UIDAI Update: ಆಧಾರ್ ಕಾರ್ಡ್ ಇದ್ದವರಿಗೆ ಕೊನೆಯ 10 ದಿನ ಅವಕಾಶ, ಈ ಕೆಲಸ ಮಾಡದಿದ್ದರೆ ದಂಡ ಖಚಿತ

ಆಧಾರ್ ಕಾರ್ಡ್ ಇದ್ದವರಿಗೆ ಕೊನೆಯ 10 ದಿನ ಅವಕಾಶ

UIDAI Free Aadhaar Update: ಸದ್ಯ UIDAI ಆಧಾರ್ ನವೀಕರಣ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. Online Portal ಭೇಟಿ ನೀಡುವ ಮೂಲಕ ಬಳಕೆದಾರರು ತಮ್ಮ ಹೆಸರು, ವಿಳಾಸ, ಲಿಂಗ, ಫೋನ್ ಸಂಖ್ಯೆ, ಲಿಂಗ ಮತ್ತು Email ಇತ್ಯಾದಿಯನ್ನು ಉಚಿತವಾಗಿ ಬದಲಾಯಿಸಬಹುದಾಗಿದೆ.

ಈ ಹಿಂದೆ ಬಳಕೆದಾರರು ತಮ್ಮ ದಾಖಲೆಗಳನ್ನು ಉಚಿತವಾಗಿ ನವೀಕರಿಸಲು ಸಾಕಷ್ಟು ಬಾರಿ UIDAI ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿದೆ. ಇದೀಗ ದಿನಾಂಕ ಹತ್ತಿರವಾಗುತ್ತಿದ್ದಂತೆ UIDAI ಉಚಿತ ನವೀಕರಣಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ನೀಡಿದೆ. ಆಧಾರ್ ಕಾರ್ಡ್ ಹೊಂದಿರುವವರಿಗೆ UIDAI ಕೊನೆಯ ಅವಕಾಶವನ್ನು ನೀಡಿದೆ. ನಿಗದಿತ ಸಮಯದ ಒಳಗೆ ಈ ಕೆಲಸ ಮಾಡದಿದ್ದರೆ ನೀವು ದಂಡ ಪಾವತಿಸಬೇಕಾಗಬಹುದು.

UIDAI Free Aadhaar Update
Image Credit: Indiatv

ಆಧಾರ್ ಕಾರ್ಡ್ ಇದ್ದವರಿಗೆ ಕೊನೆಯ 10 ದಿನ ಅವಕಾಶ
ಸದ್ಯ UIDAI ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತ ಹೊಸ ಅಪ್ಡೇಟ್ ನೀಡಿದೆ. June 14 ಉಚಿತ ನವೀಕರಣಕ್ಕೆ ಕೊನೆಯ ದಿನಾಂಕವಾಗಿದೆ. ನೀವು ಜೂನ್ 14 ರೊಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಬಹುದು. ಇದಕ್ಕೆ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ. ಆದರೆ ಜೂನ್ 14 ರ ನಂತರ ನೀವು ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ನವೀಕರಣ ಮಾಡಿದ್ರೆ ಇದಾಕ್ಕಾಗಿ ಶುಲ್ಕ ಪಾವತಿಸಬೇಕಾಗುತ್ತದೆ.

ಜೂನ್ 14 ರ ನಂತರ ನೀವು ಆಧಾರ್ ನವೀಕರಣಕ್ಕೆ 50 ರೂ. ಶುಲ್ಕವನ್ನು ಪಾವತಿಸಬೇಕಾಗಬಹುದು. ಇದಕ್ಕಾಗಿ ಗಡುವು ಮುಗಿಯುವ ಮುನ್ನ ನೀವು ನಿಮ್ಮ ಆಧಾರ್ ಅನ್ನು ನವೀಕರಿಸಿಕೊಳ್ಳಿ. ಈಗಾಗಲೇ UIDAI ಆಧಾರ್ ನವೀಕರಣಕ್ಕೆ ಹಲವು ಬಾರಿ ದಿನಾಂಕವನ್ನು ವಿಸ್ತರಿಸಿದೆ. ಜೂನ್ ಬಳಿಕ ಮತ್ತೆ ಸಮಯಾವಕಾಶವನ್ನು ವಿಸ್ತರಿಸುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಆದಷ್ಟು ಬೇಗ ನಿಮ್ಮ 10 ವರ್ಷ ಹಳೆಯ ಆಧಾರ್ ಕಾರ್ಡ್ ಅನ್ನು ನವೀಕರಿಸಿಕೊಳ್ಳಿ. ಇನ್ನು ಇನ್ನು ಉಚಿತ ಆಧಾರ್ ನವೀಕರಣಕ್ಕೆ 10 ದಿನಗಳು ಬಾಕಿ ಇದೆ. ಅಷ್ಟರೊಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿಕೊಂಡು ಆಧಾರ್ ಕಾರ್ಡ್ ನಿಷ್ಕ್ರಿಯವಾಗುವುದರಿಂದ ತಪ್ಪಿಸಿಕೊಳ್ಳಿ.

Free Aadhaar Update
Image Credit: India

ಈ ರೀತಿಯಾಗಿ ನಿಮ್ಮ Aadhaar Card ಅನ್ನು ನವೀಕರಿಸಿಕೊಳ್ಳಿ
*ಮೊದಲು UIDAI Website ಆಗಿರುವ https://myaadhaar.uidai.gov.in/ ಗೆ ಭೇಟಿ ನೀಡಬೇಕು.

Join Nadunudi News WhatsApp Group

*UIDAI Website ನಲ್ಲಿ ಲಾಗಿನ್ ಆಗಿ Password ರಚಿಸಬೇಕು.

*ನಂತರ My Aadhaar ಮೇಲೆ ಟ್ಯಾಬ್ ಮಾಡಿ ಆಧಾರ್ ವಿವರಗಳನ್ನು ನವೀಕರಿಸಿ ನಮೂದಿಸಬೇಕು.

*ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಲಾಗಿನ್ ಆಗಬೇಕು.

•ನಂತರ ನೀವು ಬದಲಾವಣೆ ಮಾಡಬೇಕಾದ ವಿವರವನ್ನು ಭರ್ತಿ ಮಾಡಬೇಕು.

•ನಂತರ ಡಾಕ್ಯುಮೆಂಟ್ಸ್ ಅಪ್ಡೇಟ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.

•ಇಲ್ಲಿ ನೀವು ಆಧಾರ್ ಗೆ ಸಂಬಂಧಿಸಿದ ಮಾಹಿತಿಯನ್ನು ನೋಡುತ್ತಿರಿ.

•ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ನಂತರ ವಿಳಾಸವನ್ನು ನವೀಕರಿಸಲು ಅಗತ್ಯವಿರುವ ದಾಖಲೆಗಳನ್ನು ಅಪ್‌ ಲೋಡ್ ಮಾಡಿ.

•ನಂತರ ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸ್ವೀಕರಿಸಿ.

•ನಂತರ ನೀವು ನವೀಕರಣ ವಿನಂತಿ ಸಂಖ್ಯೆ (URN) ಸಂಖ್ಯೆ 14 ಅನ್ನು ಪಡೆಯುತ್ತೀರಿ.

•ಇದರ ಮೂಲಕ ನೀವು ಆಧಾರ್ ನವೀಕರಣ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಬಹುದು.

Free Aadhaar Update Last Date
Image Credit: News18

Join Nadunudi News WhatsApp Group