Voice Message: ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸುವವರಿಗೆ ಬಿಗ್ ಅಪ್ಡೇಟ್, ಬಂತು ಇನ್ನೊಂದು ಆಕರ್ಷಕ ಫೀಚರ್

ವಾಟ್ಸಾಪ್‌ನ ಈ ಜನಪ್ರಿಯ ಫೀಚರ್ಸ್‌ನಲ್ಲಿ ಅಚ್ಚರಿಯ ಬದಲಾವಣೆ

View Once For Whatsapp Audio Message: ವಾಟ್ಸಾಪ್‌ (WhatsApp) ಈಗಾಗಲೇ ತನ್ನ ಅಪ್ಲಿಕೇಶನ್ ನಲ್ಲಿ ಹಲವು ಹೊಸ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ ಹಾಗೆಯೆ ಈಗ ಜನಪ್ರಿಯ ಫೀಚರ್ ಒಂದನ್ನು ಇನ್ನಷ್ಟು ವಿಸ್ತರಣೆ ಮಾಡಿದೆ. ಅದೇನೆಂದರೆ ವಾಟ್ಸಾಪ್‌ ನಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ವ್ಯೂ ಒನ್ಸ್‌ (View Once ) ಫೀಚರ್ ನಲ್ಲಿ ಬಹಳ ಬದಲಾವಣೆಯನ್ನು ತರುವ ಮೂಲಕ ತನ್ನ ಬಳಕೆದಾರರಿಗೆ ಶುಭ ಸುದ್ದಿ ನೀಡಿದೆ.

ವೀಡಿಯೋ ಮತ್ತು ಇಮೇಜ್‌ಗಳನ್ನು ಒಮ್ಮೆ ವೀಕ್ಷಿಸಿದ ನಂತರ ಮರೆಯಾಗುವಂತೆ ಮಾಡುವ ಈ ಫೀಚರ್ಸ್‌ ಇದೀಗ ಆಡಿಯೋ ಸಂದೇಶಗಳಿಗೂ ಕೂಡ ಅನ್ವಯಿಸಲಿದೆ. ಇಂದಿನಿಂದಲೇ ಈ ಹೊಸ ಬದಲಾವಣೆಯು ಜಾಗತಿಕವಾಗಿ ಎಲ್ಲರಿಗೂ ಲಭ್ಯವಾಗಲಿದೆ.

Whatsapp Audio Message
Image Credit: Gadgets360

ವ್ಯೂ ಒನ್ಸ್‌ ಫೀಚರ್ಸ್‌ ನಲ್ಲಿ ವಿಸ್ತರಣೆ

ಫೋಟೋಗಳು ಮತ್ತು ವೀಡಿಯೊಗಳಿಗಾಗಿ View Once ಹೇಗೆ ಕಾರ್ಯನಿರ್ವಹಿಸಲಿದೆಯೋ ಅದೇ ಮಾದರಿಯಲ್ಲಿಯೇ ಆಡಿಯೋ ಸಂದೇಶಗಳಿಗೂ ಕಾರ್ಯನಿರ್ವಹಿಸಲಿದೆ. ವ್ಯೂ ಒನ್ಸ್‌ ಆಯ್ಕೆಯನ್ನು ಆನ್‌ ಮಾಡಿದ್ದರೆ ನೀವು ಆಡಿಯೋ ಸಂದೇಶವನ್ನು ಕೇಳಿಸಿಕೊಂಡ ನಂತರ ಅದು ಕಣ್ಮರೆಯಾಗಲಿದೆ. ಇದು ಎಲ್ಲಾ ವೈಯಕ್ತಿಕ ಸಂದೇಶಗಳಿಗೂ ಅನ್ವಯಿಸಬಹುದಾಗಿದೆ. ಇನ್ನು ವ್ಯೂ ಒನ್ಸ್‌ ಆಡಿಯೋ ಸಂದೇಶಗಳು ಕೂಡ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಯನ್‌ ಹೊಂದಿರಲಿದೆ ಎಂದು ವಾಟ್ಸಾಪ್‌ ತಿಳಿಸಿದೆ .

ವಾಟ್ಸಾಪ್‌ನಲ್ಲಿ ವ್ಯೂ ಒನ್ಸ್‌ ಆಡಿಯೋ ಸಂದೇಶವನ್ನು ಸೆಂಡ್‌ ಮಾಡುವ ವಿಧಾನ

Join Nadunudi News WhatsApp Group

ಮೊದಲಿಗೆ ವಾಟ್ಸಾಪ್‌ನಲ್ಲಿ ಪರ್ಸನಲ್‌ ಅಥವಾ ಗ್ರೂಪ್‌ ಚಾಟ್‌ ತೆರೆಯಿರಿ, ನಂತರ ಮೈಕ್ರೊಫೋನ್ ಟ್ಯಾಪ್ ಮಾಡಿ ಇದರಲ್ಲಿ ರೆಕಾರ್ಡಿಂಗ್ ಅನ್ನು ಲಾಕ್ ಮಾಡಲು ಮೇಲಕ್ಕೆ ಸ್ವೈಪ್ ಮಾಡಿ. ನಂತರ ರೆಕಾರ್ಡ್ ಬಟನ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ ಇದೀಗ ಬಟನ್ ಹಸಿರು ಬಣ್ಣಕ್ಕೆ ತಿರುಗಿದಾಗ ವ್ಯೂ ಒನ್ಸ್‌ ಮೋಡ್‌ ಆನ್‌ ಆಗಲಿದೆ ನಂತರ ನೀವು ಸಂದೇಶವನ್ನು ಸೆಂಡ್‌ ಬಟನ್ ಟ್ಯಾಪ್ ಮಾಡಿ. ಇದೀಗ ನೀವು ಕಳುಹಿಸುವ ಸಂದೇಶವನ್ನು ಸ್ವೀಕರಿಸುವವರು ಆಡಿಯೋ ಸಂದೇಶ ಪ್ಲೆ ಮಾಡಿದ ನಂತರ ಆಟೋಮ್ಯಾಟಿಕ್‌ ಕಣ್ಮರೆಯಾಗಲಿದೆ.

View Once For Whatsapp Audio Message
Image Credit: Hindustantimes

ವ್ಯೂ ಒನ್ಸ್‌ ಸೆಟ್‌ ಮಾಡುವ ಮುನ್ನ ಈ ವಿಚಾರವನ್ನು ತಿಳಿದುಕೊಳ್ಳಿ

ವ್ಯೂ ಒನ್ಸ್‌ ಸಂದೇಶವನ್ನು ಕಳುಹಿಸುವುದಕ್ಕೆ ಪ್ರತಿ ಬಾರಿ View Once ಅನ್ನು ಆಯ್ಕೆಯನ್ನು ಆರಿಸಬೇಕಾಗುತ್ತದೆ. ವಾಯ್ಸ್‌ ಮೆಸೇಜ್‌ ಅನ್ನು ವ್ಯೂ ಒನ್ಸ್‌ನಲ್ಲಿ ಕಳುಹಿಸಿದ 14 ದಿನಗಳಲ್ಲಿ ತೆರೆಯಬೇಕು. ಒಂದು ವೇಳೆ ನೀವು ಆ ಸಂದೇಶವನ್ನು ಕೇಳದಿದ್ದರೆ ಸಂದೇಶದ ಅವಧಿ ಮೀರಲಿದ್ದು, ಚಾಟ್‌ನಿಂದ ಕಣ್ಮರೆಯಾಗುತ್ತದೆ. ಇದಲ್ಲದೆ ವ್ಯೂ ಒನ್ಸ್‌ ಸಂದೇಶದ ಮೀಡಿಯಾ ಅಥವಾ ಆಡಿಯೋ ಸಂದೇಶಗಳನ್ನು ಯಾರಿಗೂ ಕೂಡ ಫಾರ್ವರ್ಡ್‌ ಮಾಡಲು ಸಾಧ್ಯವಾಗುವುದಿಲ್ಲ.

ನೀವು ಸ್ವೀಕರಿಸುವ ಯಾವುದೇ ಮಿಡಿಯಾದ ಸ್ಕ್ರೀನ್‌ಶಾಟ್ ಅನ್ನು ನೀವು ತೆಗೆದುಕೊಳ್ಳಲು ಸಾಧ್ಯವಿಲ್ಲ.ಒನ್ಸ್‌ ವ್ಯೂ ನಲ್ಲಿ ನೀವು ಆಡಿಯೋ ಸಂದೇಶಗಳನ್ನು ವೀಕ್ಷಿಸಿದರೆ ಮತ್ತೊಮ್ಮೆ ನೋಡಲಾಗುವುದಿಲ್ಲ. ಅದನ್ನು ತೆರೆಯಲಾಗಿದೆಯೇ ಎಂದು ಪರಿಶೀಲಿಸಲು, ಸ್ವೀಕರಿಸುವವರು ರೀಡ್‌ ರೆಸಿಪ್ಟ್‌ಗಳನ್ನು ಓದಿರಬೇಕಾಗುತ್ತದೆ. ಇದಲ್ಲದೆ ಈ ವ್ಯೂ ಒನ್ಸ್‌ ಸಂದೇಶಗಳನ್ನು ನಿಮ್ಮ ಡಿವೈಸ್‌ನಲ್ಲಿ ಸೇವ್‌ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ರೆಕಾರ್ಡ್ ಮಾಡಲಾಗುವುದಿಲ್ಲ.

Join Nadunudi News WhatsApp Group