೂಪಾಯಿಗಳ ಬಡ್ಡಿಯ ಉಳಿತಾಯ ಆಗಲಿದೆ. ಅದು ಹೇಗೆ ಎನ್ನುವ ಬಗ್ಗೆ ವಿವರ ಈ ಲೇಖನದಲ್ಲಿದೆ.

ನೀವು HDFC ಬ್ಯಾಂಕ್‌ ನಿಂದ 30 ಲಕ್ಷ ರೂಪಾಯಿ ಗೃಹ ಸಾಲ ಪಡೆದು 30 ವರ್ಷಗಳ ಸಾಲವನ್ನು ಶೇ. 9ರ ಬಡ್ಡಿ ದರದಲ್ಲಿ ಮರುಪಾವತಿಸಿದರೆ 56,89,924 ರೂಪಾಯಿ ಬಡ್ಡಿ ಕಟ್ಟಬೇಕಾಗುತ್ತದೆ. ಹೀಗೆ ಅಸಲು ಮತ್ತು ಬಡ್ಡಿ ಸೇರಿ 30 ಲಕ್ಷ ಸಾಲಕ್ಕೆ ಒಟ್ಟು 86,89,924 ರೂ. ತೆಗೆದುಕೊಂಡ ಸಾಲಕ್ಕಿಂತ ಎರಡು ಪಟ್ಟು ಬಡ್ಡಿ ನೀಡಬೇಕು. ಇದರಿಂದ ಕಷ್ಟಪಟ್ಟು ದುಡಿದ ಹಣವೆಲ್ಲ ನಷ್ಟವಾಗುತ್ತದೆ. ಇನ್ನು ಗೃಹ ಸಾಲದ ವಿಚಾರದಲ್ಲಿ ಸಾಲ ತಜ್ಞರ ಸಲಹೆ ಪಡೆದು ಲಕ್ಷಗಟ್ಟಲೆ ಬಡ್ಡಿ ಉಳಿತಾಯ ಮಾಡಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ, 30 ವರ್ಷಗಳ ಗೃಹ ಸಾಲವನ್ನು ತೆಗೆದುಕೊಳ್ಳುವ ಬದಲು ಕೇವಲ 16 ವರ್ಷಗಳ ಸಾಲವನ್ನು ಪಡೆಯುವ ಮೂಲಕ ನೀವು ಲಕ್ಷಗಳನ್ನು ಉಳಿಸಬಹುದು.

Home Loan Trick
Image Credit: Mozo

30 ವರ್ಷದ ಹೋಮ್ ಲೋನ್ ಅನ್ನು 15 ವರ್ಷದಲ್ಲೇ ತೀರಿಸಿ
30 ಲಕ್ಷ ರೂಪಾಯಿಯ ಹೋಮ್ ಲೋನ್ ಅನ್ನು ಕೇವಲ 15 ವರ್ಷಗಳಲ್ಲಿ ತೀರಿಸಿದರೆ, ಬಡ್ಡಿದರದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಶೇ. 9 ರ ಬಡ್ಡಿದರದಲ್ಲಿ 30 ಲಕ್ಷ ಸಾಲವನ್ನು 15 ವರ್ಷಗಳ ಅವಧಿಯಲ್ಲಿ ತೀರಿಸಿದರೆ ನೀವು ಕೇವಲ 24,77 ,040 ರೂಪಾಯಿ ಬಡ್ಡಿಯನ್ನಷ್ಟೇ ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಅಸಲು ಹಾಗೂ ಬಡ್ಡಿ ಸೇರಿಕೊಂಡು ಒಟ್ಟು 54,77,040 ರೂಪಾಯಿ ಹಣವನ್ನು ನೀವು ಬ್ಯಾಂಕಿಗೆ ಪಾವತಿಸಬೇಕಾಗಿದೆ. 30 ವರ್ಷದ ಸಾಲವನ್ನು 15 ವರ್ಷದ ಅವಧಿಗೆ ತೀರಿಸಿದರೆ ನಿಮಗೆ ಸುಮಾರು 32 ಲಕ್ಷದಷ್ಟು ಬಡ್ಡಿಯನ್ನು ಉಳಿತಾಯ ಮಾಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group