Virat Kohli Daughter: ಮಗಳ ಜೊತೆ ವಿರಾಟ್-ಅನುಷ್ಕಾ ಟ್ರಿಪ್, ಫೋಟೋ ವೈರಲ್.

Virat Kohli and Anushka Sharma with their daughter: ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಇದೀಗ ಮಗಳ ಜೊತೆ ಟ್ರಿಪ್ ನ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಆಪ್ತರ ಜೊತೆ ವಿರುಷ್ಕ ಜೋಡಿ ಬೆಟ್ಟ ಗುಡ್ಡಗಳನ್ನು ಸುತ್ತುತ್ತಿದ್ದಾರೆ.

ಕೆಲವು ಫೋಟೋಗಳನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ಟ್ರಿಪ್ ಫೋಟೋಗಳು ಇದೀಗ ವೈರಲ್ ಆಗುತ್ತಿದೆ.

Virat Kohli and Anushka Sharma with their daughter
Image Credit: instagram

ಮಗಳ ಜೊತೆ ವಿರಾಟ್ ಅನುಷ್ಕಾ ಟ್ರಿಪ್
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ. ಈ ಹಿಂದೆ ಈ ಜೋಡಿ ಉತ್ತರಾಖಂಡ್ ರಿಷಿಕೇಶ (Uttarakhand Rishikesh) ದಲ್ಲಿರುವ ಆಶ್ರಮವೊಂದಕ್ಕೆ ಭೇಟಿ ನೀಡಿದ್ದರು.

ಆಸ್ಟ್ರೇಲಿಯಾ ವಿರುದ್ದದ ನಾಲ್ಕು ಟೆಸ್ಟ್ ಸಿರೀಸ್ ಆರಂಭಕ್ಕೂ ಮುನ್ನ ವಿರಾಕ್ ಕೊಹ್ಲಿ ತಮ ಪತ್ನಿ ಅನುಷ್ಕಾ ಜೊತೆ ದೇವಸ್ಥಾನಕ್ಕೆ ಭೇಟಿ ಮಾಡಿದ್ದಾರೆ. ಅಲ್ಲಿಂದ ಹೊರಟ ದಂಪತಿ ತಮ್ಮ ಪುತ್ರಿ ಜೊತೆ ದಟ್ಟ ಕಾಡಿನ ನಡುವೆ ಟ್ರೆಕಿಂಗ್ ಮಾಡಿದ್ದಾರೆ.

Virak Kohli visits temple with wife Anushka ahead of four-Test series against Australia
Image Credit: instagram

ರಿಷಿಕೇಶ್ ನಲ್ಲಿ ದಯಾನಂದ ಮಹಾರಾಜಾ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರು. ಈ ಸ್ಟಾರ್ ದಂಪತಿಯ ಫೋಟೋಗಳು ಬಾರಿ ವೈರಲ್ ಆಗಿದ್ದವು.

Join Nadunudi News WhatsApp Group

ಇದೀಗ ಮತ್ತೆ ವಿರುಷ್ಕ ಜೋಡಿ ತಮ್ಮ ಮಗಳು ವಮಿಕ ಜೊತೆ ಟ್ರೆಕಿಂಗ್ ಮಾಡುತ್ತಿದ್ದಾರೆ. ಟ್ರೆಕಿಂಗ್ ನ ಕೆಲವು ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Anushka Sharma and Virat Kohli couple visited temples with their daughter
Image Credit: instagram

ಮಗಳು ವಮಿಕ ಮುಖ ತೋರಿಸಿ ಎಂದ ನೆಟ್ಟಿಗರು
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಅವರಿಗೆ ವಮಿಕ (Vamika) ಎನ್ನುವ ಮುದ್ದಾದ ಮಗಳಿದ್ದಾಳೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವಮಿಕ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರು. ಆದರೆ ಯಾವ ಪೋಟೋಗಳಲ್ಲೂ ಕೂಡ ಮಗಳ ಮುಖವನ್ನು ರಿವೀಲ್ ಮಾಡಿಲ್ಲ.

ಅದೇ ರೀತಿ ಈ ಬಾರಿ ಕೂಡ ಟ್ರೆಕಿಂಗ್ ಗೆ ಹೋದಾಗ ಮಗಳ ಜೊತೆಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಈಗಿನ ಪೋಟೋಗಳಲ್ಲೂ ಕೂಡ ಮಗಳ ಮುಖವನ್ನು ವಿರುಷ್ಕ ಜೋಡಿ ತೋರಿಸಿಲ್ಲ. ಹಾಗಾಗಿ ನೆಟ್ಟಿಗರು ಮಗಳ ಮುಖವನ್ನು ತೋರಿಸಿ ಎಂದು ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group