UPI Lite App: UPI ಬಳಸುವವರಿಗೆ ಗುಡ್ ನ್ಯೂಸ್, ಇನ್ನುಮುಂದೆ ಇಂಟರ್ನೆಟ್ ಇಲ್ಲದೆ ಹಣವನ್ನ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.

ಈಗಿನ ಕಾಲದಲ್ಲಿ ಎಲ್ಲಾ ವ್ಯವಹಾರದಲ್ಲಿ ಡಿಜಿಟಲ್ ಆಗಿದೆ. ಹೌದು Digital Application ಬಳಸುವುದರ ಮೂಲಕ ಜನರು ಹಣದ ವ್ಯವಹಾರವನ್ನ ಮಾಡುತ್ತಾರೆ. ಹೌದು ಹಣದ ವ್ಯವಹಾರವನ್ನ ಮಾಡಲು ಈಗ ಅನೇಕ ಅಪ್ಲಿಕೇಶನ್ ಗಳು ಇದ್ದು ಜನರು ಈ ಅಪ್ಲಿಕೇಶನ್ ಮೂಲಕ ಹೆಚ್ಚಿನ ಹಣದ ವಹಿವಾಟನ್ನ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರು UPI ಮೂಲಕ ಹಣವನ್ನ ವರ್ಗಾವಣೆ ಮಾಡುವುದು ರೂಡಿಯಲ್ಲಿ ಇದೆ ಮತ್ತು ಮೊಬೈಲ್ ಬಳಸುವ ಬಹುತೇಕ ಎಲ್ಲಾ ಜನರು UPI ಬಳಸುತ್ತಾರೆ. ಸದ್ಯ UPI ಮೂಲಕ ಹಣದ ವ್ಯವಹಾರ ಮಾಡುವವರಿಗೆ ಈಗ ಇನ್ನೊಂದು ಅಪ್ಲಿಕೇಶನ್ ಜಾರಿಗೆ ತರಲಾಗಿದ್ದು ಈ ಅಪ್ಪಿಕೇಷನ್ ಮೂಲಕ ಹಣವನ್ನ ವರ್ಗಾವಣೆ ಮಾಡುವುದು ಇನ್ನಷ್ಟ ಸುಲಭ ಆಗಿದೆ. ಹಾಗಾದರೆ ಆ ಅಪ್ಲಿಕೇಶನ್ ಯಾವುದು ಮತ್ತು ಅದನ್ನ ಬಳಸುವುದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ಹೌದು ದೇಶದಲ್ಲಿ UPI Lite ಅನ್ನುವ ಅಪ್ಲಿಕೇಶನ್ ಜಾರಿಗೆ ತರಲಾಗಿದ್ದು ಈ ಅಪ್ಲಿಕೇಶನ್ ಮೂಲಕ ಹಣದ ವ್ಯವಹಾರವನ್ನ ಬಹಳ ಸುಲಭವಾಗಿ ಮಾಡಬಹುದು. Digital Payment ಅನ್ನು ಇನ್ನಷ್ಟು ಸುಲಭ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈಗ UPI Lite ಅಪ್ಲಿಕೇಶನ್ ಜಾರಿಗೆ ತಂದಿದೆ. ಇನ್ನು ಈ UPI ಲೈಟ್ ಅಪ್ಲಿಕೇಶನ್ ನ ಇನ್ನೊಂದು ವಿಶೇಷತೆ ಏನು ಅಂದರೆ, ಜನರು ಇಂಟರ್ನೆಟ್ ಇಲ್ಲದೆ ಈ ಅಪ್ಲಿಕೇಶನ್ ಮೂಲಕ ಹಣವನ್ನ ವರ್ಗಾವಣೆ ಮಾಡಬಹುದಾಗಿದೆ. ಇತರೆ ಅಪ್ಲಿಕೇಶನ್ ಗಳಿಗೆ ಹೋಲಿಕೆ ಮಾಡಿದರೆ ಈ ಅಪ್ಲಿಕೇಶನ್ ಮೂಲಕ ಬಹಳ ಸರಳವಾಗಿ ಮತ್ತು ತ್ವರಿತವಾಗಿ ಹಣವನ್ನ ವರ್ಗಾವಣೆ ಮಾಡಬಹುದು.

UPI Lite Application
Image Credit: www.aajtak.in

ಈ UPI Lite App ನ ಇನ್ನೊಂದು ವಿಶೇಷತೆ ಏನು ಅಂದರೆ, ಈ ಅಪ್ಲಿಕೇಶನ್ ನಲ್ಲಿ ನೀವು ಬ್ಯಾಂಕ್ ಖಾತೆಯನ್ನ ಪ್ರವೇಶ ಮಾಡದೆ ವಾಲೆಟ್ ಮೂಲಕ ಹಣವನ್ನ ವರ್ಗಾವಣೆ ಅಥವಾ ಹಣವನ್ನ ಸ್ವೀಕಾರ ಮಾಡಬಹುದಾಗಿದೆ. ನೀವು ಈ ಅಪ್ಲಿಕೇಶನ್ ನಲ್ಲಿ ಮೊದಲು ವಾಲೆಟ್ ಗೆ ಹಣವನ್ನ ಹಾಕಿಕೊಳ್ಳಬೇಕು ಮತ್ತು ವಾಲೆಟ್ ನಲ್ಲಿ ಹಣವನ್ನ ಹಾಕಿದ ನಂತರ ಯಾವುದೇ ಇಂಟರ್ನೆಟ್ ಇರದೇ ನೀವು ಹಣವನ್ನ ಪಾವತಿ ಮಾಡಬಹುದು ಮತ್ತು ಹಣವನ್ನ ಪಾವತಿ ಮಾಡುವ ಸಮಯದಲ್ಲಿ ಯಾವುದೇ ಪಿನ್ ಹಾಕುವ ಅಗತ್ಯ ಕೂಡ ಇರುವುದಿಲ್ಲ. ಇನ್ನು UPI Lite Application ನ ಒಂದು ಸಮಸ್ಯೆ ಏನು ಅಂದರೆ, ಇದರಲ್ಲಿ ದೊಡ್ಡ ಮೊತ್ತದ ಹಣದ ವ್ಯವಹಾರವನ್ನ ಮಾಡಲು ಸಾಧ್ಯವಿಲ್ಲ.

ಅದೇ ರೀತಿಯಲ್ಲಿ UPI Lite Wallet ನಲ್ಲಿ 2000 ರೂಪಾಯಿ ತನಕ ಮಾತ್ರ ಹಣವನ್ನ ಇಡಬಹುದು ಮತ್ತು ಒಮ್ಮೆ 200 ರೂಪಾಯಿಯ ತನಕ ಮಾತ್ರ ಪೇಮೆಂಟ್ ಮಾಡಬಹುದು. ಈ ಅಪ್ಲಿಕೇಶನ್ ಬಳಸಲು ಯಾವುದೇ ಇಂಟರ್ನೆಟ್ ಸೇವೆ ಮತ್ತು ಪಿನ್ ಬೇಡವಾದ ಕಾರಣ ಜನರು ಮೋಸ ಹೋಗಬಾರದು ಅನ್ನುವ ಉದ್ದೇಶದಿಂದ RBI ಈ ಅಪ್ಲಿಕೇಶನ್ ವ್ಯವಹಾರದ ಮಿತಿಯನ್ನ ಕಡಿಮೆ ಮಾಡಿದೆ. ಇನ್ನು ಈ ಅಪ್ಲಿಕೇಶನ್ ಮೂಲಕ ಪ್ರತಿನಿತ್ಯ ಅನಿಯಮಿತ ಕಡಿಮೆ ಮೊತ್ತದ ವ್ಯವಹಾರವನ್ನ ಮಾಡಬಹುದು ಮತ್ತು ನೆಟ್ವರ್ಕ್ ಸಮಸ್ಯೆ ಇರುವ ಪ್ರದೇಶದಲ್ಲಿ ಈ ಅಪ್ಲಿಕೇಶನ್ ಬಹಳ ಸಹಾಯವನ್ನ ಮಾಡಲಿದೆ. ಸದ್ಯ ಈ ಅಪ್ಲಿಕೇಶನ್ ಹೆಚ್ಚು ಡಿಜಿಟಲ್ ವ್ಯವಹಾರ ಮಾಡುವ ಜನರಿಗೆ ಬಹಳ ಸಹಕಾರಿ ಆಗಲಿದೆ.

Join Nadunudi News WhatsApp Group

Join Nadunudi News WhatsApp Group