Ultimus Elite: ಈಗ ಬಡವರ ಮಕ್ಕಳು ಕೂಡ ಲ್ಯಾಪ್ ಟಾಪ್ ಖರೀದಿಸಬಹುದು, ಈ ಲ್ಯಾಪ್ ಟಾಪ್ ಬೆಲೆಯಲ್ಲಿ 45% ಡಿಸ್ಕೌಂಟ್

ದುಬಾರಿ ಲ್ಯಾಪ್ ಟಾಪ್ ಮೇಲೆ ಭರ್ಜರಿ 45% ಡಿಸ್ಕೌಂಟ್, ಲ್ಯಾಪ್ ಟಾಪ್ ಖರೀದಿಗೆ ಇದು ಬೆಸ್ಟ್ ಟೈಮ್

Ultimus Elite Laptop Discount: ಇತ್ತೀಚಿಗೆ ಲ್ಯಾಪ್ ಟಾಪ್ ಗಳ ಬೇಡಿಕೆ ಹೆಚ್ಚಿದೆ, ಯಾಕೆಂದರೆ ಮೊದಲೆಲ್ಲಾ ಕೇವಲ ಉದ್ಯೋಗಿಗಳಿಗೆ ಮಾತ್ರ ಲ್ಯಾಪ್ ಟಾಪ್ ಅವಶ್ಯಕತೆ ಇತ್ತು, ಈಗ ಹಾಗಿಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್ ಬಹಳ ಮುಖ್ಯ ಆಗಿದೆ.

ಉತ್ತಮ ಶಿಕ್ಶಣ ಪಡೆಯಲು ಹಾಗು ಉನ್ನತ ಶಿಕ್ಷಣ ಪಡೆಯಲು ಲ್ಯಾಪ್ ಟಾಪ್ ಅಗತ್ಯ ಇದ್ದು, ಎಲ್ಲರಿಗೂ ದುಬಾರಿ ಬೆಲೆಯ ಲ್ಯಾಪ್ ಟಾಪ್ ಅನ್ನು ಖರೀದಿ ಮಾಡಲು ಸಾಧ್ಯವಿಲ್ಲ ಅಂಥವರಿಗೆ ಇಲ್ಲಿದೆ ಬಜೆಟ್ ದರದಲ್ಲಿ ಲ್ಯಾಪ್ ಟಾಪ್ ಖರೀದಿ ಮಾಡುವ ಸುವರ್ಣ ಅವಕಾಶ. ಅಲ್ಟಿಮಸ್ ಎಲೈಟ್ (Ultimus Elite ) ಲ್ಯಾಪ್‌ಟಾಪ್‌ ಇದು ಬಹಳ ಅಗ್ಗದಲ್ಲಿ ನಿಮ್ಮ ಕೈ ಸೇರಲಿದ್ದು, ಈ ಲ್ಯಾಪ್‌ಟಾಪ್‌ ನ ಫೀಚರ್ಸ್ ಹೀಗಿದೆ.

Ultimus Elite Laptop Price
Image Credit: Outlookindia

ಅಲ್ಟಿಮಸ್ ಎಲೈಟ್ (Ultimus Elite)ಲ್ಯಾಪ್‌ಟಾಪ್ ರಚನೆ ಹಾಗು ಪ್ರೊಸೆಸರ್‌

ಅಲ್ಟಿಮಸ್ ಎಲೈಟ್ ಲ್ಯಾಪ್‌ಟಾಪ್‌ 14.1 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 1920 x 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಈ ಮೂಲಕ ಉತ್ತಮ ಡಿಸ್‌ಪ್ಲೇ ಅನುಭವವನ್ನು ಪಡೆಯಬಹುದಾಗಿದೆ. ಈ ಲ್ಯಾಪ್‌ಟಾಪ್ 10ನೇ ಜನ್ ಇಂಟೆಲ್ ಕೋರ್ i5 1035G4 ಪ್ರೊಸೆಸರ್‌ ಬಲ ಪಡೆದಿದ್ದು, ಇದು 4 x 1.1 GHz (3.7 GHz ವರೆಗಿನ ಟರ್ಬೊ ವೇಗ) ಕೋರ್‌ಗಳನ್ನು ಹೊಂದಿದೆ. ಇದರೊಂದಿಗೆ 8 GB DDR4 RAM ಹಾಗೂ 512 GB SSD ಇಂಟರ್‌ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದ್ದು, ಇಂಟೆಲ್ ಇಂಟಿಗ್ರೇಟೆಡ್ ಐರಿಸ್ ಗ್ರಾಫಿಕ್ಸ್ ಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಅಲ್ಟಿಮಸ್ ಎಲೈಟ್ (Ultimus Elite)ಲ್ಯಾಪ್‌ಟಾಪ್ ಫೀಚರ್ಸ್

Join Nadunudi News WhatsApp Group

ಅಲ್ಟಿಮಸ್ ಎಲೈಟ್ ಲ್ಯಾಪ್‌ಟಾಪ್‌ ಇನ್‌ಬಿಲ್ಟ್‌ ಮೈಕ್ರೋಫೋನ್‌ ಆಯ್ಕೆ ಪಡೆದಿದ್ದು, ಈ ಮೂಲಕ ಯಾವುದೇ ಮೀಟಿಂಗ್‌ ಅಥವಾ ಇತರೆ ಕೆಲಸಗಳಲ್ಲಿ ಭಾಗಿಯಾಗಬಹುದಾಗಿದೆ. ಜೊತೆಗೆ ಉತ್ತಮ ಬ್ಯಾಟರಿ ಆಯ್ಕೆ ಹೊಂದಿದ್ದು, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಹತ್ತು ಗಂಟೆಗಳ ಬ್ಯಾಕಪ್‌ ಲಭ್ಯವಾಗಲಿದೆ.

ಮ್ಯಾಟ್ ಬ್ಲ್ಯಾಕ್‌ ಬಣ್ಣದ ಆಯ್ಕೆಯಲ್ಲಿ ಲಭ್ಯ ಇರುವ ಈ ಲ್ಯಾಪ್‌ಟಾಪ್‌ ಕೇವಲ 1.3 ಕೆಜಿ ತೂಕ ಹೊಂದಿದ್ದು, ಸುಲಭವಾಗಿ ಬೇಕೆಂದಲ್ಲಿಗೆ ತೆಗೆದುಕೊಂಡು ಹೋಗಬಹುದಾಗಿದೆ. ಇದರ ಜೊತೆಗೆ ವೇಗದ ಡೇಟಾ ವರ್ಗಾವಣೆಗಾಗಿ 2 USB ಪೋರ್ಟ್‌ ಗಳು, ತಡೆರಹಿತ ನೆಟ್‌ ವರ್ಕಿಂಗ್‌ ಗಾಗಿ RJ45 LAN ಪೋರ್ಟ್ ಮತ್ತು ಬಹುಮುಖ ವಿಸ್ತರಣೆಗಾಗಿ ಮಿನಿ HDMI ಮತ್ತು ಮೈಕ್ರೋ-ಎಸ್‌ಡಿ ಕಾರ್ಡ್‌ ಸ್ಲಾಟ್‌ಗಳನ್ನು ಹೊಂದಿದೆ.

Ultimus Elite Laptop Discount
Image Credit: Original Source

ಅಲ್ಟಿಮಸ್ ಎಲೈಟ್ ಲ್ಯಾಪ್‌ಟಾಪ್‌ ಬೆಲೆ ಹಾಗೂ ಆಫರ್

ಅಲ್ಟಿಮಸ್ ಎಲೈಟ್ ಲ್ಯಾಪ್‌ಟಾಪ್‌ 45,990 ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ಈಗ ಮೊಬೈಲ್‌ ಫೋನ್‌ ಬೆಲೆಗೆ ಖರೀದಿ ಮಾಡಬಹುದು. ಅಂದರೆ ಇದರ ಬೆಲೆ ಫ್ಲಿಪ್‌ಕಾರ್ಟ್‌ ನಲ್ಲಿ (Flipkart) 24,999 ರೂ.ಗಳಾಗಿದೆ. ಅದಾಗ್ಯೂ ಕೆಲವು ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಲ್ಯಾಪ್‌ಟಾಪ್‌ ಅನ್ನು ಖರೀದಿ ಮಾಡಬಹುದಾಗಿದೆ.ಈ ಲ್ಯಾಪ್‌ಟಾಪ್ ಅನ್ನು ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 5% ಕ್ಯಾಶ್‌ಬ್ಯಾಕ್, 1,548 ರೂ.ಗಳ ಡೆಬಿಟ್‌ ಕಾರ್ಡ್‌ EMI ಸೌಲಭ್ಯದೊಂದಿಗೆ ಇತರೆ ಕ್ಯಾಶ್‌ ಬ್ಯಾಕ್‌ ಸೌಲಭ್ಯ ಸಹ ಸಿಗಲಿದೆ.

Join Nadunudi News WhatsApp Group